Last Updated:
CJP Protest: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಾಳೆ ಸಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ಆದರೆ ನಾಳಿನ ಸಿಜೆಪಿ ಪ್ರತಿಭಟನೆಯಲ್ಲಿ ಮುಸ್ಲಿಮರು ಭಾಗಿಯಾಗದಂತೆ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಕರೆ ನೀಡಿದ್ದಾರೆ.
ದೆಹಲಿ: ಎಸ್ಐಆರ್ (SIR) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CEC Gyanesh Kumar) ರಾಜೀನಾಮೆಗೆ ಆಗ್ರಹಿಸಿ ನಾಳೆ ಸಿಜೆಪಿ ಬೃಹತ್ ಪ್ರತಿಭಟನೆ (CJP Protest) ನಡೆಸಲಿದೆ. ದೆಹಲಿಯ (Delhi) ಜಂತರ್ ಮಂತರ್ನಲ್ಲಿ (Jantar Mantar) ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ರೈತಸಂಘ ಸೇರಿದಂತೆ ಹಲವು ಸಂಘಟನೆಗಳು, ಎಡಪಂಥೀಯ ಚಿಂತಕರು, ಮುಸ್ಲಿಂ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ. ಆದರೆ ನಾಳಿನ ಸಿಜೆಪಿ ಪ್ರತಿಭಟನೆಯಲ್ಲಿ ಮುಸ್ಲಿಮರು (Muslims) ಭಾಗಿಯಾಗದಂತೆ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ (All India Imam Organization) ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ (Dr. Umer Ahmed Ilyasi) ಕರೆ ನೀಡಿದ್ದಾರೆ.
ಐಎಎನ್ಎಸ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲಾ ಮುಸ್ಲಿಮರಿಗೆ, ವಿಶೇಷವಾಗಿ ಮಸೀದಿಗಳ ಇಮಾಮರಿಗೆ ಒಂದು ಮನವಿ ಮತ್ತು ವಿನಂತಿ ಮಾಡುತ್ತಿದ್ದೇನೆ. ಈಗ ದೇಶದಲ್ಲಿ ಪರಿಸ್ಥಿತಿ ಹೇಗಿದೆ ಎಂದು ನಿಮಗೆ ಗೊತ್ತಿದೆ. ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ದಾರಿ ತಪ್ಪಿಸಿ ನಮ್ಮ ದೇಶದ ಶಾಂತಿ-ಸೌಹಾರ್ದವನ್ನು ಕೆಡಿಸಲು ಬಯಸುತ್ತಿವೆ. ಜನರನ್ನು ದಾರಿ ತಪ್ಪಿಸಿ ದೇಶದ ವಾತಾವರಣವನ್ನು ಹಾಳುಮಾಡಲು ದೊಡ್ಡ ಸಂಚು ರೂಪುಗೊಳ್ಳುತ್ತಿದೆ ಎಂದಿದ್ದಾರೆ.
ನಾನು ಎಲ್ಲಾ ಮುಸ್ಲಿಮರಿಗೆ ಹೇಳಲು ಬಯಸುತ್ತೇನೆ. ಅಕ್ಟೋಬರ್ 10ನೇ ತಾರೀಖು ಪ್ರತಿಭಟನೆಯಲ್ಲಿ ಭಾಗವಹಿಸಲು ಕರೆ ನೀಡಿರುವ ರಾಜಕೀಯ ಪಕ್ಷಗಳು, ಮತ್ತು ಸರ್ಕಾರದ ವಿರುದ್ಧ ಜನರನ್ನು ಕರೆಸಿಕೊಂಡಿರುವ ರೀತಿ… ನಾವು ಬಳಸಿಕೊಳ್ಳಲ್ಪಡುವ ವಸ್ತುಗಳಲ್ಲ. ಇಂದಿನವರೆಗೂ ನಮ್ಮ ಮುಸ್ಲಿಮರನ್ನು ಹೀಗೆಯೇ ಬಳಸಿಕೊಳ್ಳಲಾಗಿದೆ.
ಇದು ಅತ್ಯಂತ ಧೈರ್ಯದಿಂದ ಕೆಲಸ ಮಾಡಬೇಕಾದ ಸಮಯ. ಭಾವೋದ್ರೇಕದಲ್ಲಿ ತೆಗೆದುಕೊಳ್ಳುವ ಯಾವ ನಿರ್ಧಾರವೂ ಸರಿಯಾಗಿರುವುದಿಲ್ಲ. ಧೈರ್ಯದಿಂದ ಕೆಲಸ ಮಾಡಿ; ಧೈರ್ಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಒಳ್ಳೆಯದು. ಇಲ್ಲಿಯವರೆಗೂ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಹೀಗೆಯೇ ಬಳಸಿಕೊಂಡಿವೆ. ಹಿಂದಿನ ಪ್ರತಿಭಟನೆಗಳ ಸಮಯದಲ್ಲೂ ನಾನು ಇದೇ ಮನವಿ ಮಾಡಿದ್ದೆ. ಅನೇಕರು ಒಪ್ಪಿಕೊಂಡರು; ಒಪ್ಪದೇ ಹೋದವರು ಇಂದಿಗೂ ಜೈಲಿನಲ್ಲಿದ್ದಾರೆ. ಅವರ ಇಡೀ ಕುಟುಂಬ ಅಳುತ್ತಿದೆ. ಅವರಿಗೆ ಜಾಮೀನು ಕೊಡಿಸುವವರು ಯಾರೂ ಇಲ್ಲ ಎಂದಿದ್ದಾರೆ.
🚨 🇮🇳 BIG BREAKING: CHIEF IMAM of All India Imam Organisation Urges Muslims to Stay Away from October 10 Protest, Calls on the Nation to Unite Against Foreign Forces Seeking to Destabilise India
The Time has come for our country to be United Once again against those who even dares to lock their eyes on our sovereignty.— THEINTEL24X7 (@THEIntel24x7) October 9, 2026
ನಾನು ಎಲ್ಲಾ ಮುಸ್ಲಿಮರಿಗೆ ಹೇಳಲು ಬಯಸುತ್ತೇನೆ, ಯಾವುದೇ ರಾಜಕೀಯ ಪಕ್ಷದ ಬೆರಗಿನಲ್ಲಿ ಸಿಲುಕಬೇಡಿ, ಈ ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ. ಇದರಿಂದ ನಮಗೆ ಯಾವುದೇ ಲಾಭವಿಲ್ಲ. ಆ ರಾಜಕೀಯ ಪಕ್ಷಗಳು ನಮ್ಮನ್ನು ಬಳಸಿಕೊಂಡು ತಮ್ಮ ಲಾಭ ಪಡೆಯಲು ಬಯಸುತ್ತಿವೆ. ನೀವು ಹೋಗಬಾರದು, ನಿಮ್ಮ ಮಕ್ಕಳನ್ನೂ ಕಳುಹಿಸಬಾರದು. ಅನೇಕರು ಕೇವಲ ನೋಡಿ ಬರೋಣ ಎಂದು ಹೋದರು, ಅಥವಾ ಹೋಗುತ್ತಾರೆ; ನಂತರ ಅಲ್ಲೇ ಸಿಕ್ಕಿಬೀಳುತ್ತಾರೆ ಎಂದಿದ್ದಾರೆ.
ದೆಹಲಿಯಲ್ಲಿ ಈಗ 144ನೇ ಕಲಂ ಜಾರಿಯಲ್ಲಿದೆ ಎಂದು ನಿಮಗೆ ಗೊತ್ತಿದೆ. ಈ ಪ್ರತಿಭಟನೆಯಲ್ಲಿ ಬಂಧಿತರಾಗುವವರ ಮೇಲೆ ಎಷ್ಟು ಕಲಂಗಳು ಹಾಕಲಾಗುತ್ತವೆ ಎಂದರೆ ಅವರಿಗೆ ಜಾಮೀನು ಸಿಗುವುದಿಲ್ಲ. ಅವರು ಸಿಕ್ಕಿಹಾಕಿಕೊಳ್ಳುತ್ತಾರೆ, ತಾವೇ ನಾಶವಾಗುತ್ತಾರೆ, ತಮ್ಮ ಕುಟುಂಬವನ್ನೂ ನಾಶಮಾಡುತ್ತಾರೆ. ಆದ್ದರಿಂದ ನಾನು ಎಲ್ಲಾ ಇಮಾಮರನ್ನು ವಿನಂತಿಸುತ್ತೇನೆ: ಇಂದು ನಿಮ್ಮ ಮಸೀದಿಗಳಿಂದ ಘೋಷಣೆ ಮಾಡಿ, ಎಲ್ಲಾ ಮುಸ್ಲಿಮರನ್ನು ತಡೆಯಿರಿ, ಯಾವುದೇ ರೀತಿಯ ಪ್ರತಿಭಟನೆಯಲ್ಲಿ ನಾವು ಭಾಗವಹಿಸಬಾರದು ಎಂದು ಹೇಳಿ ಎಂದಿದ್ದಾರೆ.
ಈಗಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ; ಪರಿಸ್ಥಿತಿ ಕೆಡಬಹುದು. ದೇಶದ ವಾತಾವರಣವನ್ನು ಹಾಳುಮಾಡಲು ಬಯಸುವ ದೇಶವಿರೋಧಿ ಶಕ್ತಿಗಳು ಸಕ್ರಿಯವಾಗಿವೆ. ಆದ್ದರಿಂದ ಖುದಾ ಹೆಸರಿನಲ್ಲಿ ನಾನು ಮತ್ತೆ ಎಲ್ಲಾ ಮುಸ್ಲಿಮರನ್ನು ವಿನಂತಿಸುತ್ತೇನೆ: ನೀವು ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಅಂತ ಮನವಿ ಮಾಡಿದ್ದಾರೆ.
ಎರಡನೆಯದು, ಸಾಮಾಜಿಕ ಮಾಧ್ಯಮದಲ್ಲೂ ಗಲಭೆ ಹುಟ್ಟಿಸುವ ಅಥವಾ ದೇಶದ ವಾತಾವರಣವನ್ನು ಕೆಡಿಸುವ ಯಾವುದೇ ಸಂದೇಶವನ್ನು ಶೇರ್ ಮಾಡಬೇಡಿ. ನೀವು ಈ ಪ್ರತಿಭಟನೆಯ ಭಾಗವಲ್ಲ; ನೀವು ಈ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದದ ಸಂಕೇತಗಳು. ಆದ್ದರಿಂದ ನಿಮ್ಮನ್ನು ಅಥವಾ ನಿಮ್ಮ ಮಕ್ಕಳನ್ನು ಯಾರಾದರೂ ಎಷ್ಟೇ ದಾರಿ ತಪ್ಪಿಸಿದರೂ, ಯಾವುದೇ ಸಂದರ್ಭದಲ್ಲೂ ಹೋಗಬೇಡಿ ಅಂತ ಡಾ. ಉಮರ್ ಅಹ್ಮದ್ ಇಲ್ಯಾಸಿ ಮನವಿ ಮಾಡಿದ್ದಾರೆ.














