Shiva Rajkumar: ಆನಂದ್ ಚಿತ್ರಕ್ಕೆ ಆ್ಯಕ್ಷನ್ ಕಟ್ಟ ಹೇಳಿದ್ದ ಸಿಂಗೀತಂ ಶ್ರೀನಿವಾಸ್, ಶಿವರಾಜ್ ಕುಮಾರ್ ಹೇಳಿದ್ದೇನು? | | ACTPnews

Singeetham Srinivasa Rao Demise Shiva Rajkumar condolences


ಮರಳಿ ಬನ್ನಿ ಸರ್…

ಸಿಂಗೀತಂ ಶ್ರೀನಿವಾಸ್ ರಾವ್ ಅವರ ನಿಧನಕ್ಕೆ ಶಿವಣ್ಣ ಸಂತಾಪ ಸೂಚಿಸಿದ್ದಾರೆ. ನೀವು ಯಾವಾಗಾಲೂ ಗ್ರೇಟ್ ಸರ್. ಮರಳಿ ಬನ್ನಿ ಅಂತಲೇ ಶಿವಣ್ಣ ಹೇಳಿದ್ದಾರೆ.

ಮರಳಿ ಬನ್ನಿ ಸರ್…

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಎಕ್ಸ್ ಖಾತೆ)

ನಿಮ್ಮ ಜೀವನವನ್ನ ಜೀವಿಸಿದ್ದಿರಿ. ಇರೋವರೆಗೂ ಸಿನಿಮಾವನ್ನ ಪ್ರೀತಿಸಿದ್ದೀರಿ. ನಿಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಅನ್ನುವ ಚಿತ್ರವನ್ನ ಡೈರೆಕ್ಷನ್ ಮಾಡಿದ್ದೀರಿ. ಇತರರಿಗೂ ಸ್ಪೂರ್ತಿ ಆಗಿದ್ದೀರಿ.

ನನ್ನ ಮೊದಲ ಚಿತ್ರಕ್ಕೆ

ನನ್ನ 40 ವರ್ಷದ ಚಿತ್ರ ಜೀವನದಲ್ಲಿ ನೀವು ನನಗೆ ಆನಂದ್ ಚಿತ್ರ ಕೊಟ್ಟಿದ್ದೀರಿ. ನಿಮ್ಮ ಈ ಚಿತ್ರದಿಂದಲೇ ನನ್ನ ಪಯಣ ಶುರು ಆಗಿದೆ. ನನ್ನ ಬಗೆಗಿನ ‘ಸರ್ವೈವರ್’ (SURVIVOR) ಸಾಕ್ಷ್ಯಚಿತ್ರದಲ್ಲಿ ನೀವು ಮಾತನಾಡಿದ್ದೀರಿ. ನಿಮ್ಮ ಅತ್ಯುತ್ತಮ ಮಾತುಗಳಲ್ಲಿ ಇದೂ ಒಂದಾಗಿದೆ.

ಸಿನಿಮಾನೇ ಉಸಿರು

ನಿಮ್ಮ ಜೀವನದಲ್ಲಿ ಸಿನಿಮಾನೇ ಎಲ್ಲ ಆಗಿತ್ತು. ಕೊನೆವರೆಗೂ ಸಿನಿಮಾವನ್ನ ಪ್ರೀತಿಸಿದ್ದಿರಿ. ನಿಮ್ಮ ಎಲ್ಲವನ್ನು ಚಿತ್ರರಂಗಕ್ಕೆ ಕೊಟ್ಟಿದ್ದೀರಿ. “ಮರಳಿ ಬನ್ನಿ ಸರ್! ನೀವು ಯಾವಾಗಲೂ ಗ್ರೇಟ್.”

ಹೀಗೆ ಶಿವಣ್ಣ ಎಕ್ಸ್‌ ಖಾತೆಯ ಪೇಜ್ ಅಲ್ಲಿಯೇ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮೊದಲ ಚಿತ್ರವನ್ನ ಡೈರೆಕ್ಟ್ ಮಾಡಿರೋ ಸಿಂಗೀತಂ ಶ್ರೀನಿವಾಸ್ ಅವರಿಗೆ ಸಂತಾಪ ಸೂಚಿಸಿದ್ದಾರೆ.

Singeetham Srinivasa Rao Demise Shiva Rajkumar condolences

ನನ್ನ ಮೊದಲ ಚಿತ್ರಕ್ಕೆ

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಎಕ್ಸ್ ಖಾತೆ)

‘ಸಿಂಗ್ ಗೀತಂ’ ಕೊನೆ ಚಿತ್ರ

ಸಿಂಗೀತಂ ಶ್ರೀನಿವಾಸ್ ರಾವ್ ಅವರ ಕೊನೆಯ ಚಿತ್ರ ಸಂಗೀತಮಯವೇ ಆಗಿತ್ತು. ಸಿಂಗ್ ಗೀತಂ ಅಂತಲೇ ಇದಕ್ಕೆ ಹೆಸರಿತ್ತು. ಈ ಚಿತ್ರ ಜೂನ್ ತಿಂಗಳ 12, 2026 ರಂದು ರಿಲೀಸ್ ಆಗಿತ್ತು.

ಈ ಚಿತ್ರವನ್ನ ಕಲ್ಕಿ ಚಿತ್ರದ ಡೈರೆಕ್ಟರ್ ನಾಗ್ ಅಶ್ವಿನ್ ತಮ್ಮ ವೈಜಯಂತಿ ಮೂವೀಸ್ ಬ್ಯಾನರ್ ಅಲ್ಲಿಯೇ ನಿರ್ಮಿಸಿದ್ದರು. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಮಾಡಿದ್ದರು.

ಮ್ಯೂಸಿಕಲ್ ಕಾಮಿಡಿ ಡ್ರಾಮ

ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಚಿತ್ರ ಮ್ಯೂಸಿಕಲ್ ಫ್ಯಾಂಟಸಿ ಕಾಮಿಡಿ ಸಿನಿಮಾ ಆಗಿದೆ. ಇದು ಸಂಗೀತಂ ಶ್ರೀನಿವಾಸ್ ರಾವ್ ಅವರ 61ನೇ ಚಿತ್ರ ಅನ್ನುವ ಮಾಹಿತಿನೂ ಸಿಗುತ್ತದೆ.

ಈ ಚಿತ್ರದಲ್ಲಿ ಅಯಾನ್ ಖಾನ್ ನಟಿಸಿದ್ದರು. ಶಾಲಿನಿ ಕೊಂಡೆಪುಡಿ, ಅಹಲ್ಯಾ ಬಮ್ರೂ ಅವರು ಅಭಿನಯಿಸಿದ್ದರು. ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಚಿತ್ರಕ್ಕೆ ಒಳ್ಳೆ ಓಪನಿಯನ್ ಬಂದಿದ್ದವು. ವಿಮರ್ಶಕರು ಈ ಚಿತ್ರವನ್ನ ಮೆಚ್ಚಿಕೊಂಡಿದ್ದರು. ಐದಕ್ಕೆ ಮೂರು ಸ್ಟಾರ್ ರೇಟಿಂಗ್ ಅನ್ನೂ ಕೊಟ್ಟಿದ್ದರು.

ಬಹು ವೆಚ್ಚದ ಸಿನಿಮಾ

ಸಿಂಗೀತಂ ಶ್ರೀನಿವಾಸ್ ರಾವ್ ಅವರ ಈ ಕೊನೆಯ ಚಿತ್ರದ ಬಜೆಟ್ ದೊಡ್ಡದೇ ಇದೆ. 20 ಕೋಟಿ ಬಜೆಟ್ ಅಲ್ಲಿಯೇ ಈ ಸಿನಿಮಾ ತಯಾರಾಗಿದೆ ಅನ್ನುವ ಮಾಹಿತಿನೂ ಸಿಗುತ್ತದೆ.

ಹಾಗೆ ಸಿಂಗೀತಂ ಶ್ರೀನಿವಾಸ್ ರಾವ್ ಅವರು ತಮ್ಮ 94 ನೇ ವಯಸ್ಸಿನಲ್ಲಿ ಚಿತ್ರ ಒಂದನ್ನ ಡೈರೆಕ್ಷನ್ ಮಾಡಿ ಇತರರಿಗೂ ಸ್ಪೂರ್ತಿ ಆಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed