Asian Games: ಮಲೇಷ್ಯಾ ವಿರುದ್ಧ ಭರ್ಜರಿ ಜಯ! ಚಿನ್ನದ ಪದಕದೊಂದಿಗೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತ ಹಾಕಿ ತಂಡ | ಕ್ರೀಡಾ ಸುದ್ದಿ | ACTPnews

ಚಿನ್ನ ಗೆದ್ದ ಭಾರತ ಹಾಕಿ ತಂಡ (Reuters Photo)


Last Updated:

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ತಂಡವು ಈ ವಿಭಾಗದಲ್ಲಿ ತನ್ನ ಚಿನ್ನದ ಪದಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗೆದ್ದ ಐದನೇ ಚಿನ್ನದ ಪದಕ ಇದಾಗಿದೆ.

 ಚಿನ್ನ ಗೆದ್ದ ಭಾರತ ಹಾಕಿ ತಂಡ (Reuters Photo)
ಚಿನ್ನ ಗೆದ್ದ ಭಾರತ ಹಾಕಿ ತಂಡ (Reuters Photo)

ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತೀಯ ಪುರುಷರ ಹಾಕಿ ತಂಡವು (Indian Hockey Team) ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದೆ. ಶನಿವಾರ ಮಲೇಷ್ಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ, ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಏಕಪಕ್ಷೀಯವಾಗಿದ್ದ ಈ ಫೈನಲ್ ಪಂದ್ಯದಲ್ಲಿ ಭಾರತವು ಮಲೇಷ್ಯಾವನ್ನು 5-1 ಗೋಲುಗಳ ಅಂತರದಿಂದ ಸೋಲಿಸಿತು. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ತಂಡವು ಈ ವಿಭಾಗದಲ್ಲಿ ತನ್ನ ಚಿನ್ನದ ಪದಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗೆದ್ದ ಐದನೇ ಚಿನ್ನದ ಪದಕ ಇದಾಗಿದೆ. ಈ ಮಹತ್ತರ ಗೆಲುವಿನೊಂದಿಗೆ ಭಾರತ ತಂಡವು 2028ರ ಲಾಸ್ ಏಂಜಲೀಸ್ (LA 2028) ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ಭಾರತದ ಪರವಾಗಿ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು (11 ಮತ್ತು 57ನೇ ನಿಮಿಷಗಳಲ್ಲಿ) ಗಳಿಸಿದರೆ, ಜುಗ್ರಾಜ್ (23ನೇ ನಿಮಿಷ), ಹಾರ್ದಿಕ್ (42ನೇ ನಿಮಿಷ) ಮತ್ತು ಶಿಲಾನಂದ್ (54ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಪಂದ್ಯದ ಆರಂವಭದಿಂದಲೇ ಭಾರತವು ತನ್ನ ಪ್ರಾಬಲ್ಯನ್ನು ಮೆರೆಯಿತು. 11ನೇ ನಿಮಿಷದಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡಕ್ಕೆ ಲಭಿಸಿದ ಮೊದಲ ಪೆನಾಲ್ಟಿ ಕಾರ್ನರ್ ಅನ್ನು ‘ಡ್ರ್ಯಾಗ್-ಫ್ಲಿಕ್’ ಮೂಲಕ ಗೋಲಾಗಿ ಪರಿವರ್ತಿಸಿ, ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

3 ನಿಮಿಷಗಳಲ್ಲಿ ಸಮಬಲ

ಆದರೆ, ಈ ಸಂಭ್ರಮವು ಅಲ್ಪಕಾಲಿಕವಾಗಿತ್ತು, 14ನೇ ನಿಮಿಷದಲ್ಲಿ ಮಲೇಷ್ಯಾ ಗೋಲು ಗಳಿಸುವ ಮೂಲಕ ಸ್ಕೋರ್ ಅನ್ನು 1-1ಕ್ಕೆ ಸಮಗೊಳಿಸಿತು. ಮಲೇಷ್ಯಾದ ಆಟಗಾರ ಶೆಲ್ಲೊ ಸಿಲ್ವೆರಿಯಸ್ ಅದ್ಭುತ ‘ಫೀಲ್ಡ್ ಗೋಲ್’ ಮೂಲಕ ಗಮನ ಸೆಳೆದರು. ಎರಡನೇ ಕ್ವಾರ್ಟರ್‌ನ 23ನೇ ನಿಮಿಷದಲ್ಲಿ, ಜುಗ್ರಾಜ್ ಸಿಂಗ್ ಪೆನಾಲ್ಟಿ ಕಾರ್ನರ್ ಅನ್ನು ಡ್ರ್ಯಾಗ್-ಫ್ಲಿಕ್ ಮೂಲಕ ಗೋಲಾಗಿ ಪರಿವರ್ತಿಸಿದರು, ಇದರಿಂದಾಗಿ ಭಾರತವು ಮೊದಲಾರ್ಧವನ್ನು 2-1 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿತು.

ಮೂರನೇ ಕ್ವಾರ್ಟರ್​ನಲ್ಲಿ ಭಾರತದ ಪ್ರಾಬಲ್ಯ

ಮೂರನೇ ಕ್ವಾರ್ಟರ್‌ನ ಅಂತಿಮ ಹಂತದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅನ್ನು ಹಾರ್ದಿಕ್ ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು. 54ನೇ ನಿಮಿಷದಲ್ಲಿ ಅಭಿಷೇಕ್ ಫೀಲ್ಡ್ ಗೋಲ್ ಮೂಲಕ ಮುನ್ನಡೆಯನ್ನು 4-1ಕ್ಕೆ ಹೆಚ್ಚಿಸಿದರೆ, 57ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ 5-1 ಅಂತರದ ಗೆಲುವನ್ನು ಖಚಿತಪಡಿಸಿದರು.

ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತ

ಈ ಬಾರಿ ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನದ ಪದಕ ಗೆದ್ದ, ಭಾರತದ ಪುರುಷರ ಮತ್ತು ಮಹಿಳಾ ಎರಡೂ ಹಾಕಿ ತಂಡಗಳು ಚಿನ್ನದ ಪದಕದೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ (LA28) ನೇರ ಟಿಕೆಟ್ ಬುಕ್ ಮಾಡಿವೆ. ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (FIH) ನಿಯಮಾವಳಿಗಳ ಪ್ರಕಾರ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ತಂಡಗಳು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತವೆ.

ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತವು ಮೊದಲ ಬಾರಿಗೆ ಹಾಕಿಯ ಎರಡೂ ವಿಭಾಗಗಳಲ್ಲಿ ಒಂದೇ ಬಾರಿ ಚಿನ್ನ ಗೆದ್ದು “ಡಬಲ್ ಗೋಲ್ಡ್” ಸುವರ್ಣ ದಾಖಲೆ ಬರೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed