Last Updated:
ಟ್ರಾವಿಸ್ ಹೆಡ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಮ್ಯಾಡಿನ್ಸನ್ 33 ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಕಡೆ ಮುಖ ಮಾಡಿದ್ರು.
ಆಸ್ಟ್ರೇಲಿಯಾದ (Australia) ಟಾಪ್ ಆರ್ಡರ್ ಬ್ಯಾಟರ್ ನಿಕ್ ಮ್ಯಾಡಿನ್ಸನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ರಾಷ್ಟ್ರೀಯ ತಂಡದಲ್ಲಿ ಆಡಲು ಚಾನ್ಸ್ ಪಡೆದಿದ್ದಾರೆ. ಸುಮಾರು 10 ವರ್ಷಗಳ ಬಿಗ್ ಗ್ಯಾಪ್ನ ನಂತರ ಟೆಸ್ಟ್ ತಂಡಕ್ಕೆ ಬಂದ ಈ ಎಡಗೈ ಬ್ಯಾಟರ್ಗೆ ಮೊದಲ ಪಂದ್ಯದಲ್ಲೇ ಓಪನಿಂಗ್ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಮೈದಾನಕ್ಕೆ ಬಂದ ನಂತರ ಅವರ ಇನ್ನಿಂಗ್ಸ್ ಎಲ್ಲರನ್ನೂ ನಿರಾಸೆಗೊಳಿಸಿದೆ.
ಡರ್ಬನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಮ್ಯಾಡಿನ್ಸನ್ 33 ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಕಡೆ ಮುಖ ಮಾಡಿದ್ರು. ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಯಾನ್ಸೆನ್ ಬೌಲಿಂಗ್ನಲ್ಲಿ ಮ್ಯಾಡಿನ್ಸನ್ ಬೌಲ್ಡ್ ಆದ್ರು. ಇದರಿಂದ ಅತ್ಯಂತ ವಿಶೇಷವೆಂದು ಭಾವಿಸಿದ್ದ ಅವರ ಟೆಸ್ಟ್ ಕಮ್ ಬ್ಯಾಕ್ ಡಕೌಟ್ನೊಂದಿಗೆ ಕೊನೆಗೊಂಡಿದೆ.
ಅನಿರೀಕ್ಷಿತವಾಗಿ ತಂಡಕ್ಕೆ ಬಂದ ಮ್ಯಾಡಿನ್ಸನ್ಗೆ ಮತ್ತೊಂದು ಪ್ರಮುಖ ಜವಾಬ್ದಾರಿಯೂ ಸಿಕ್ಕಿತು. ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಅವರನ್ನು ಈ ಪಂದ್ಯದಲ್ಲಿ ನೇರವಾಗಿ ಓಪನರ್ ಆಗಿ ಕಳುಹಿಸಲಾಯಿತು. ಆದ್ರೆ, ಟ್ರಾವಿಸ್ ಹೆಡ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸಿದ ಅವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಹೊರತುಪಡಿಸಿ, ನಿಕ್ ಮ್ಯಾಡಿನ್ಸನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಮೂರು ಟೆಸ್ಟ್ ಮತ್ತು ಆರು ಟಿ20ಐಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 27 ಮತ್ತು ಟಿ20ಐಗಳಲ್ಲಿ 45 ರನ್ ಗಳಿಸಿದ್ದಾರೆ.
ಪ್ಯಾಟ್ ಕಮ್ಮಿನ್ಸ್ (ನಾಯಕ) ಟ್ರಾವಿಸ್ ಹೆಡ್, ನಿಕ್ ಮ್ಯಾಡಿನ್ಸನ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ರೆನ್ಶಾ, ಅಲೆಕ್ಸ್ ಕ್ಯಾರಿ, ಬ್ಯೂ ವೆಬ್ಸ್ಟರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಯನ್, ಜೋಶ್ ಹೇಜಲ್ವುಡ್ ತಂಡದಲ್ಲಿದ್ದಾರೆ.














