[ad_1]
Last Updated:
ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಸಾಧಿಸಲು ಕಂಪನಿಯ ಅಧ್ಯಯನ, ಸಾಮಾನ್ಯ ಪ್ರಶ್ನೆಗಳ ಅಭ್ಯಾಸ ಮತ್ತು ಸರಿಯಾದ ಸಿದ್ಧತೆ ಅತ್ಯಂತ ಮುಖ್ಯವಾಗಿದೆ. ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ.
ಬೆಂಗಳೂರು: ನಿಮ್ಮ ಕನಸಿನ ಕಂಪನಿಯಲ್ಲಿ (Company) ಉದ್ಯೋಗ ಸಂದರ್ಶನವನ್ನು (Job Interview) ಎದುರಿಸುವುದು ಕೆಲವೊಮ್ಮೆ ಸವಾಲಿನೆನಿಸಬಹುದು. ಆದರೆ, ಸರಿಯಾದ ಸಿದ್ಧತೆ ಮತ್ತು ಯೋಜನೆಯಿದ್ದರೆ ಯಾವುದೇ ಸಂದರ್ಶನವನ್ನು ಸುಲಭವಾಗಿ ಗೆಲ್ಲಬಹುದು. ಕಂಪನಿಯ ಬಗ್ಗೆ ಸಂಶೋಧನೆ (Research) ಮಾಡುವುದರಿಂದ ಹಿಡಿದು, ಕೊನೆಯಲ್ಲಿ ಧನ್ಯವಾದ (Thanks) ತಿಳಿಸುವವರೆಗೆ ಪ್ರತಿ ಹಂತದಲ್ಲೂ ಆತ್ಮವಿಶ್ವಾಸದಿಂದ ಇರುವುದು ಅತ್ಯಂತ ಮುಖ್ಯವಾಗಿದೆ. ಸಂದರ್ಶನಕ್ಕೆ ತೆರಳುವ ಮುನ್ನ ನೀವು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಹಂತಗಳು ಇಲ್ಲಿವೆ.
“ನಿಮ್ಮ ಬಗ್ಗೆ ತಿಳಿಸಿ” (Tell me about yourself) ಎನ್ನುವ ಪ್ರಶ್ನೆಗೆ 30ರಿಂದ 60 ಸೆಕೆಂಡ್ಗಳಲ್ಲಿ ಉತ್ತರಿಸಲು ಸಿದ್ಧರಾಗಿರಿ. ಅಲ್ಲದೆ, ಬಿಹೇವಿಯರಲ್ ಪ್ರಶ್ನೆಗಳಿಗೆ STAR (Situation, Task, Action, Result) ವಿಧಾನವನ್ನು ಬಳಸಿ.
ಸ್ನೇಹಿತರೊಂದಿಗೆ, ಕನ್ನಡಿಯ ಮುಂದೆ ಅಥವಾ AI ಟೂಲ್ಗಳ ಮೂಲಕ ಗಟ್ಟಿಯಾಗಿ ಮಾತನಾಡಿ ಅಭ್ಯಾಸ ಮಾಡಿ. ನಿಮ್ಮ ಉತ್ತರಗಳು 30 ಸೆಕೆಂಡಿನಿಂದ 2 ನಿಮಿಷದವರೆಗೆ ಇರಲಿ.
[ad_2]
Source link













