Tamil Nadu By-Elections: ಟಿವಿಕೆ ‘ವಿಜಯ’, ಡಿಎಂಕೆ ಹೀನಾಯ ಸೋಲು! ದಳಪತಿ ಪಕ್ಷದ ಬಲ 110ಕ್ಕೆ ಏರಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಟಿವಿಕೆ ಗೆಲುವು


Last Updated:

Tamil Nadu By-Elections: ಜೋಸೆಫ್ ವಿಜಯ್ ನೇತೃತ್ವದ ಆಡಳಿತಾರೂಢ ಟಿವಿಕೆ ಪಕ್ಷಕ್ಕೆ ಮತ್ತೆ ಗೆಲುವಾಗಿದೆ. ತಮಿಳುನಾಡಿನ ಉಪಚುನಾವಣೆಯಲ್ಲಿ ಎರಡಕ್ಕೆ ಎರಡೂ ಕ್ಷೇತ್ರಗಳಲ್ಲಿ ಟಿವಿಕೆ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಧಾರಾಪುರಂ ಮತ್ತು ಮಧುರಾಂತಕಂನಲ್ಲಿ 6 ನೇ ತಾರೀಖಿನಂದು ಉಪಚುನಾವಣೆ ನಡೆದಿತ್ತು.

ಟಿವಿಕೆ ಗೆಲುವು
ಟಿವಿಕೆ ಗೆಲುವು

ತಮಿಳುನಾಡು: ಜೋಸೆಫ್ ವಿಜಯ್ (Joseph Vijay) ನೇತೃತ್ವದ ಆಡಳಿತಾರೂಢ ಟಿವಿಕೆ (TVK) ಪಕ್ಷಕ್ಕೆ ಮತ್ತೆ ಗೆಲುವಾಗಿದೆ. ತಮಿಳುನಾಡಿನ ಉಪಚುನಾವಣೆಯಲ್ಲಿ (Tamil Nadu by-elections) ಎರಡಕ್ಕೆ ಎರಡೂ ಕ್ಷೇತ್ರಗಳಲ್ಲಿ ಟಿವಿಕೆ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಧಾರಾಪುರಂ (Dharapuram) ಮತ್ತು ಮಧುರಾಂತಕಂನಲ್ಲಿ (Madhuranthakam) 6 ನೇ ತಾರೀಖಿನಂದು ಉಪಚುನಾವಣೆ ನಡೆದಿತ್ತು. ಈ ಎರಡು ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿವಿಕೆ ಅಭ್ಯರ್ಥಿಗಳಾದ ಸತ್ಯಭಾಮ (Sathyabhama) ಮತ್ತು ಮರಗತಮ್ ಕುಮಾರವೇಲ್ (Maragatham Kumaravel) ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ತಮಿಳುನಾಡಲ್ಲಿ ಟಿವಿಕೆ ಶಾಸಕರ ಬಲ 110ಕ್ಕೆ ಏರಿದೆ.

ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದಾಗ್ಯೂ, ಬಹುಮತಕ್ಕೆ ಅಗತ್ಯವಿರುವ 118 ಸ್ಥಾನಗಳನ್ನು ತಲುಪಲು ಅದು ವಿಫಲವಾಯಿತು. ಹೀಗಾಗಿ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳ ಶಾಸಕರ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಇದರ ನಂತರ, ಆರು ಎಐಎಡಿಎಂಕೆ ಶಾಸಕರು ಒಂದರ ನಂತರ ಒಂದರಂತೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ತಕ್ಷಣವೇ ಟಿವಿಕೆ ಸೇರಿದರು.

ಎರಡೂ ಕ್ಷೇತ್ರಗಳಲ್ಲಿ ಗೆದ್ದ ಟಿವಿಕೆ

ಇದರ ನಂತರ, ಚುನಾವಣಾ ಆಯೋಗವು ಧಾರಾಪುರಂ ಮತ್ತು ಮಧುರಾಂತಕಂ ಎಂಬ ಎರಡು ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆಗಳನ್ನು ಘೋಷಿಸಿತು. ಈ ಎರಡು ಕ್ಷೇತ್ರಗಳಲ್ಲಿ, ಟಿವಿಕೆ, ಡಿಎಂಕೆ, ಎಐಎಡಿಎಂಕೆ, ಎನ್‌ಡಿಎ ಮತ್ತು ಎಡಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಇದರಲ್ಲಿ, ಟಿವಿಕೆಯ ಸತ್ಯಭಾಮ ಆರಂಭದಲ್ಲಿ ಧಾರಾಪುರಂನಲ್ಲಿ ತಮ್ಮ ಗೆಲುವನ್ನು ದೃಢಪಡಿಸಿದರೆ, ಈಗ ಟಿವಿಕೆಯ ಮರಗತಂ ಕುಮಾರವೇಲ್ ಮಧುರಾಂತಕಂನಲ್ಲಿ ಗೆದ್ದಿದ್ದಾರೆ.

ಡಿಎಂಕೆ ಅಭ್ಯರ್ಥಿಯನ್ನು ಮಣಿಸಿದ ಟಿವಿಕೆ ಅಭ್ಯರ್ಥಿ

ಮಧುರಾಂತಕಂ ಉಪಚುನಾವಣೆಯಲ್ಲಿ, ಟಿವಿಕೆ ಅಭ್ಯರ್ಥಿ ಮರಗತಮ್ ಕುಮಾರವೇಲ್ ಒಟ್ಟು 66,632 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಅವರ ಎದುರಾಳಿ ಡಿಎಂಕೆ ಅಭ್ಯರ್ಥಿ ಪರಂತಮನ್‌ ಸುಮರು 18,248 ಮತಗಳಿಂದ ಸೋತಿದ್ದಾರೆ.

  • ಟಿವಿಕೆ – ಮರಗತಮ್ ಕುಮಾರವೇಲ್ – 66,632 ಮತಗಳು – ಗೆಲುವು
  • ಡಿಎಂಕೆ – ಪರಂತಮನ್  – 48,384 ಮತಗಳು – ಸೋಲು
  • ಎಐಎಡಿಎಂಕೆ – ಕನಿತಾ ಸಂಪತ್ – 43,640 ಮತಗಳು – ಸೋಲು
  • ನಟ ಜಾನಕಿರಾಮನ್ – 1,343 ಮತಗಳು – ಸೋಲು
  • ಸಿಪಿಎಂ – ಸುಗಂಧಿ – 1,152 ಮತಗಳು – ಸೋಲು
ಧಾರಾಪುರಂನಲ್ಲಿ ಸತ್ಯಭಾಮಾಗೆ ಗೆಲುವು

ಧಾರಾಪುರಂ ಉಪಚುನಾವಣೆಯಲ್ಲಿ ಟಿವಿಕೆ ಅಭ್ಯರ್ಥಿ ಸತ್ಯಬಾಮ 9,471 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಎಐಎಡಿಎಂಕೆ ತೊರೆದು ಟಿವಿಕೆ ಸೇರಿದ್ದ ಸತ್ಯಭಾಮ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ಎದುರು ಡಿಎಂಕೆಯ ಸುಕನ್ಯಾ ಮತ್ತು ಎಐಎಡಿಎಂಕೆಯ ಭಾನುಮತಿ ಸ್ಪರ್ಧಿಸಿ, ಸೋತಿದ್ದಾರೆ.

66,841 ವೋಟ್ ಪಡೆದ ಸತ್ಯಭಾಮ

ಟಿವಿಕೆ ಅಭ್ಯರ್ಥಿ ಸತ್ಯಭಾಮ ತಾರಪುರಂ ಉಪಚುನಾವಣೆಯಲ್ಲಿ ಒಟ್ಟು 66,841 ಮತಗಳನ್ನು ಪಡೆಯುವ ಮೂಲಕ ಗೆದ್ದಿದ್ದಾರೆ. ಅವರ ಎದುರಾಳಿ ಡಿಎಂಕೆ ಅಭ್ಯರ್ಥಿ ಸುಕನ್ಯಾ ಅವರಿಗಿಂತ 9,471 ಹೆಚ್ಚು ಮತಗಳನ್ನು ಸತ್ಯಭಾಮ ಪಡೆದಿದ್ದಾರೆ.

  • ಟಿವಿಕೆ – ಸತ್ಯಭಾಮ – 66841 ಮತಗಳು – ಗೆಲುವು
  • ಡಿಎಂಕೆ – ಸುಕನ್ಯಾ – 57,370 – ಮತಗಳು – ಸೋಲು
  • ಎಐಎಡಿಎಂಕೆ – ಭಾನುಮತಿ – 45,280 ಮತಗಳು – ಸೋಲು
  • ನಟಿ ಕಾರ್ತಿಕಾ – 5,273 ಮತಗಳು – ಸೋಲು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports