Rishabh Pant: ನ್ಯೂಜಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಬಿಸಿಸಿಐ ಮುಂದೆ ಪಂತ್ ವಿಶೇಷ ಮನವಿ! ಫಾರ್ಮ್‌ಗೆ ಮರಳಲು ಮಾಸ್ಟರ್ ಪ್ಲಾನ್ | ಕ್ರೀಡಾ ಸುದ್ದಿ | ACTPnews

ರಿಷಭ್ ಪಂತ್  (AP Photo)


Last Updated:

ಭಾರತ ಮತ್ತು ನ್ಯೂಜಿಲೆಂಡ್ ಹಿರಿಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 19 ರಿಂದ ವೆಲ್ಲಿಂಗ್‌ಟನ್‌ನಲ್ಲಿ ಆರಂಭವಾಗಲಿದೆ. ಅಂದರೆ ‘ಭಾರತ ಎ’ ಸರಣಿ ಮುಗಿದ ಸುಮಾರು 9 ದಿನಗಳ ನಂತರ ಟೆಸ್ಟ್ ಸರಣಿ ಆರಂಭವಾಗುತ್ತದೆ.

ರಿಷಭ್ ಪಂತ್  (AP Photo)
ರಿಷಭ್ ಪಂತ್ (AP Photo)

ಮುಂದಿನ ತಿಂಗಳು ಭಾರತ ತಂಡವು ನ್ಯೂಜಿಲೆಂಡ್ (India vs New Zealand) ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಪ್ರಸ್ತುತ ನಡೆಯುತ್ತಿರುವ 2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದ ಈ ಸರಣಿಯು ಭಾರತ ತಂಡಕ್ಕೆ ಅತ್ಯಂತ ಪ್ರಮುಖವಾಗಿದೆ. ಈ ಪ್ರಮುಖ ಸರಣಿಗಾಗಿ ಬಲಿಷ್ಠ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ, ಭಾರತ ತಂಡದ ಹಿರಿಯ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ವಿನಂತಿಯೊಂದನ್ನು ಮಾಡಿದ್ದಾರೆ.

ರಿಷಭ್ ಪಂತ್ ಮಾಡಿದ ವಿಶೇಷ ವಿನಂತಿ ಏನು?

ರೆವ್‌ಸ್ಪೋರ್ಟ್ಸ್‌ನ ರೋಹಿತ್ ಜುಗ್ಲಾನ್ ಅವರ ವರದಿಯ ಪ್ರಕಾರ, ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ನ್ಯೂಜಿಲೆಂಡ್‌ನಲ್ಲಿ ಕನಿಷ್ಠ ಎರಡು ‘ಭಾರತ ಎ’ (India A) ಪಂದ್ಯಗಳನ್ನು ಆಡಲು ತಮಗೆ ಅವಕಾಶ ನೀಡಬೇಕು ಎಂದು ಪಂತ್ ಬಿಸಿಸಿಐಗೆ ವಿನಂತಿಸಿದ್ದಾರೆ. ಅಕ್ಟೋಬರ್ 24 ರಿಂದ ನವೆಂಬರ್ 10 ರ ನಡುವೆ ನ್ಯೂಜಿಲೆಂಡ್‌ನಲ್ಲಿ ‘ಭಾರತ ಎ’ ಮತ್ತು ‘ನ್ಯೂಜಿಲೆಂಡ್ ಎ’ ತಂಡಗಳ ನಡುವೆ ಮೂರು ಬಹುದಿನಗಳ (ಅನಧಿಕೃತ ಟೆಸ್ಟ್) ಪಂದ್ಯಗಳ ಸರಣಿ ನಡೆಯಲಿದೆ.

ನವೆಂಬರ್ 19 ರಿಂದ ಟೆಸ್ಟ್ ಸರಣಿ ಆರಂಭ

ಇದಾದ ನಂತರ, ಭಾರತ ಮತ್ತು ನ್ಯೂಜಿಲೆಂಡ್ ಹಿರಿಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 19 ರಿಂದ ವೆಲ್ಲಿಂಗ್‌ಟನ್‌ನಲ್ಲಿ ಆರಂಭವಾಗಲಿದೆ. ಅಂದರೆ ‘ಭಾರತ ಎ’ ಸರಣಿ ಮುಗಿದ ಸುಮಾರು 9 ದಿನಗಳ ನಂತರ ಟೆಸ್ಟ್ ಸರಣಿ ಆರಂಭವಾಗುತ್ತದೆ. ಅಲ್ಲದೆ ರಿಷಭ್ ಪಂತ್‌ಗೆ ಭಾರತದ ಏಕದಿನ (ODI) ಮತ್ತು ಟಿ20 ತಂಡಗಳಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲದಿರುವುದರಿಂದ, ಅವರು ಸೀಮಿತ ಓವರ್‌ಗಳ ಸರಣಿಯ ಸಮಯದಲ್ಲಿ ಮುಂಚಿತವಾಗಿಯೇ ನ್ಯೂಜಿಲೆಂಡ್‌ಗೆ ತೆರಳಿ ‘ಭಾರತ ಎ’ ಪರವಾಗಿ ಎರಡು ಪಂದ್ಯಗಳನ್ನು ಆಡಲು ಬಯಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ನ್ಯೂಜಿಲೆಂಡ್‌ನಲ್ಲಿ ರಿಷಭ್ ಪಂತ್ ಅವರ ಹಳೆಯ ದಾಖಲೆ ಹೇಗಿದೆ?

ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಪಂತ್ ಅವರ ಈ ಹಿಂದಿನ ಪ್ರದರ್ಶನ ಅಷ್ಟೊಂದು ಆಕರ್ಷಕವಾಗಿಲ್ಲ. ಪಂತ್ ಅವರ ಒಟ್ಟಾರೆ ಟೆಸ್ಟ್ ವೃತ್ತಿಜೀವನದ ಸರಾಸರಿ (Average) 43.82 ರಷ್ಟಿದ್ದರೆ, ನ್ಯೂಜಿಲೆಂಡ್‌ನಲ್ಲಿ ಮಾತ್ರ ಅವರ ಬ್ಯಾಟಿಂಗ್ ಸರಾಸರಿ ಕೇವಲ 15 ರಷ್ಟಿದೆ. 2020ರ ಪ್ರವಾಸದಲ್ಲಿ ಆಡಿದ್ದ 2 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 60 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಪ್ರಸ್ತುತ ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿರುವ 29 ವರ್ಷದ ರಿಷಭ್ ಪಂತ್, ವಿದೇಶಿ ಮಣ್ಣಿನಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳುವುದು ತಂಡಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಟೆಸ್ಟ್ ಸರಣಿಗೂ ಮುನ್ನ ‘ಭಾರತ ಎ’ ಪರ ಪಂದ್ಯಗಳನ್ನು ಆಡುವುದರಿಂದ ಅವರಿಗೆ ಅಲ್ಲಿನ ಹವಾಮಾನ ಮತ್ತು ಪಿಚ್ ಪರಿಸ್ಥಿತಿಗೆ ಹೊಂದಿಕೊಳ್ಳಲು ಉತ್ತಮ ಅವಕಾಶ ಸಿಗಲಿದೆ.

ರಿಷಭ್ ಪಂತ್ ಅಂಕಿ ಅಂಶ

ಭಾರತದ ಪರ ಇದುವರೆಗೆ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿರುವ ರಿಷಭ್ ಪಂತ್ ಅವರು 90 ಇನ್ನಿಂಗ್ಸ್‌ಗಳಿಂದ 43.82 ರ ಸರಾಸರಿಯಲ್ಲಿ ಒಟ್ಟು 3,725 ರನ್‌ಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 74.15 ರಷ್ಟಿದೆ. ಅವರು ತಮ್ಮ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ 8 ಶತಕ ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಬಾರಿಸಿದ ಅಜೇಯ 159 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಚಚ್ಚಿದ ಭಾರತೀಯ ವಿಕೆಟ್ ಕೀಪರ್ ಆಗಿರುವ ಪಂತ್ ಒಟ್ಟು 102 ಸಿಕ್ಸರ್‌ಗಳನ್ನು ಹಾಗೂ 396 ಬೌಂಡರಿಗಳನ್ನು ಸಿಡಿಸಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಅವರು ವಿಕೆಟ್ ಹಿಂಭಾಗದಲ್ಲಿ ಒಟ್ಟು 166 ಕ್ಯಾಚ್‌ಗಳನ್ನು ಪಡೆದಿದ್ದು, 18 ಸ್ಟಂಪಿಂಗ್‌ಗಳನ್ನು ಮಾಡುವ ಮೂಲಕ ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed