[ad_1]
Last Updated:
ಕಮಲ್ ಹಾಸನ್ (Kamal Haasan) ಮತ್ತು ಶಂಕರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಇಂಡಿಯನ್ ಸರಣಿಯ ಮೂರನೇ ಭಾಗ ಇಂಡಿಯನ್ 3 (Indian 3) ಸಿನಿಮಾ ಮತ್ತೆ ಸುದ್ದಿಯಲ್ಲಿದೆ.
ಕಮಲ್ ಹಾಸನ್ (Kamal Haasan) ಮತ್ತು ಶಂಕರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಇಂಡಿಯನ್ ಸರಣಿಯ ಮೂರನೇ ಭಾಗ ಇಂಡಿಯನ್ 3 (Indian 3) ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಹಲವು ತಿಂಗಳುಗಳಿಂದ ಚಿತ್ರದ ಭವಿಷ್ಯದ ಬಗ್ಗೆ ಅನುಮಾನಗಳು ಮೂಡಿದ್ದ ಬೆನ್ನಲ್ಲೇ, ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಗುರುವಾರ ಹೊಸ ಪೋಸ್ಟರ್ ಹಂಚಿಕೊಂಡು ಚಿತ್ರಕ್ಕೆ ಮತ್ತೆ ಚಾಲನೆ ನೀಡುವ ಸುಳಿವು ನೀಡಿದೆ. ಇದರಿಂದಾಗಿ ಕಮಲ್ ಹಾಸನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇಂಡಿಯನ್ 2 ಬಿಡುಗಡೆಯಾಗಿ ಎರಡು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಇಂಡಿಯನ್ 3 ಬಗ್ಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಸುಮಾರು ಎರಡು ವರ್ಷಗಳ ಅನಿಶ್ಚಿತತೆಯ ಬಳಿಕ ಇದೀಗ ಚಿತ್ರವನ್ನು ಮತ್ತೆ ನಿರ್ಮಾಣ ಹಂತಕ್ಕೆ ಕೊಂಡೊಯ್ಯಲು ಚಿತ್ರತಂಡ ಸಿದ್ಧವಾಗಿರುವಂತೆ ಕಾಣುತ್ತಿದೆ.
ಲೈಕಾ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ ವಾರ್ ಮೋಡ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ದೊಡ್ಡ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿರುವ ದೃಶ್ಯದ ಪೋಸ್ಟರ್ ಗಮನ ಸೆಳೆಯುತ್ತಿದ್ದು, ಸೇನಾಪತಿ ಪಾತ್ರದ ಮತ್ತೊಂದು ಅಧ್ಯಾಯಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎಂಬ ಸೂಚನೆ ನೀಡಿದೆ.
1996ರಲ್ಲಿ ಬಿಡುಗಡೆಯಾದ ಇಂಡಿಯನ್ ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಕಮಲ್ ಹಾಸನ್ ಅಭಿನಯದ ಸೇನಾಪತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಹಲವು ವರ್ಷಗಳ ಬಳಿಕ ಈ ಕಥೆಯನ್ನು ಮುಂದುವರಿಸುವ ಪ್ರಯತ್ನವಾಗಿ ಇಂಡಿಯನ್ 2 ನಿರ್ಮಾಣವಾಗಿತ್ತು.
2024ರಲ್ಲಿ ಇಂಡಿಯನ್ 2 ಸಿನಿಮಾ ಬಿಡುಗಡೆಯಾಗಿತ್ತು. ಸುಮಾರು 28 ವರ್ಷಗಳ ಬಳಿಕ ಕಮಲ್ ಹಾಸನ್ ಮತ್ತು ಶಂಕರ್ ಮತ್ತೆ ಒಂದಾಗಿದ್ದರಿಂದ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಬಿಡುಗಡೆಯ ಬಳಿಕ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗಲಿಲ್ಲ.
ಇಂಡಿಯನ್ 2 ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ‘ಇಂಡಿಯನ್ 3’ ಬಿಡುಗಡೆಯಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಚಿತ್ರ ಈಗಾಗಲೇ ನಿರ್ಮಾಣದ ಪ್ರಮುಖ ಹಂತಗಳನ್ನು ದಾಟಿದ್ದರೂ, ಮುಂದಿನ ಕೆಲಸಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಈ ಕಾರಣದಿಂದಾಗಿ ಇಂಡಿಯನ್ 3 ಅನ್ನು ಕೈಬಿಡಬಹುದು ಎಂಬ ಮಾತುಗಳು ಕೂಡ ಚಿತ್ರರಂಗದಲ್ಲಿ ಹರಿದಾಡಿದ್ದವು. ಇದೀಗ ಲೈಕಾ ಪ್ರೊಡಕ್ಷನ್ಸ್ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವುದು ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುವ ಸೂಚನೆಯಾಗಿದೆ.
ಸೇನಾಪತಿ ಪಾತ್ರದಲ್ಲಿ ಕಮಲ್ ಹಾಸನ್ ಮತ್ತೆ ಕಾಣಿಸಿಕೊಳ್ಳಲಿರುವುದು ಇಂಡಿಯನ್ 3 ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ಸದ್ಯ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತೆ ಹೆಚ್ಚಿಸಿವೆ. ಮುಂದಿನ ದಿನಗಳಲ್ಲಿ ಚಿತ್ರದ ಚಿತ್ರೀಕರಣ, ಬಿಡುಗಡೆ ದಿನಾಂಕ ಸೇರಿದಂತೆ ಮತ್ತಷ್ಟು ಅಧಿಕೃತ ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ.
[ad_2]
Source link














