Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ


Last Updated:

ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ.

ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ
ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ

ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ, ಈಗಲೂ ಇಂತಹ ವ್ಯಕ್ತಿಗಳು ಇರ್ತಾರಾ ಅಂತ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನ ವ್ಯಕ್ತಿಯೊಬ್ಬರು ಪ್ರಾಮಾಣಿಕತೆಗೆ ಅಪೂರ್ವ ಉದಾಹರಣೆಯಾಗಿದ್ದಾರೆ. ಭೂದಾ ಕಾಲೋನಿ ನಿವಾಸಿ ಚಿತ್ತರಂಜನ್ ಸರ್ಕಾರ್ ಎಂಬುವರಿಗೆ ತಪ್ಪಾಗಿ ಸರ್ಕಾರಿ ಪಡಿತರ ಚೀಟಿ (Ration card) ಲಭ್ಯವಾಗಿತ್ತಂತೆ. ಆದರೆ ಅದನ್ನು ರದ್ದು ಮಾಡಿ ಅಂತ ತಿಂಗಳಾನುಗಟ್ಟಲೇ ಸರ್ಕಾರಿ ಕಚೇರಿಗಳ ಸುತ್ತು ಹಾಕುತ್ತಿದ್ದಾರೆ.

ಹೌದು, ಮೂರು ಎಕರೆ ಜಮೀನು, ಟ್ರ್ಯಾಕ್ಟರ್, ಶಾಶ್ವತ ಮನೆ, ಮೋಟಾರ್ ಸೈಕಲ್, ಕೂಲರ್ ಮುಂತಾದ ಸೌಲಭ್ಯಗಳಿವೆ ಎನ್ನುತ್ತಾರೆ ಚಿತ್ತರಂಜನ್ ಸರ್ಕಾರ್. ಈ ಆಸ್ತಿಗಳ ಕಾರಣದಿಂದಾಗಿ ಅವರು ಪಡಿತರ ಚೀಟಿಗೆ ಅರ್ಹರಾಗಿರುವುದಿಲ್ಲ. ಹೀಗಿದ್ದರೂ ಅವರ ಹೆಸರಿಗೆ ಪಡಿತರ ಚೀಟಿ ನೀಡಲಾಗಿದೆ. ಈ ಕಾರಣದಿಂದ ಚಿತ್ತರಂಜನ್ ಅವರು ಪಡಿತರ ಚೀಟಿ ಸೌಲಭ್ಯವನ್ನು ಪಡೆಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಜಿಲ್ಲಾಆಹಾರ ಸರಬರಾಜು ಕಚೇರಿಯಲ್ಲಿ ಅವರ ದೂರು ಆಲಿಸುತ್ತಿಲ್ಲವಂತೆ.

ಈ ಕಾರಣದಿಂದಲೇ ಕಳೆದ ಶನಿವಾರ ಚಿತ್ತರಂಜನ್ ಅವರು, ಸಮಾಧಾನ್ ದಿವಸ್ (ದೂರು ಪರಿಹಾರ ದಿನ) ಸಂದರ್ಭದಲ್ಲಿ ನೇರ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಚಿತ್ತರಂಜನ್ ಅವರ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಹಾಗೂ ಇತರೇ ಅಧಿಕಾರಿಗಳ ಅವರ ಪ್ರಾಮಾಣಿಕತೆ ಕಂಡು ಬೆರಗಾಗಿದ್ದರು, ಅಲ್ಲದೇ ಜನರ ಮನ ಗೆದಿದ್ದರು. ಈ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ತರಂಜನ್ ಪ್ರಾಮಾಣಿಕತೆಗೆ ನೈಜ ಉದಾಹರಣೆ ಎಂದು ಹಾಡಿಹೊಗಳಿದ್ದಾರೆ.

ನಕಲಿ ದಾಖಲೆಗಳಿಂದ ಸರ್ಕಾರದ ಆದಾಯದ ನಷ್ಟ

ಇನ್ನು, ಅರ್ಹತಾ ಷರತ್ತುಗಳನ್ನು ಪೂರೈಸದಿದ್ದಾಗ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನೇಕ ಬಾರಿ ಜನರು ನಕಲಿ ದಾಖಲೆಗಳನ್ನು ಆಶ್ರಯಿಸುತ್ತಾರೆ. ಆದಾಯ ಪ್ರಮಾಣಪತ್ರ ಮತ್ತು ನಿವಾಸ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳನ್ನು ತಹಶೀಲ್ದಾರ್ ಮಟ್ಟದಲ್ಲಿ ಪಡೆದುಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರದಿಂದಾಗಿ, ಆರ್ಥಿಕವಾಗಿ ಶ್ರೀಮಂತ ಜನರು ಸಹ ಈ ಸೌಲಭ್ಯಗಳ ಬಡವರಿಗೆ ಸಿಗದಂತೆ ಮಾಡಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಖಜಾನೆಗೆ ಭಾರೀ ವಂಚನೆಯಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed