Zaheer Khan Net Worth: ನಿವೃತ್ತಿ ನಂತರವೂ ಕುಗ್ಗಿಲ್ಲ ಜಹೀರ್ ಖಾನ್ ಆದಾಯ! ಟೀಮ್ ಇಂಡಿಯಾ ಲೆಜೆಂಡರಿ ವೇಗಿಯ ಆಸ್ತಿ ಎಷ್ಟು ಕೋಟಿ ಗೊತ್ತಾ? | ಕ್ರೀಡಾ ಸುದ್ದಿ | ACTPnews

Zaheer Khan Net Worth: ನಿವೃತ್ತಿ ನಂತರವೂ ಕುಗ್ಗಿಲ್ಲ ಜಹೀರ್ ಖಾನ್ ಆದಾಯ! ಟೀಮ್ ಇಂಡಿಯಾ ಲೆಜೆಂಡರಿ ವೇಗಿಯ ಆಸ್ತಿ ಎಷ್ಟು ಕೋಟಿ ಗೊತ್ತಾ? | ಕ್ರೀಡಾ ಸುದ್ದಿ


₹241 ಕೋಟಿ ಸಂಪತ್ತಿನ ಮಾಲೀಕ ಜಹೀರ್

2000ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜಹೀರ್ ಖಾನ್, ಆರಂಭದ ದಿನಗಳಿಂದಲೇ ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು. ಆ ಬಳಿಕ ಭಾರತದ ಅತ್ಯಂತ ಯಶಸ್ವಿ ಎಡಗೈ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಮೈದಾನದಲ್ಲಿ ಅವರು ಗಳಿಸಿದ ಯಶಸ್ಸು ಅವರ ಆರ್ಥಿಕ ಗಳಿಕೆಯನ್ನೂ ಹೆಚ್ಚಿಸಿತು. ಮಾಧ್ಯಮ ವರದಿಗಳ ಪ್ರಕಾರ, 2026ರ ವೇಳೆಗೆ ಜಹೀರ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹241.53ಕೋಟಿ ಎಂದು ಅಂದಾಜಿಸಲಾಗಿದೆ. ಅವರ ಒಟ್ಟು ಸಂಪತ್ತಿನ ಅಧಿಕೃತ ಅಂಕಿ-ಅಂಶಗಳು ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದರೂ, ಕ್ರಿಕೆಟ್, ಐಪಿಎಲ್, ಕಾಮೆಂಟರಿ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ವಿವಿಧ ವ್ಯವಹಾರಗಳ ಮೂಲಕ ಅವರು ಗಳಿಸಿದ ಆದಾಯವು ಅವರನ್ನು ಭಾರತದ ಅತ್ಯಂತ ಶ್ರೀಮಂತ ಹಾಗೂ ಯಶಸ್ವಿ ಮಾಜಿ ಕ್ರಿಕೆಟಿಗರಲ್ಲಿ ಒಬ್ಬರನ್ನಾಗಿ ಮಾಡಿದೆ.

ಜಹೀರ್ ಖಾನ್ ಅವರ ಐಪಿಎಲ್ ಮತ್ತು ಬಿಸಿನೆಸ್ ಜರ್ನಿಯ ಸಂಪೂರ್ಣ ವಿವರ ಇಲ್ಲಿದೆ

* 2008 (RCB): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇವರನ್ನು ₹1.8 ಕೋಟಿಗೆ ಖರೀದಿಸಿತು.

* 2009 – 2010 (MI): ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಅವರಿಗೆ ವಾರ್ಷಿಕ ₹1.8 ಕೋಟಿ ಸಂಭಾವನೆ ಪಡೆದಿದ್ದರು.

* 2011-2013 (RCB): ಮತ್ತೆ ಆರ್‌ಸಿಬಿ ತಂಡಕ್ಕೆ ಮರಳಿದ ಜಹೀರ್ ಅವರ ಮೌಲ್ಯ ₹4.14 ಕೋಟಿಗೆ ಏರಿತು. ಮೂರು ವರ್ಷಗಳ ಕಾಲ ಅವರು ಇದೇ ಮೊತ್ತಕ್ಕೆ ಆಡಿದರು.

* 2014 (MI): ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ಸೇರಿಕೊಂಡಾಗ ₹2.6 ಕೋಟಿ ಪಡೆದಿದ್ದರು.

* 2015 – 2016 (Delhi Daredevils): ಡೆಲ್ಲಿ ತಂಡದ ಪರ ಆಡಿದ ಅವರು ವಾರ್ಷಿಕ ₹4 ಕೋಟಿ ಸಂಭಾವನೆ ಪಡೆದರು. ಈ ಅವಧಿಯಲ್ಲಿ ಅವರು ತಂಡದ ನಾಯಕರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

ಕೋಚ್ ಆಗಿಯೂ ಕೋಟಿ ಕೋಟಿ ಸಂಪಾದನೆ

ಕೇವಲ ಐಪಿಎಲ್ ಆಟಗಾರನಾಗಿ ಅವರ ಅಧಿಕೃತ ಆದಾಯವೇ ₹27 ಕೋಟಿಗಿಂತ ಹೆಚ್ಚಾಗಿತ್ತು. ಆದರೆ ಅವರ ಐಪಿಎಲ್ ಪಯಣ ಅಷ್ಟಕ್ಕೇ ನಿಲ್ಲಲಿಲ್ಲ. ಆಟಗಾರನಾಗಿ ನಿವೃತ್ತರಾದ ಮೇಲೆಯೂ ಜಹೀರ್ ಖಾನ್ ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದರು

* 2018 – 2022 (Mumbai Indians): ಮುಂಬೈ ಇಂಡಿಯನ್ಸ್ ತಂಡದ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಮತ್ತು ನಂತರ ‘ಹೆಡ್ ಆಫ್ ಗ್ಲೋಬಲ್ ಕ್ರಿಕೆಟ್ ಡೆವಲಪ್‌ಮೆಂಟ್’ ನಂತಹ ದೊಡ್ಡ ಹುದ್ದೆಗಳನ್ನು ನಿಭಾಯಿಸಿದರು. (ಇದರ ಸಂಬಳವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿಲ್ಲ).

* 2025(Lucknow Super Giants): ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದದಡಿ ಮೆಂಟರ್ ಆಗಿ ಸೇರಿಕೊಂಡರು. ಆದರೆ ಅವರ ಈ ಅವಧಿ ಕೇವಲ ಒಂದು ಸೀಸನ್‌ಗೆ ಸೀಮಿತವಾಯಿತು. ವರದಿಗಳ ಪ್ರಕಾರ, ಈ ಮೆಂಟರ್ ಪಾತ್ರಕ್ಕಾಗಿ ಅವರಿಗೆ ಸುಮಾರು ₹3 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ, ಆಟಗಾರ ಮತ್ತು ಕೋಚಿಂಗ್/ಮೆಂಟರ್ ಪಾತ್ರಗಳನ್ನು ಒಳಗೊಂಡು ಐಪಿಎಲ್‌ನಿಂದಲೇ ಜಹೀರ್ ಖಾನ್ ಅವರ ಒಟ್ಟು ಗಳಿಕೆ ₹35 ರಿಂದ ₹40 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಜೊತೆಗಿನ ಅವರ ಬಹಿರಂಗಪಡಿಸದ ಸಂಬಳವೂ ಸೇರಿದೆ.

ನಿವೃತ್ತಿ ನಂತರವೂ ಕುಗ್ಗದ ಬ್ರ್ಯಾಂಡ್ ಮೌಲ್ಯ

ಜಹೀರ್ ಖಾನ್ BalleBaazi.com, Ivara, Dabur, Nike, JW Marriott, Sharekhan, Rario ಮತ್ತು Asus ನಂತಹ ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ಟ್-ಅಪ್ ಹಾಗೂ ಉದ್ಯಮಗಳು

ಜಹೀರ್ ಖಾನ್ ಫಿಟ್‌ನೆಸ್‌ಗೆ ಸಂಬಂಧಿಸಿದ ಎರಡು ಉದ್ಯಮಗಳ ಸಹ-ಸ್ಥಾಪಕರಾಗಿದ್ದಾರೆ, ಅದರಲ್ಲಿ ‘ಸ್ಟೆಪ್‌ಸೆಟ್ ಗೋ’ (StepSetGo) ಪ್ರಮುಖವಾದುದು. ಇದರ ಜೊತೆಗೆ, ಮುಂಬೈನಲ್ಲಿ ಅವರು ‘ಜಹೀರ್ ಖಾನ್ಸ್ ಡೈನ್ ಫೈನ್’ (Zaheer Khan’s Dine Fine) ಹೆಸರಿನ ಐಷಾರಾಮಿ ರೆಸ್ಟೋರೆಂಟ್‌ ಅನ್ನು ಸಹ ನಡೆಸುತ್ತಿದ್ದಾರೆ.

ಜಹೀರ್ ಖಾನ್ ಆಸ್ತಿ ಮತ್ತು ಕಾರುಗಳ ಸಂಗ್ರಹ

ಐಷಾರಾಮಿ ಮನೆ: 2025ರಲ್ಲಿ ಜಹೀರ್ ಖಾನ್ ಮತ್ತು ಅವರ ಪತ್ನಿ, ನಟಿ ಸಾಗರಿಕಾ ಘಾಟ್ಗೆ ಮುಂಬೈನ ಪರೆಲ್ ಪ್ರದೇಶದಲ್ಲಿ ಸುಮಾರು ₹11 ಕೋಟಿ ಮೌಲ್ಯದ ಅತ್ಯಂತ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ವರದಿಗಳ ಪ್ರಕಾರ,2026ರಲ್ಲಿ ತಮ್ಮ ಮೊದಲ ಮಗುವಿನ ಜನನದ ನಂತರ ಈ ದಂಪತಿ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.

ಕಾರುಗಳ ಕಲೆಕ್ಷನ್: ಇವರ ಗ್ಯಾರೇಜ್‌ನಲ್ಲಿ BMW 5 ಸೀರೀಸ್, ನಿಸ್ಸಾನ್ ಎಕ್ಸ್-ಟ್ರಯಲ್, ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್, ಹೋಂಡಾ ಅಕಾರ್ಡ್, ಟೊಯೋಟಾ ಫಾರ್ಚುನರ್, ಆಡಿ A8 ಮತ್ತು ಮರ್ಸಿಡಿಸ್ ಬೆಂಜ್ ಇ-ಕ್ಲಾಸ್‌ನಂತಹ ವಿಶ್ವದ ಅತ್ಯಾಧುನಿಕ ಹಾಗೂ ದುಬಾರಿ ಕಾರುಗಳಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed