ಕನ್ನಡ ಚಿತ್ರ ಉಳಿಸಿ….
(ಚಿತ್ರ ಕೃಪೆ: ನಾಗತಿಹಳ್ಳಿ ಮೇಷ್ಟ್ರು ಇನ್ಸ್ಟಾಗ್ರಾಮ್)
ಆದರೆ, ಈ ಚಿತ್ರಕ್ಕೆ ಇದೀಗ ಚಿತ್ರಮಂದಿರಗಳ ಪರದೆ ಕೊರತೆ ಆಗಿದೆ. ಪರ ಭಾಷೆಯ ಚಿತ್ರಗಳ ದಾಳಿಯಿಂದ ಹೀಗೆ ಆಗಿದೆ. ಆದರೆ, ಒಂದು ಕನ್ನಡ ಚಿತ್ರಕ್ಕೆ ಪರದೆಗಳನ್ನ ಕೊಡಿ ಅಂತಲೇ ನಾಗತಿಹಳ್ಳಿ ಮೇಷ್ಟ್ರು ಕೇಳಿಕೊಂಡಿದ್ದಾರೆ.
ಅಮೆರಿಕಾ ಅಮೆರಿಕಾ-2 ಚಿತ್ರ ಹತ್ತಿರದ ಚಿತ್ರಮಂದಿರದಲ್ಲಿ ಇಲ್ವೇ ಇಲ್ಲ. ನಾವು ಚಿತ್ರ ನೋಡ್ಬೇಕು. ದೂರದ ಮಾಲ್ಗಳಿಗೆ ಹೋಗೋಕೆ ಆಗಲ್ಲ ಅಂತಲೇ ಪ್ರೇಕ್ಷಕರು ನಾಗತಿಹಳ್ಳಿ ಮೇಷ್ಟ್ರಿಗೆ ಹೇಳಿದ್ದಾರೆ.
ವಿಶ್ವದಾದ್ಯಂತ ಈ ಚಿತ್ರ ರಿಲೀಸ್ ಆಗಿದೆ. ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ, ಮೂರನೇ ವಾರಕ್ಕೆ ಕಾಲಿಟ್ಟ ಈ ಚಿತ್ರಕ್ಕೆ ಥಿಯೇಟರ್ಗಳ ಪರದೆಯ ಕೊರೆತೆ ಆಗಿದೆ ಅಂತಲೂ ಮೇಷ್ಟ್ರು ಹೇಳಿಕೊಂಡಿದ್ದಾರೆ.
ಅಮೆರಿಕಾ ಅಮೆರಿಕಾ-2 ಚಿತ್ರಕ್ಕೆ ಥಿಯೇಟರ್ಗಳ ಕೊರತೆ ಆಗಿದೆ. ಒಳ್ಳೆ ಚಿತ್ರಕ್ಕೆ ಥಿಯೇಟರ್ಗಳ ಪರದೆ ಸಿಗಬೇಕು. ಕನ್ನಡ ಚಿತ್ರ ಉಳಿಯಬೇಕಿದೆ.
ಬೇಸರ ವ್ಯಕ್ತಪಡಿಸಿದ ನಾಗತಿಹಳ್ಳಿ ಮೇಷ್ಟ್ರು
(ಚಿತ್ರ ಕೃಪೆ: ನಾಗತಿಹಳ್ಳಿ ಮೇಷ್ಟ್ರು ಇನ್ಸ್ಟಾಗ್ರಾಮ್)
ಈ ಹಿನ್ನೆಲೆಯಲ್ಲಿ ಕನ್ನಡದ ಈ ಚಿತ್ರವನ್ನ ಉಳಿಸಿ ಅನ್ನುವ ಅರ್ಥದಲ್ಲಿಯೇ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಈ ಒಂದು ವಿಡಿಯೋವನ್ನ ಪಿ.ಆರ್.ಮೂಲಕ ಮಾಧ್ಯಮಗಳ ಜೊತೆಗೂ ಹಂಚಿಕೊಂಡಿದ್ದಾರೆ.
ಅಮೆರಿಕಾ ಅಮೆರಿಕಾ-2 ಚಿತ್ರ ಸೆಪ್ಟೆಂಬರ್-11 ರಂದು ರಿಲೀಸ್ ಆಗಿದೆ. ಟಾಕ್ಸಿಕ್ ಚಿತ್ರ ಬರೋ ಮೊದಲು ಈ ಚಿತ್ರದ ರಿಲೀಸ್ ಪ್ಲಾನ್ ಇತ್ತು.
ಆದರೆ, ಪರ ಭಾಷೆಯ ಚಿತ್ರಗಳ ಅಬ್ಬರಕ್ಕೆ ಕನ್ನಡ ಅಮೆರಿಕಾ ಅಮೆರಿಕಾ-2 ಚಿತ್ರಕ್ಕೆ ಥಿಯೇಟರ್ಗಳ ಪರದೆಯ ಕೊರತೆ ಆಗಿದೆ. ಈ ವಿಷಯವನ್ನ ನಾಗತಿಹಳ್ಳಿ ಮೇಷ್ಟು ಒತ್ತಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅಭಿನಯಿಸಿದ್ದಾರೆ. ನಿರೂಪ್ ಭಂಡಾರಿ ಜೋಡಿ ಆಗಿದ್ದಾರೆ. ಪೃಥ್ವಿ ಅಂಬಾರ್ ಅಭಿನಯಿಸಿದ್ದಾರೆ. ಇವರ ಈ ಚಿತ್ರಕ್ಕೆ ಮನೋಮೂರ್ತಿಗಳ ಸಂಗೀತ ಇದೆ. ಸುಮಾರು 30 ವರ್ಷದ ಹಿಂದೆ ಅಮೆರಿಕಾ ಅಮೆರಿಕಾ ಚಿತ್ರ ಬಂದಿತ್ತು. ಅದಾದ್ಮೇಲೆ ಅಮೆರಿಕಾ ಅಮೆರಿಕಾ-2 ಚಿತ್ರ ಬಂದಿದೆ. ಆದರೆ,ಇದು ಆ ಚಿತ್ರದ ಮುಂದುವರೆದ ಭಾಗ ಅಲ್ವೇ ಅಲ್ಲ. ಇದು ಬೇರೆ ಕತೆಯನ್ನೆ ಹೊಂದಿದೆ. ಇನ್ನುಳಿದಂತೆ ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರಮಂದಿರಗಳ ಪರದೆಯ ಕೊರತೆಯನ್ನು ಎದುರಿಸುತ್ತಿದೆ ಅಂತ ಹೇಳಬಹುದು.













