Janhvi Kapoor: ‘ಚುಟ್ಟಮಲ್ಲೆ’ ಹಾಡಿನ AI ಮಾರ್ಫಿಂಗ್‌ಗೆ ಜಾನ್ವಿ ಕಪೂರ್ ಗರಂ; ನಟಿ ಕೊಟ್ಟ ಖಡಕ್ ಸಂದೇಶ! | | ACTPnews

News18


Last Updated:

ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್‌ಟಿಆರ್ ಎಐ ಮೂಲಕ ಮಾರ್ಫ್ ಮಾಡಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರದ ಬಗ್ಗೆ ಜಾನ್ವಿ ಕಪೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

News18
News18

ಜೂನಿಯರ್ ಎನ್‌ಟಿಆರ್ (Junior NTR) ಹಾಗೂ ಜಾನ್ವಿ ಕಪೂರ್ (Janhvi Kapoor) ಅಭಿನಯದ ದೇವರ (Devara) ಚಿತ್ರದ ಜನಪ್ರಿಯ ಚುಟ್ಟಮಲ್ಲೆ ಹಾಡು ಬಿಡುಗಡೆಯಾದಾಗಿನಿಂದಲೂ ಭಾರೀ ಸದ್ದು ಮಾಡಿದೆ. ಇದೀಗ ಇದೇ ಹಾಡಿಗೆ ಸಂಬಂಧಿಸಿದಂತೆ ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್‌ಟಿಆರ್ ಎಐ ಮೂಲಕ ಮಾರ್ಫ್ ಮಾಡಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರದ ಬಗ್ಗೆ ಜಾನ್ವಿ ಕಪೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ನಿಂದನಾತ್ಮಕ ರೀತಿಯಲ್ಲಿ ಬಿಂಬಿಸುವುದು ಕೇವಲ ತಂತ್ರಜ್ಞಾನದ ದುರ್ಬಳಕೆಯಲ್ಲ, ಬದಲಾಗಿ ಮಹಿಳೆಯ ಖಾಸಗಿತನ ಮತ್ತು ಹಕ್ಕುಗಳ ಮೇಲಿನ ಗಂಭೀರ ದಾಳಿ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ನಟಿ, ಅನುಮತಿಯಿಲ್ಲದೆ ಮಹಿಳೆಯರ ಚಿತ್ರ ಅಥವಾ ದೃಶ್ಯಗಳನ್ನು ಬದಲಾಯಿಸಿ ಅವುಗಳನ್ನು ನಿಂದನಾತ್ಮಕವಾಗಿ ಹರಡುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರು ಯಾವುದೋ ಒಂದು ರೂಪದಲ್ಲಿ ಇಂತಹ ಅನುಭವಗಳನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ.

ಮಹಿಳೆಯೊಬ್ಬರು ಯಾವ ರೀತಿಯ ಉಡುಪು ಧರಿಸಿದ್ದಾರೆ ಎಂಬುದನ್ನು ಆಧರಿಸಿ ಅವರ ಅನುಮತಿಯಿಲ್ಲದೆ ಅವರ ದೇಹವನ್ನು ಚಿತ್ರೀಕರಿಸಲು ಅಥವಾ ಅಶ್ಲೀಲವಾಗಿ ಬಿಂಬಿಸಲು ಯಾರಿಗೂ ಹಕ್ಕಿಲ್ಲ ಎಂಬುದನ್ನು ಜಾನ್ವಿ ಒತ್ತಿ ಹೇಳಿದ್ದಾರೆ. ಆಕೆ ಯಾವುದರಲ್ಲಿ ಆರಾಮದಾಯಕವಾಗಿದ್ದಾಳೆ ಮತ್ತು ತನ್ನ ದೇಹದ ಕುರಿತು ಯಾವ ಗಡಿಗಳನ್ನು ಹೊಂದಿದ್ದಾಳೆ ಎಂಬುದನ್ನು ನಿರ್ಧರಿಸುವ ಹಕ್ಕು ಸಂಪೂರ್ಣವಾಗಿ ಆಕೆಗೆ ಸೇರಿದ್ದು ಎಂದು ನಟಿ ಹೇಳಿದ್ದಾರೆ.

ಜಗತ್ತಿನಲ್ಲಿ ಮಹಿಳೆಯರು ಪ್ರತಿದಿನ ಎದುರಿಸುತ್ತಿರುವ ಸುರಕ್ಷತಾ ಸವಾಲುಗಳು ಇನ್ನೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ. ಇದರ ನಡುವೆ ಇದೇ ರೀತಿಯ ಬೆದರಿಕೆಗಳು ಡಿಜಿಟಲ್ ಜಗತ್ತಿಗೂ ವ್ಯಾಪಿಸುತ್ತಿರುವುದು ಮತ್ತಷ್ಟು ಆತಂಕಕಾರಿ ಸಂಗತಿ ಎಂದು ಜಾನ್ವಿ ಹೇಳಿದ್ದಾರೆ.

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಜೂನಿಯರ್ ಎನ್‌ಟಿಆರ್, ಇಂತಹ ವಿಡಿಯೋ ಸೃಷ್ಟಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರನ್ನು ತಾಯಿ ಮತ್ತು ದೇವತೆಗಳ ರೂಪದಲ್ಲಿ ಗೌರವಿಸುವ ಸಂಸ್ಕೃತಿ ನಮ್ಮದು. ಆದರೆ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ವಿಷಯ ಸೃಷ್ಟಿಸುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed