Shiva Rajkumar: ಹುಬ್ಬಳ್ಳಿಯಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಸಾರೋಟ್ ಏರಿ ಬಂದ ಸೆಂಚುರಿ ಸ್ಟಾರ್! | | ACTPnews

Shiva Rajkumar: ಹುಬ್ಬಳ್ಳಿಯಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ; ಸಾರೋಟ್ ಏರಿ ಬಂದ ಸೆಂಚುರಿ ಸ್ಟಾರ್! |


ಸಾರೋಟ್ ಅಲ್ಲಿ ಸ್ವಾಗತ

ಹುಬ್ಬಳ್ಳಿಯ ಅಪ್ಸರ ಥಿಯೇಟರ್ ಅಲ್ಲಿ ಜನ ಬೇಲ್ ಸಿನಿಮಾ ನೋಡ್ತಾ ಇದ್ದರು. ಇಂಟರ್‌ವಲ್ ಹೊತ್ತಿಗೆ ಚಿತ್ರದ ನಾಯಕ ಶಿವಣ್ಣ ಬರ್ತಾರೆ ಅಂತಲೂ ಇವರಿಗೆ ಅಂದಾಜಿತ್ತು.

ಆದರೆ, ಸಿನಿಮಾ ಇಂಟರ್‌ವಲ್‌ಗೆ ಇನ್ನು ಟೈಮ್ ಇತ್ತು. ಆಗಲೇ ಶಿವಣ್ಣ ಥಿಯೇಟರ್‌ ಹತ್ರ ಬಂದೇ ಬಿಟ್ಟರು. ಹೊರಗೆ ಬಂದು ನೋಡಿದವರಿಗೆ ಆಶ್ಚರ್ಯವು ಕಾದಿತ್ತು. ಶಿವಣ್ಣನನ್ನ ಇಲ್ಲಿ ಸಾರೋಟ್ ಮೂಲಕವೇ ಕರೆತರಲಾಗಿತ್ತು.

ಅಭಿಮಾನಿಗಳ ಅಪಾರ ಖುಷಿ

ಬೇಲ್ ಚಿತ್ರ ನೋಡಲು ಬಂದ ಜನ, ಶಿವಣ್ಣನ ಅಭಿಮಾನಿಗಳು, ಹೀಗೆ ಎಲ್ಲರೂ ಶಿವಣ್ಣನನ್ನ ಅಷ್ಟೆ ಕುತೂಹಲದಿಂದಲೇ ನೋಡಿದರು. ಅವರು ಹೇಳುವ ಮಾತುಗಳನ್ನು ಕೇಳಿದರು.

ಬೇಲ್ ಚಿತ್ರವನ್ನ ನೋಡಿದ್ರಾ ಅಂತಲೂ ಶಿವಣ್ಣ ಕೇಳಿದರು. ಅದಕ್ಕೆ ಜನ ನೋಡಿದ್ದೇವೆ ಅಂತಲೂ ಹೇಳಿದರು. ಈ ಸಮಯದಲ್ಲಿ ಡೈರೆಕ್ಟರ್ ಪವನ್ ಒಡೆಯರ್ ಕೂಡ ಮಾತನಾಡಿದರು. ತಮ್ಮ ಖುಷಿ ಏನು ಅನ್ನೋದನ್ನು ಹೇಳಿಕೊಂಡರು.

ಕಂಬಳಿ ಹೊದಿಸಿ ಸನ್ಮಾನ

ಈ ಸಮಯದಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಸನ್ಮಾನ ಮಾಡಿದರು. ಕಂಬಳಿ ಹೊದಿಸಿ ಗೌರವ ಕೊಟ್ಟರು. ಡೈರೆಕ್ಟರ್ ಪವನ್ ಒಡೆಯರ್ ಅವರಿಗೂ ಇಲ್ಲಿ ಸನ್ಮಾನ ಮಾಡಿದರು.

ಈ ಎಲ್ಲ ಸನ್ಮಾನ ಮತ್ತು ಮಾತುಗಳ ಬಳಿಕ ಶಿವಣ್ಣ ಹಾಗೂ ಪವನ್ ಒಡೆಯರ್ ಥಿಯೇಟರ್ ಒಳಗೂ ಕಾಲಿಟ್ಟರು. ಥಿಯೇಟರ್ ಅಲ್ಲಿರೋ ಜನರ ಪ್ರೀತಿಯನ್ನು ಸ್ವೀಕರಿಸಿದರು.

ಮಾಧ್ಯಮಗಳಿಗೂ ಮಾತು

ಶಿವಣ್ಣ, ಪವನ್ ಒಡೆಯರ್ ಹಾಗೂ ದೀಕ್ಷಿತ್ ಶೆಟ್ಟಿ ಚಿತ್ರದ ಕುರಿತು ಮಾಧ್ಯಮಗಳಿಗೂ ಮಾತನಾಡಿದರು. ಸಿನಿಮಾವನ್ನ ಜನ ಹೇಗೆ ಸ್ವೀಕರಿಸಿದ್ದಾರೆ ಅನ್ನೋದನ್ನು ಹೇಳಿದರು.

ಬೇಲ್ ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಇದು ರಿಲೀಸ್ ಆಗಿದೆ. ರಿಲೀಸ್ ಆದ ಮೊದಲ ದಿನವೇ ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ.

ಶಿವಣ್ಣನ ಪಾತ್ರಕ್ಕೆ ಫಿದಾ

ಶಿವರಾಜ್ ಕುಮಾರ್ ಅಭಿನಯಕ್ಕೆ ಜನ ಮನಸೋತಿದ್ದಾರೆ. ನಿವೃತ್ತ ಪೊಲೀಸ್ ಆಫೀಸರ್ ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿಯ ಮೀಸೆ ಲುಕ್ ಅನ್ನು ಬಹುವಾಗಿಯೇ ಇಷ್ಟಪಟ್ಟಿದ್ದಾರೆ.

ಚಿತ್ರದಲ್ಲಿ ಸಾಯಿ ಕುಮಾರ್, ಜಯರಾಮ್, ಶಿವಣ್ಣನ ಕಾಂಬಿನೇಷನ್‌ ಅನ್ನ ಕೂಡ ಇಷ್ಟಪಟ್ಟಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವು ಜನಕ್ಕೆ ಇಷ್ಟ ಆಗುತ್ತಿದೆ.

ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಜೋಡಿ ಇಲ್ಲಿ ಮೋಡಿ ಮಾಡಿದೆ. ನಲ್ಲ ಚಿತ್ರದ ನಾಯಕಿ ಸಂಗೀತಾ ಇಲ್ಲಿ ಗಮನ ಸೆಳೆದಿದ್ದಾರೆ.

ಸೂಪರ್ ರಮೇಶ್ ಇಂದಿರಾ

ರಮೇಶ್ ಇಂದಿರಾ ಈ ಚಿತ್ರದಲ್ಲಿ ಸೂಪರ್ ಆಗಿಯೇ ಆ್ಯಕ್ಟ್ ಮಾಡಿದ್ದಾರೆ. ಪತ್ರಕರ್ತನಾಗಿಯೇ ಇಲ್ಲಿ ಅಭಿನಯಿಸಿದ್ದಾರೆ. ಯೋಗಿ ರೆಡ್ಡಿ ಪಾತ್ರದಲ್ಲಿ ಲೂಸ್ ಮಾದ ಯೋಗಿ ಇಲ್ಲಿ ಸಖತ್ ಸ್ಕೋರ್ ಮಾಡಿದ್ದಾರೆ. ಒಟ್ಟಾರೆ, ಬೇಲ್ ಸಿನಿಮಾ ನೋಡಬಹುದಾದ ಚಿತ್ರವೇ ಆಗಿದೆ ಅಂತ ಹೇಳಬಹುದು.

-ರೇವನ್ ಪಿ.ಜೇವೂರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed