Last Updated:
Bail Movie: ಬೇಲ್ ಚಿತ್ರದಲ್ಲಿ ಸಾಯಿ ಕುಮಾರ್, ಜಯರಾಮ್ ಅವರು ಜನರ ಹೃದಯ ಗೆದ್ದಿದ್ದಾರೆ. ಇಡೀ ಸಿನಿಮಾದಲ್ಲಿ ಒಳ್ಳೆ ವಿಷಯ ಇದೆ. ಬೇಲ್ ಫೇಲೋ ಪಾಸೋ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ…
ಬೇಲ್ ಚಿತ್ರ ರಿಲೀಸ್ (Bail Movie) ಆಗಿದೆ. ಮೊದಲ ದಿನವೇ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸಿನಿಮಾ ನೋಡಿದವರು ಶಿವರಾಜ್‌ಕುಮಾರ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್ (Movie Release) ಆದ ಎರಡನೇ ದಿನವೇ ಶಿವರಾಜ್ ಥಿಯೇಟರ್ ವಿಸಿಟ್ ಶುರು ಮಾಡಿದ್ದಾರೆ. ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಡೈರೆಕ್ಟರ್ ಪವನ್ ಒಡೆಯರ್ (Pawan Wadeyar) ಇದ್ದಾರೆ. ಗೀತಾ ಶಿವರಾಜ್ ಕುಮಾರ್ ಕೂಡ ಈ ವಿಸಿಟ್ ಪ್ರಯಾಣದಲ್ಲಿ ಪತಿಗೆ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಒಂದಷ್ಟು ಫೋಟೋ ಹಾಗೂ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ ಓದಿ.
ಬೇಲ್ ಸಿನಿಮಾ ಮೊದಲ ದಿನವೇ ಒಳ್ಳೆ ರೆಸ್ಪಾನ್ ಪಡೆದುಕೊಂಡಿದೆ. ಈ ಖುಷಿಯಲ್ಲಿ ಶಿವರಾಜ್‌ಕುಮಾರ್ ಥಿಯೇಟರ್ ವಿಸಿಟ್ ಶುರು ಮಾಡಿದ್ದಾರೆ.
ಶಿವಣ್ಣನ ಥಿಯೇಟರ್ ವಿಸಿಟ್
(ಚಿತ್ರ ಕೃಪೆ: ಬೇಲ್ ಚಿತ್ರ ತಂಡ)
ಬಳ್ಳಾರಿ ಮತ್ತು ಹೊಸಪೇಟೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಇಲ್ಲಿಯ ಥಿಯೇಟರ್ ವಿಸಿಟ್ ಪ್ಲಾನ್ ಮಾಡಿದ್ದಾರೆ. ತಮ್ಮ ಚಿತ್ರವನ್ನ ನೋಡಿದ ಜನರಿಗೆ ಥ್ಯಾಂಕ್ಸ್ ಕೂಡ ಹೇಳುತ್ತಿದ್ದಾರೆ.
ಬೇಲ್ ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಇದ್ದಾರೆ. ಸಂಜನಾ ಆನಂದ್ ಕೂಡ ಅಭಿನಯಿಸಿದ್ದಾರೆ. ಈ ಜೋಡಿನೂ ಈ ಥಿಯೇಟರ್ ವಿಸಿಟ್ ಪಯಣದಲ್ಲಿದೆ.
ಬೇಲ್ ಸಿನಿಮಾ ಅಕ್ಟೋಬರ್-2 ರಂದು ರಿಲೀಸ್ ಆಗಿದೆ. ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗಿದೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನ ನಿರ್ಮಾಣ ಮಾಡಿದೆ. ಪವನ್ ಒಡೆಯರ್ ಈ ಚಿತ್ರದ ಮೂಲಕ ಒಂದು ಆಸೆ ಈಡೇರಿಸಿಕೊಂಡಿದ್ದಾರೆ. ತಮ್ಮ ಚಿತ್ರ ಜೀವನದಲ್ಲಿ ಒಮ್ಮೆ ಶಿವರಾಜ್‌ಕುಮಾರ್ ಜೊತೆಗೆ ಕೆಲಸ ಮಾಡ್ಬೇಕು ಅಂತಲೇ ಅಂದುಕೊಂಡಿದ್ದರು. ಅದು ಈಗ ನನಸಾಗಿದೆ.
ಮಲ್ಟಿಸ್ಟಾರ್ ಸಿನಿಮಾ
(ಚಿತ್ರ ಕೃಪೆ: ಪವನ್ ಒಡೆಯರ್ ಇನ್ಸ್ಟಾಗ್ರಾಮ್)
ಅಜನೀಶ್ ಲೋಕನಾಥ್ ಬೇಲ್ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಮ್ಯೂಸಿಕ್ ಅನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಈ ಚಿತ್ರದಲ್ಲಿ ಸಾಯಿ ಕುಮಾರ್, ಜಯರಾಮ್ ಅವರು ಜನರ ಹೃದಯ ಗೆದ್ದಿದ್ದಾರೆ. ಇಡೀ ಸಿನಿಮಾದಲ್ಲಿ ಒಳ್ಳೆ ವಿಷಯ ಇದೆ. ಬೇಲ್ ಫೇಲೋ ಪಾಸೋ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.














