Rohit Sharma: ಶತಕ ಮಿಸ್ ಮಾಡಿಕೊಂಡ್ರೂ ಚರಿತ್ರೆ ಸೃಷ್ಟಿಸಿದ ರೋಹಿತ್ ಶರ್ಮಾ! ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲಿಗ | ಕ್ರೀಡಾ ಸುದ್ದಿ | ACTPnews

ರೋಹಿತ್ ಶರ್ಮಾ (PTI)


Last Updated:

ನ್ಯೂ ಚಂಡೀಗಢದ ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

 ರೋಹಿತ್ ಶರ್ಮಾ (PTI)
ರೋಹಿತ್ ಶರ್ಮಾ (PTI)

ಭಾರತ ಕ್ರಿಕೆಟ್ ತಂಡದ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit Sharma) ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ. ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ದಿಷ್ಟ ತಂಡವೊಂದರ ವಿರುದ್ಧ 100 ಸಿಕ್ಸರ್​ ಸಿಡಿಸುವ ಮೂಲಕ, ಈ ಮೈಲಿಗಲ್ಲು ತಲುಪಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 100 ಸಿಕ್ಸರ್‌ಗಳ ಸರದಾರ

ನ್ಯೂ ಚಂಡೀಗಢದ ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20 ಸೇರಿ) 100 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಪಂದ್ಯದ 21ನೇ ಓವರ್‌ನ ಮೊದಲ ಎಸೆತದಲ್ಲಿ ಸಿಡಿಸಿದ ಅದ್ಭುತ ಸಿಕ್ಸರ್ ಮೂಲಕ ಅವರು ಈ ಐತಿಹಾಸಿಕ ಸಾಧನೆ ಮಾಡಿದರು.

ವೆಸ್ಟ್ ಇಂಡೀಸ್ ವಿರುದ್ಧದ 68 ಪಂದ್ಯಗಳನ್ನಾಡಿರುವ ರೋಹಿತ್ ಒಟ್ಟು 100 ಸಿಕ್ಸರ್ ಬಾರಿಸಿದ್ದು, ಇದರಲ್ಲಿ ಏಕದಿನದಲ್ಲಿ 47, ಟಿ20ಯಲ್ಲಿ 39 ಹಾಗೂ ಟೆಸ್ಟ್‌ನಲ್ಲಿ 14 ಸಿಕ್ಸರ್‌ಗಳು ಸೇರಿವೆ.

ಎರಡು ಭಿನ್ನ ತಂಡಗಳ ವಿರುದ್ಧ 100+ ಸಿಕ್ಸರ್ ಹೊಡೆದ ಏಕೈಕ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಪ್ರತ್ಯೇಕ ದೇಶಗಳ ವಿರುದ್ಧ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಚಚ್ಚಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಈಗ ರೋಹಿತ್ ಪಾಲಾಗಿದೆ. ವೆಸ್ಟ್ ಇಂಡೀಸ್ ಮುನ್ನ ಅವರು ಆಸ್ಟ್ರೇಲಿಯಾ ವಿರುದ್ಧ ಬರೋಬ್ಬರಿ 138 ಸಿಕ್ಸರ್‌ಗಳನ್ನು ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಗಳಿಸಿದವರು:

ರೋಹಿತ್ ಶರ್ಮಾ (ಭಾರತ ) 87 ಪಂದ್ಯ, 138 ಸಿಕ್ಸ್ vs ಆಸ್ಟ್ರೇಲಿಯಾ

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 70 ಪಂದ್ಯ, 130 ಸಿಕ್ಸ್ vs ಇಂಗ್ಲೆಂಡ್

ರೋಹಿತ್ ಶರ್ಮಾ (ಭಾರತ) 68 ಪಂದ್ಯ, 100 ಸಿಕ್ಸ್ vs ವೆಸ್ಟ್ ಇಂಡೀಸ್

ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 51 ಪಂದ್ಯ, 87 ಸಿಕ್ಸ್ vs ನ್ಯೂಜಿಲ್ಯಾಂಡ್

ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) 61 ಪಂದ್ಯ, 87 ಸಿಕ್ಸ್ vs| ಭಾರತ

ಮತ್ತೊಂದು ಮೈಲಿಗಲ್ಲು ಜಸ್ಟ್ ಮಿಸ್

ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನೊಂದು ದೊಡ್ಡ ದಾಖಲೆಯನ್ನ ರೋಹಿತ್ ಮಿಸ್ ಮಾಡಿಕೊಂಡರು. ಅವರು ಈ ಪಂದ್ಯದಲ್ಲಿ ಇನ್ನು 3 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧ ಕೇವಲ ಏಕದಿನ (ODI) ಮಾದರಿಯಲ್ಲೇ 50 ಸಿಕ್ಸರ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಆಗುತ್ತಿದ್ದರು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ 47 ಸಿಕ್ಸರ್‌ಗಳೊಂದಿಗೆ ಅವರೇ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ 85 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ಗಳ ಸಹಿತ 92 ರನ್​ಗಳಿಸಿ ಔಟ್ ಆದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed