Last Updated:
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರೂ, ತಂಡವು ಇನ್ನೂ ಸುಧಾರಿಸಿಕೊಳ್ಳಬೇಕಾದ ಕ್ಷೇತ್ರಗಳಿವೆ ಎಂದು ಗಿಲ್ ಒತ್ತಿ ಹೇಳಿದ್ದಾರೆ. ಪಂದ್ಯವು ತಮ್ಮ ನಿಯಂತ್ರಣದಲ್ಲಿದ್ದಂತೆ ಕಂಡಿತಾದರೂ, ಅಂತಿಮ ಓವರ್ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು ಎಂದು ಗಿಲ್ ತಿಳಿಸಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ (India vs West Indies) ವಿರುದ್ಧ ಹೀನಾಯ ಸೋಲು ಕಾಣುವ ಸರಣಿಯನ್ನ 3-0ಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ತಪ್ಪಿಸಿಕೊಂಡಿತು. ಅದ್ಭುತ ಬ್ಯಾಟಿಂಗ್ ಮೂಲಕ 352 ರನ್ಗಳ ಬೃಹತ್ ಗುರಿಯನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಯಿತು. ಪಂದ್ಯದ ನಂತರ ಮಾತನಾಡಿದ ನಾಯಕ ಶುಭ್ಮನ್ ಗಿಲ್ (Shubman Gill), ಮೈದಾನದಲ್ಲಿ ಆಟಗಾರರು ಮಾಡಿದ ತಪ್ಪುಗಳೇ ಈ ಸೋಲಿಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
ಸರಣಿಯನ್ನು 2-1 ಅಂತರದಿಂದ ಗೆದ್ದಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರೂ, ತಂಡವು ಇನ್ನೂ ಸುಧಾರಿಸಿಕೊಳ್ಳಬೇಕಾದ ಕ್ಷೇತ್ರಗಳಿವೆ ಎಂದು ಗಿಲ್ ಒತ್ತಿ ಹೇಳಿದ್ದಾರೆ. ಪಂದ್ಯವು ತಮ್ಮ ನಿಯಂತ್ರಣದಲ್ಲಿದ್ದಂತೆ ಕಂಡಿತಾದರೂ, ಅಂತಿಮ ಓವರ್ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು ಎಂದು ಗಿಲ್ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ಕಳಪೆಯಾಗಿತ್ತು. ಫೀಲ್ಡಿಂಗ್ ಲೋಪಗಳು ಮತ್ತು ನಿಧಾನಗತಿಯ ಓವರ್-ರೇಟ್ನಿಂದಾಗಿ ನಿಗದಿತ ಸಮಯಕ್ಕಿಂತ ನಾಲ್ಕು ಓವರ್ಗಳಷ್ಟು ಹಿಂದೆ ಬಿದ್ದಿದ್ದು ತಂಡಕ್ಕೆ ದುಬಾರಿಯಾಯಿತು ಎಂದು ತಿಳಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 351 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. 4 ರನ್ಗೆ 2 ವಿಕೆಟ್ ಕಳೆದುಕೊಂಡ ನಂತರ ರೋಹಿತ್ ಶರ್ಮಾ (92) ಮತ್ತು ರುತುರಾಜ್ ಗಾಯಕ್ವಾಡ್ (57) ನಡುವಿನ ಎರಡನೇ ವಿಕೆಟ್ಗೆ 137 ರನ್ಗಳ ಜೊತೆಯಾಟವು ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಕೆ.ಎಲ್. ರಾಹುಲ್ ಶತಕದೊಂದಿಗೆ (129 ಅಜೇಯ) ಮಿಂಚಿದರು. ಆದರೆ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅಜೇಯ 162 ರನ್ ಗಳಿಸಿ, ತಮ್ಮ ತಂಡ ಏಕದಿನ ಇತಿಹಾಸದಲ್ಲೇ ಅತಿ ದೊಡ್ಡ ಚೇಸ್ ಮಾಡಲು ನೆರವಾದರು. ಈ ಗೆಲುವಿನೊಂದಿಗೆ, ವೆಸ್ಟ್ ಇಂಡೀಸ್ 2023ರ ನಂತರ ಭಾರತದ ವಿರುದ್ಧ ತಮ್ಮ ಮೊದಲ ಏಕದಿನ ಗೆಲುವನ್ನು ದಾಖಲಿಸಿತು.
ಡೆತ್ ಓವರ್ಗಳಲ್ಲಿನ ಬೌಲಿಂಗ್ ಬಗ್ಗೆಯೂ ಶುಭ್ಮನ್ ಗಿಲ್ ಕಳವಳ ವ್ಯಕ್ತಪಡಿಸಿದರು. ಕೊನೆಯ ಹಂತದಲ್ಲಿ ಆಕ್ರಮಣಕಾರಿ ಬೌಲಿಂಗ್ ಮಾಡಬೇಕೆ ಅಥವಾ ರನ್ ನಿಯಂತ್ರಣದತ್ತ ಗಮನಹರಿಸಬೇಕೇ ಎಂಬ ಬಗ್ಗೆ ಬೌಲರ್ಗಳಲ್ಲಿ ಸ್ಪಷ್ಟತೆಯ ಕೊರತೆಯಿತ್ತು. ಎದುರಾಳಿ ತಂಡವು ಐದು ಅಥವಾ ಆರು ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ಫೀಲ್ಡ್ ಪ್ಲೇಸ್ಮೆಂಟ್ (ಕ್ಷೇತ್ರರಕ್ಷಣೆ ವಿನ್ಯಾಸ) ಕುರಿತು ಸ್ಪಷ್ಟ ತಂತ್ರದ ಕೊರತೆಯು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿತು ಎಂದು ಹೇಳಿದ ಗಿಲ್, ಈ ವಿಷಯದಲ್ಲಿ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಸ್ಪಿನ್ನರ್ ಕುಲದೀಪ್ ಯಾದವ್ ಅವರ ಓವರ್ಗಳನ್ನು ಅಂತಿಮ ಹಂತದವರೆಗೆ ಉಳಿಸಿಕೊಂಡಿದ್ದಕ್ಕೆ ಕಾರಣವನ್ನೂ ಗಿಲ್ ವಿವರಿಸಿದರು. ಸ್ನಾಯು ಸೆಳೆತದ ಕಾರಣದಿಂದಾಗಿ ವೇಗದ ಬೌಲರ್ ಗುರ್ನೂರ್ ಬ್ರಾರ್ ಮತ್ತೆ ಬೌಲಿಂಗ್ ಮಾಡುವ ಸಾಮರ್ಥ್ಯದ ಬಗ್ಗೆ ಅನಿಶ್ಚಿತತೆ ಇದ್ದಿದ್ದರಿಂದ, ವಿಕೆಟ್ ಕಬಳಿಸುವ ಬೌಲರ್ ಆದ ಕುಲದೀಪ್ ಅವರನ್ನು ಪಂದ್ಯದ ಅಂತಿಮ ಹಂತಗಳಿಗಾಗಿ ಉಳಿಸಿಕೊಳ್ಳುವುದು ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.
ಜೇಡನ್ ಸೀಲ್ಸ್ ಅವರ ಎಸೆತದಲ್ಲಿ ಬೇಗನೆ ಔಟ್ ಆದ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, ಆರಂಭಿಕ ಹಂತದಲ್ಲಿ ವಿಕೆಟ್ ಕಳೆದುಕೊಳ್ಳುವುದು ಯಾವಾಗಲೂ ನಿರಾಶಾದಾಯಕವಾಗಿರುತ್ತದೆ ಎಂದು ಹೇಳಿದರಾದರೂ, ಆ ನಿರ್ದಿಷ್ಟ ಎಸೆತದ ವಿರುದ್ಧ ತಾವೇನೂ ಮಾಡಲು ಸಾಧ್ಯವಿರಲಿಲ್ಲ ಎಂಬುದನ್ನು ಒಪ್ಪಿಕೊಂಡರು.














