Bhuvneshwar Kumar: ಅಗರ್ಕರ್​ ಹೊರಬೀಳುತ್ತಿದ್ದಂತೆ ಸ್ವಿಂಗ್​ ಕಿಂಗ್ ಕಮ್​ಬ್ಯಾಕ್! ಭುವನೇಶ್ವರ್ ಕುಮಾರ್ ಆಯ್ಕೆ ಹಿಂದಿದ್ದಾರೆ ವಿಶ್ವಕಪ್ ಹೀರೋ! | ಕ್ರೀಡಾ ಸುದ್ದಿ | ACTPnews

ಭುವನೇಶ್ವರ್ ಕುಮಾರ್

[ad_1]

Last Updated:

ಕಳೆದ ಎರಡು ವರ್ಷಗಳಿಂದ ಐಪಿಎಲ್ ಹಾಗೂ ದೇಶಿ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಭುವಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಆದರೆ ಭಾರತ ತಂಡದ ನಿರ್ಗಮಿತ ಮುಖ್ಯ ಆಯ್ಕೆಗಾರ (Chief Selector) ಅಜಿತ್ ಅಗರ್ಕರ್ ಅವರಿಗೆ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಟಿ20 ತಂಡಕ್ಕೆ ಸೇರಿಸಿಕೊಳ್ಳಲು ಒಲವು ತೋರುತ್ತಿರಲಿಲ್ಲ.

 ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್ (Bhuvneshwar Kumar) ಭಾರತ ತಂಡಕ್ಕೆ ಮರಳಬೇಕೆಂಬ ಕೂಡ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಆಯ್ಕೆ ಸಮಿತಿ ಅವರ ವಯಸ್ಸಿನ ಕಾರಣದಿಂದ ಕಡೆಗಣಿಸುತ್ತಲೇ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಐಪಿಎಲ್ ಹಾಗೂ ದೇಶಿ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಭುವಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಆದರೆ ಭಾರತ ತಂಡದ ನಿರ್ಗಮಿತ ಮುಖ್ಯ ಆಯ್ಕೆಗಾರ (Chief Selector) ಅಜಿತ್ ಅಗರ್ಕರ್ ಅವರಿಗೆ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಟಿ20 ತಂಡಕ್ಕೆ ಸೇರಿಸಿಕೊಳ್ಳಲು ಒಲವಿರಲಿಲ್ಲ. ಪಿಟಿಐ (PTI) ವರದಿಯ ಪ್ರಕಾರ, ಐಪಿಎಲ್‌ನಲ್ಲಿ ಭುವಿ ಅದ್ಭುತ ಪ್ರದರ್ಶನ ನೀಡಿದ್ದರೂ, ಅಗರ್ಕರ್ ಅವರು ಹಿರಿಯ ಆಟಗಾರರ ಬದಲಿಗೆ ಯುವ ತಾರೆಗಳಿಗೆ ಮಣೆ ಹಾಕುವ ಯೋಚನೆ ಹೊಂದಿದ್ದರು. ಹೀಗಾಗಿ ಅವರು ಭುವಿ ಆಯ್ಕೆಯನ್ನು ತಡೆಹಿಡಿದಿದ್ದರು.

ಅಗರ್ಕರ್ ಔಟ್ , ಭುವಿ ಇನ್

ಬಿಸಿಸಿಐ (BCCI) ಆಯ್ಕೆ ಸಮಿತಿಯಲ್ಲಿ ಅಜಿತ್ ಅಗರ್ಕರ್ ಅವರ ಸ್ಥಾನವನ್ನು ಭರ್ತಿ ಮಾಡಲು ಹೊಸ ಉದ್ಯೋಗ ಪ್ರಕಟಣೆಯನ್ನು ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಭುವನೇಶ್ವರ್ ಕುಮಾರ್ ಅವರನ್ನು ನ್ಯೂಜಿಲೆಂಡ್ ಪ್ರವಾಸದ ಐದು ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು. ಅಗರ್ಕರ್ ಅವರ ನಿರ್ಗಮನವೇ ಭುವಿ ಅವರ ಕಮ್‌ಬ್ಯಾಕ್‌ಗೆ ನೇರ ಕಾರಣವಾಯಿತು.

ಆರ್‌ಪಿ ಸಿಂಗ್ ಅವರ ಬೆಂಬಲ

2007ರ ಟಿ20 ವಿಶ್ವಕಪ್ ಹೀರೋ ಹಾಗೂ  ಕೇಂದ್ರ ವಲಯದ (Central Zone) ಆಯ್ಕೆಗಾರರಾದ ಆರ್.ಪಿ. ಸಿಂಗ್ ಅವರು ತಮ್ಮದೇ ಉತ್ತರ ಪ್ರದೇಶದವರಾದ ಭುವನೇಶ್ವರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಒಲವು ತೋರಿದ್ದರು. ಆದರೆ 2023 ರಿಂದ 2026 ರವರೆಗೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಸ್ಥರಾಗಿದ್ದ ಅಗರ್ಕರ್ ಅವರಿಂದ ಇದಕ್ಕೆ ಸರಿಯಾದ ಬೆಂಬಲ ಸಿಕ್ಕಿರಲಿಲ್ಲ.

ಅಗರ್ಕರ್ ನಿರ್ಗಮನದ ನಂತರ ಮಧ್ಯಂತರ ಅಧ್ಯಕ್ಷರಾದ ಪ್ರಗ್ಯಾನ್ ಓಜಾ ಮತ್ತು ಇತರ ಆಯ್ಕೆಗಾರರು ಭುವನೇಶ್ವರ್ ಅವರ ಅನುಭವವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದರು. ಅದರಲ್ಲೂ ಪ್ರಮುಖವಾಗಿ ಈ ಸರಣಿಗೆ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಅಲಭ್ಯರಾಗಿರುವುದರಿಂದ ಭುವಿ ಅವರ ಅನುಭವ ತಂಡಕ್ಕೆ ಅಗತ್ಯವಾಗಿತ್ತು.

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತವಾಗಿ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು 2025 ರ ಸೀಸನ್‌ನಲ್ಲಿ 17 ವಿಕೆಟ್ ಹಾಗೂ 2026 ರ ಇತ್ತೀಚಿನ ಸೀಸನ್‌ನಲ್ಲಿ ಬರೋಬ್ಬರಿ 28 ವಿಕೆಟ್ ಕಬಳಿಸಿ ಮಿಂಚಿದ್ದರು. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಅವರ ಸಾಮರ್ಥ್ಯವು ಭಾರತ ತಂಡದ ಪವರ್‌ಪ್ಲೇ ಬೌಲಿಂಗ್ ಕೊರತೆಯನ್ನು ನೀಗಿಸಲಿದೆ. ಅಲ್ಲದೆ ಕೊನೆಯ ನಿರ್ಣಾಯಕ ಓವರ್​ಗಳಲ್ಲೂ ಭುವಿ ಅತ್ಯುತ್ತಮ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವಿದೆ.

ಬಿಸಿಸಿಐ ಮತ್ತು ಅಗರ್ಕರ್ ಬಿಕ್ಕಟ್ಟು

ಬಿಸಿಸಿಐ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಅಜಿತ್ ಅಗರ್ಕರ್ ಅವರ ಒಪ್ಪಂದವು ಈ ತಿಂಗಳು ಕೊನೆಗೊಂಡಿದೆ. ಅವರು ರೋಹಿತ್ ಶರ್ಮಾ ಅವರಿಗೆ ಆಯ್ಕೆಗಾರರ ನಿರ್ಧಾರಗಳ ಕುರಿತು ಪ್ರಗ್ಯಾನ್ ಓಜಾ ಮೂಲಕ ರವಾನಿಸಿದ್ದ ಸಂದೇಶವು ಬಿಸಿಸಿಐ ಮಂಡಳಿಗೆ ಇಷ್ಟವಾಗಿರಲಿಲ್ಲ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಕಾರಣ, ಅಗರ್ಕರ್ ತಮ್ಮ ಒಪ್ಪಂದದ ವಿಸ್ತರಣೆಯನ್ನು ಬಯಸದೆ ಹೊರನಡೆದಿದ್ದಾರೆ. ಪ್ರಸ್ತುತ ಓಝಾ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೆ ಈ ಹುದ್ದೆಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅವರ ಹೆಸರು ಮುಂಚೂಣಿಯಲ್ಲಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports