Krishi Tapanda: ‘ಇಂಡಸ್ಟ್ರಿ, ನಟನೆ ಬಿಡ್ತಾ ಇದ್ದೀನಿ, ಇದೇ ಕೊನೆಯ ಇಂಟರ್​​ವ್ಯೂ’ ಕೃಷಿ ತಾಪಂಡ ಶಾಕಿಂಗ್ ಕಮೆಂಟ್ಸ್ | Krishi Tapanda says she is quitting acting | | ACTPnews

ಕೃಷಿ ತಾಪಂಡ


Last Updated:

Krishi Tapanda: ಕೃಷಿ ತಾಪಂಡ ಅವರು ನಟನೆ ಹಾಗೂ ಇಂಡಸ್ಟ್ರಿ ಬಿಡುವುದಾಗಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ಯಾಕೆ?

ಕೃಷಿ ತಾಪಂಡ
ಕೃಷಿ ತಾಪಂಡ

ನಟಿ ಕೃಷಿ ತಾಪಂಡ (Krishi Tapanda) ಕೆಲವು ತಿಂಗಳ ಹಿಂದೆ ಲವ್ ಬ್ರೇಕಪ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು (Photos) ಲೀಕ್ ಆಗಿ ಭಾರೀ ಸುದ್ದಿಯಾಗಿದ್ದವು. ನಟಿ ಇದೀಗ ಸಂದರ್ಶನವೊಂದರಲ್ಲಿ (Interview) ಶಾಕಿಂಗ್ ಹೇಳಿಕೆಗಳನ್ನು ಕೊಟ್ಟಿದ್ದು ಇಂಡಸ್ಟ್ರಿ ಬಿಟ್ಟು ಹೋಗುವುದಾಗಿ ಹೇಳಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಕೃಷಿ ತಾಪಂಡ ಅವರು ತಾವು ತುಂಬಾ ಎಮೋಷನಲ್ ವ್ಯಕ್ತಿ ಎಂದಿದ್ದಾರೆ. ಹಾಗೆಯೇ ತಮ್ಮ ಹಿಂದಿನ ಸಂಬಂಧ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಎರಡು ಹೊತ್ತು ಊಟ ಮಾಡೋದು ನನ್ನ ಸೋಷಿಯಲ್ ಮೀಡಿಯಾ ಕಮ್ಯುನಿಟಿಯಿಂದ. ನನ್ನ ಫ್ಯಾಮಿಲಿಯ ತಾಪಂಡ ಹೆಸರು ಇದೆ. ಎಲ್ಲರೂ ಹೆಮ್ಮೆ ಪಡ್ತಾ ಇದ್ದರು. ಈಗ ಆ ತಾಪಂಡ ಈಗ ನನ್ನ ಹೆಸರಿನ ಜೊತೆ ಇರುವುದೇ ಶಾಪ ಎನ್ನುವಂತೆ ಮಾಡುತ್ತಾರೆ.

ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿದ್ದು, ಕೆಟ್ಟದ್ದು ಬಯಸಿದ್ದೇ ಇಲ್ಲ. ನಾನು ತಪ್ಪು ಮಾಡಿದ್ದು ನಾನೇ ಹೇಳುತ್ತೇನೆ. ನನ್ನ ಹಿಂದೆ ಕುಳಿತು ಮಾತನಾಡಬೇಕಾಗಿಲ್ಲ. ನನ್ನನ್ನು ಕೆಟ್ಟದಾಗಿ ತೋರಿಸಬೇಕಾಗಿಲ್ಲ. ನಾನು ಸ್ಕೂಲ್ ಕಾಲೇಜಿನಲ್ಲಿದ್ದಾಗ ಇದ್ದ ಹಾಗೆ ನಾನಿಲ್ಲ ಎಂದಿದ್ದಾರೆ.

ಅಮ್ಮನ ಜೊತೆ ಮಾತಿಲ್ಲ

ಅಮ್ಮನ ಜೊತೆ ಕ್ಲೋಸ್ ಇದ್ದೆ. ನಾವು ಈಗ ಮಾತನಾಡುವುದೇ ಇಲ್ಲ ಎಂದಿದ್ದಾರೆ. ನನ್ನ ಜೊತೆ ಯಾರೂ ಇಲ್ಲ. ಮನೆಯಲ್ಲಿ ಒಬ್ಬೊಬ್ಬಳೇ ಇರುವುದಕ್ಕಿಂತ ಕಂಟೆಂಟ್ ಮಾಡಿಕೊಂಡು ಇರುತ್ತೀನಿ. ನಾನು ಟ್ರೀಟ್ಮೆಂಟ್ ತಗೊಳ್ತಾ ಇದ್ದೀನಿ. ನಾನು ಬದುಕು ಮುಗಿಸೋಕೆ ಇಷ್ಟಪಡಲ್ಲ ಎಂದಿದ್ದಾರೆ.

ಭರವಸೆ ತಂದಿದ್ದೇ ಸೋಷಿಯಲ್ ಮೀಡಿಯಾ

ಈ ಮೂರು ತಿಂಗಳ ಹಿಂದೆ ನನ್ನನ್ನು ಯಾವ ಸೋಷಿಯಲ್ ಮಿಡಿಯಾ ನನ್ನ ಬಗ್ಗೆ ಕೆಟ್ಟದಾಗಿ, ಅಸಹ್ಯವಾಗಿ ಮಾತನಾಡಿದ್ದರೋ ಅವರೇ ಈಗ ಸಪೋರ್ಟ್ ಮಾಡುತ್ತಾರೆ. ತುಂಬಾ ಸೆನ್ಸಿಬಲ್ ಆಗಿ ಮಾತನಾಡುವ ಹುಡುಗರೂ ಇದ್ದಾರೆ. ದೇವರೇ ಕಳಿಸಿಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಮತ್ತೆ ಭರವಸೆ ತಂದಿದ್ದು ನನ್ನ ಸೋಷಿಯಲ್ ಮೀಡಿಯಾ ಕಮ್ಯುನಿಟಿ.

ಬದುಕೋಕೆ ಬಿಡಿ

ನಾನು ಟ್ರೀಟ್ಮೆಂಟ್ ತಗೊಳೋಕಾಗ್ತಿರೋದು, ಬದುಕುತ್ತಿರುವುದು ಸೋಷಿಯಲ್ ಮೀಡಿಯಾದಿಂದಾಗಿ. ಅದು ದೇವರೇ ಕಳಿಸಿಕೊಟ್ಟಿದ್ದು ಎಂದಿದ್ದಾರೆ. ನನ್ನ ಇಡೀ ಜೀವನವನ್ನು ಈ ಒಂದು ವಿಷಯದಲ್ಲಿ ಜಡ್ಜ್ ಮಾಡಬೇಡಿ. ಮೂವ್ ಆನ್ ಆಗಿ, ನನ್ನ ಬದುಕೋಕೆ ಬಿಡಿ ಎಂದಿದ್ದಾರೆ.

ನಾನು ನಟಿಯಲ್ಲ, ಇಂಡಸ್ಟ್ರಿ ಬಿಡ್ತಾ ಇದ್ದೀನಿ

ನಾನು ಅಧಿಕೃತವಾಗಿ ಹೇಳ್ತಾ ಇದ್ದೇನೆ. ನಾನು ನಟಿಯಲ್ಲ. ನಾನು ನಟನೆ ಬಿಡ್ತಾ ಇದ್ದೇನೆ. ನಾನು ಇಂಡಸ್ಟ್ರಿ ಬಿಡ್ತಾ ಇದ್ದೀನಿ. ನಾನು ಸಾಮಾನ್ಯ ಮನುಷ್ಯಗಳು ಅಂತನದ್ಕೊಂಡು ಬದುಕೋಕೆ ಬಿಡಿ. ಸಾಧ್ಯವಾದರೆ ನಾನು ಬೆಂಗಳೂರು ಬಿಟ್ಟಢ ಹೋಗುತ್ತೇನೆ ಎಂದಿದ್ದಾರೆ.

ನೀನು ನಂಗೆ ಏನಾದರೂ ಕೊಡ್ಬಹುದು. ಆದರೆ ಅದು ಆ ಕ್ಷಣಕ್ಕೆ ಖುಷಿ ಕೊಡಬಹುದು. ಆದರೆ ಪ್ರೀತಿ ಯಾವಾಗಲೂ ಖುಷಿ ಕೊಡುತ್ತೆ. ನನ್ನ ಯಾವ ಪ್ರಪಂಚದ ಯಾವ ಮೂಲೆಗೆ ಬಿಟ್ಟರೂ ಬದುಕುತ್ತೇನೆ. ನನಗೆ ಪ್ರೀತಿಯಾದ ವ್ಯಕ್ತಿ ಶ್ರೀಮಂತ, ಅವನು ಶ್ರೀಮಂತ ಅಂತ ನಾನು ಪ್ರೀತಿ ಮಾಡಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Samantha Ruth Prabhu: ಗಂಡನ ಮುಂದೆಯೇ ಸಮಂತಾಗೆ ಮಂಡಿಯೂರಿ ಪ್ರಪೋಸ್ ಮಾಡಿದ ಅಭಿಮಾನಿ! ವಿಡಿಯೋ ವೈರಲ್

ನನಗೆ ಅವರ ಶ್ರೀಮಂತಿಕೆ ಗೊತ್ತಿರಲಿಲ್ಲ. ನಾನು ಯಾವ ಕಾರು ತಗೊಂಡಿಲ್ಲ. ಆ ಕಾರು ಮಾಡಿಸಿದ್ದರು. ನಾನು ಅದನ್ನು ತಗೊಂಡೆ ಇಲ್ಲ. ಅವರು ಕೊಟ್ಟ ಹಾಗೆಯೇ ತಿರುಗಿಸಿಕೊಟ್ಟಿದ್ದೇನೆ. ನನಗೆ ಆಭರಣ ಕೊಟ್ಟಿದ್ದಾರೆ, ಅದೆಲ್ಲ ವಾಪಸ್ ಕೊಟ್ಟಿದ್ದೇನೆ. ರಿಲೇಷನ್​ಶಿಪ್​ನಲ್ಲಿರುವಾಗ ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಕೊಟ್ಟಿದ್ದೆಲ್ಲ ವಾಪಸ್ ಕೊಟ್ಟಿದ್ದೇನೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed