18 ವರ್ಷದ ಕನಸು
(ಚಿತ್ರ ಕೃಪೆ: ಡೈರೆಕ್ಟರ್ ಮನೋಜ್ ಕುಮಾರ್ ಇನ್ಸ್ಟಾಗ್ರಾಮ್)
ಈ ಚಿತ್ರವನ್ನ ಅವರು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳ್ಬೇಕು. ಹೀಗೆ ಹೇಳ್ತಾನೆ ಕೊಂಚ ಎಮೋಷನಲ್ ಆಗ್ತಾ ಹೋದ್ರು? ಕ್ಷಮೆ ಇರಲಿ, ಮಾತ್ ಅಡೋಕೆ ಆಗ್ತಿಲ್ಲ ಅಂತ ಮಾತು ಕೂಡ ನಿಲ್ಲಿಸಿದರು.
ನಾನು ಊರಿಂದ ಬಂದು ಗಾಂಧಿನಗರದಲ್ಲಿ ಕೆಲಸ ಹುಡುಕಿದೆ. ಆದರೆ, ಕೆಲಸವೇ ಸಿಗಲಿಲ್ಲ. ಕೊನೆಗೆ ಏನು ಮಾಡೋದು ಅಂತ ಸಂತೋಷ್ ಥಿಯೇಟರ್ ಅಲ್ಲಿ ಕೆಲಸ ಮಾಡೋಕೆ ಶುರು ಮಾಡಿದೆ.
ಚಿತ್ರದ ಶೋ ಮುಗಿದ್ಮೇಲೆ ನಮಗೆ ಥಿಯೇಟರ್ ಒಳಗೆ ಬಿಡ್ತಾ ಇರಲಿಲ್ಲ. ಅದಕ್ಕೇನೆ ನಾವು ಹೊರಗಡೆ ರಟ್ಟು ಹಾಸ್ಕೊಂಡು ಮಲಗ್ತಾ ಇದ್ದೇವು.
ಇದೀಗ ಈ ಚಿತ್ರ ಮಂದಿರದ ಪಕ್ಕದ ನರ್ತಕಿಯಲ್ಲಿ ನನ್ನ ನಿರ್ದೇಶನದ ಚಿತ್ರ ಬಂದಿದೆ. ಈ ಚಿತ್ರ ನೋಡೋಕೆ ಜನ ಬರ್ತಿರೋದು ನೋಡಿ ತುಂಬಾನೆ ಖುಷಿ ಆಗುತ್ತದೆ. ನಿಜಕ್ಕೂ ಹೆಮ್ಮೆ ಅನಿಸುತ್ತಿದೆ ಅನ್ನುವ ಅರ್ಥದಲ್ಲಿಯೇ ಮನೋಜ್ ಕುಮಾರ್ ಹೇಳಿಕೊಂಡಿದ್ದಾರೆ.
ಮನೋಜ್ ಕುಮಾರ್
(ಚಿತ್ರ ಕೃಪೆ: ಡೈರೆಕ್ಟರ್ ಮನೋಜ್ ಕುಮಾರ್ ಇನ್ಸ್ಟಾಗ್ರಾಮ್)
ಪ್ರೇಮದ ಊರಲಿ ಚಿತ್ರ ಕಳೆದ ತಿಂಗಳು ಸೆಪ್ಟೆಂಬರ್-25 ರಂದು ರಿಲೀಸ್ ಆಗಿತ್ತು. ಈ ದಿನ ಹೆಚ್ಚು ಕಡಿಮೆ ಸುಮಾರು 6 ಚಿತ್ರಗಳು ರಿಲೀಸ್ ಆಗಿದ್ದವು.
ಈ 6 ಚಿತ್ರಗಳಲ್ಲಿ ಪ್ರೇಮದ ಊರಲಿ ಚಿತ್ರವು ಒಂದಾಗಿದೆ. ಈ ಚಿತ್ರಕ್ಕೆ ಮೊದಲ ದಿನ ಅಷ್ಟೇನೂ ಕಲೆಕ್ಷನ್ ಆಗಿರಲಿಲ್ಲ. ಆದರೆ, ಇದು ಮೌತ್ ಪಬ್ಲಿಸಿಟಿಯಿಂದಲೂ ಜನರಲ್ಲಿ ಆಸಕ್ತಿ ಮೂಡಿಸಿದೆ.
ಡೈರೆಕ್ಟರ್ ಮನೋಜ್ ಕುಮಾರ್ ತಮ್ಮ ಜೀವನದ ಆ ದಿನಗಳನ್ನ ಈ ಸಕ್ಸಸ್ ಮೀಟ್ ಅಲ್ಲಿಯೇ ನೆನಪಿಸಿಕೊಂಡಿದ್ದಾರೆ. ಚಿತ್ರ ಯಶಸ್ವಿ ಆಗಲು ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ.
ಅಂದ್ಹಾಗೆ ಮನೋಜ್ ಕುಮಾರ್ ಈ ಹಿಂದೆ ಒಂದು ಚಿತ್ರ ಮಾಡಿದ್ದರು. ಈ ಚಿತ್ರಕ್ಕೆ ಅಕ್ಷಿ ಅಂತ ಹೆಸರಿಟ್ಟಿದ್ದರು. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ಅಂತ 67 ನೇಯ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇದೀಗ ಇವರ ಪ್ರೇಮದ ಊರಲಿ ಜನರ ಪ್ರೀತಿಯನ್ನ ಪಡೆದುಕೊಂಡು ಮುನ್ನುಗ್ಗುತ್ತಿದೆ ಅಂತ ಹೇಳಬಹುದು.













