Jagadhatri Serial: ಜಗದ್ಧಾತ್ರಿ ಸೀರಿಯಲ್‌ನಲ್ಲಿ ಮುಂಗಾರು ಮಳೆ ಸೀನ್; ದೇವದಾಸನಾದ ವಿಜಯ್ ಸೂರ್ಯ! | | ACTPnews

Mokshitha Pai Vijay Suriya Jagaddhatri Kannada serial Mungaru Male Scene Recreate


ಜಗದ್ಧಾತ್ರಿ ಸೀರಿಯಲ್….

ಜಗದ್ಧಾತ್ರಿ ಸೀರಿಯಲ್ ಸಿನಿಮಾ ತರವೇ ಇದೆ. ಸಿನಿಮಾಗಳ ಸೀನ್ ನೋಡಿದ ಅನುಭವ ಆಗುತ್ತದೆ. ಪ್ರತಿ ಸಂಚಿಕೆಯನ್ನು ಚೆನ್ನಾಗಿಯೆ ತೆಗೆದಿದ್ದಾರೆ.
ಜಗದ್ಧಾತ್ರಿ ಸೀರಿಯಲ್ ಅಲ್ಲಿ ಮುಂಗಾರು ಮಳೆ ಸೀನ್!

(ಚಿತ್ರ ಕೃಪೆ: ಜೀ ಕನ್ನಡ ಇನ್​ಸ್ಟಾಗ್ರಾಮ್)

ಈ ಸೀರಿಯಲ್ ಅಲ್ಲಿ ಮೋಕ್ಷಿತಾ ಪೈ ಆ್ಯಕ್ಷನ್ ಮಾಡಿದ್ದಾರೆ. ವಿಜಯ್ ಸೂರ್ಯ ಕೂಡ ಫೈಟ್ ಮಾಡಿದ್ದಾರೆ. ಇವರ ಈ ಸೀರಿಯಲ್ ಇಂಟ್ರಸ್ಟಿಂಗ್ ಆಗಿದೆ.

ಮುಂಗಾರು ಮಳೆ ಸೀನ್

ಈ ಒಂದು ಸೀರಿಯಲ್ ಅಲ್ಲಿ ಜಗದ್ಧಾತ್ರಿ ಮದುವೆ ವಿಷಯ ಬರುತ್ತದೆ. ಅಗ ಜಗದ್ಧಾತ್ರಿ ಓಕೆ ಅಂತಲೇ ಹೇಳ್ತಾರೆ. ಆಗಲೇ ರೋಬೋ ಡಿಂಗಾ ಇಲ್ಲಿ ಒಂದಷ್ಟು ಮೀಮ್ಸ್ ತೋರಿಸುತ್ತದೆ.

ಈ ಒಂದು ಮೀಮ್ಸ್ ಅಲ್ಲಿ ಮುಂಗಾರಿ ಮಳೆ ಚಿತ್ರದ ‘ಈ ದಿಲ್..ಈ ಹೃದಯ’ ಡೈಲಾಗ್ ಇರೋ ದೃಶ್ಯ ಬರುತ್ತದೆ. ಗಣೇಶ್ ಪಾತ್ರವನ್ನ ಇಲ್ಲಿ ವಿಜಯ್ ಸೂರ್ಯ ಮಾಡಿದ್ದಾರೆ. ಪೂಜಾ ಗಾಂಧಿ ಪಾತ್ರವನ್ನ ಮೋಕ್ಷಿತಾ ಪೈ ಮಾಡಿದ್ದಾರೆ.

ವಿಜಯ್ ಸೂರ್ಯ ಸಖತ್

ಗೋಲ್ಡನ್ ಸ್ಟಾರ್ ಗಣೇಶ್ ಈ ಒಂದು ಸೀನ್‌ ಅನ್ನ ತುಂಬಾನೆ ಚೆನ್ನಾಗಿ ಮಾಡಿದ್ದರು.”ನಾನು ಈ ದಿಲ್, ಹೃದಯ… ಅದೇ ಹಾರ್ಟ್ ಅಂತಾರಲ್ಲಾ, ಅಲ್ಲಿಗೆ ಕೈ ಹಾಕಿ ‘ಪರಾ ಪರಾ’ ಅಂತ ಕೆರ್ಕೊಂಡು ಬಿಟ್ಟಿದ್ದೀನಿ ಕಣ್ರೀ! ನಮ್ಮ ಹೃದಯನೇ ಹಾಳಾಗೋಯ್ತು…” ಅಂತಲೆ ಡೈಲಾಗ್ ಹೇಳಿದ್ದಾರೆ.

ಎಣ್ಣೆ ಏಟಿನಲ್ಲಿ ಹೇಳುವ ಈ ಡೈಲಾಗ್ ಫೇಮಸ್ ಆಗಿತ್ತು. ಇಂದಿಗೂ ಇದರ ಕ್ರೇಜ್ ಇದೆ. ಅದೇ ಸೀನ್ ಅನ್ನ ಜಗದ್ಧಾತ್ರಿ ಸೀರಿಯಲ್ ಅಲ್ಲಿ ಮರುಸೃಷ್ಟಿಸಿದ್ದಾರೆ. ವಿಜಯ್ ಸೂರ್ಯ ಇಲ್ಲಿ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಮೋಕ್ಷಿತಾ ಪೈ ಕೂಡ ಸಖತ್ ಆಗಿಯೇ ಸಾಥ್ ಕೊಟ್ಟಿದ್ದಾರೆ.

ಈ ಸೀನ್ ಪ್ರೋಮೋ

ಮುಂಗಾರು ಮಳೆ ಸೀನ್‌ನ ಪ್ರೋಮೋ ಮಾಡಿದ್ದಾರೆ. ಈ ಪ್ರೋಮೋ ಎಲ್ಲರ ಗಮನ ಸೆಳೆಯುತ್ತದೆ. ಸಂಚಿಕೆಯಲ್ಲೂ ಇದು ಬರುತ್ತದೆ.

Mokshitha Pai Vijay Suriya Jagaddhatri Kannada serial Mungaru Male Scene Recreate

ದೇವದಾಸನಾದ ವಿಜಯ್ ಸೂರ್ಯ!

(ಚಿತ್ರ ಕೃಪೆ: ಜೀ ಕನ್ನಡ ಇನ್​ಸ್ಟಾಗ್ರಾಮ್)

ಆ ರೀತಿಯ ಸೀನ್‌ ಈ ಸೀರಿಯಲ್ ಹೆಚ್ಚು ಗಮನ ಸೆಳೆಯುತ್ತಿದೆ. ಆ್ಯಕ್ಷನ್ ಪ್ಯಾಕ್ಡ್ ಸೀನ್‌ಗಳೂ ಈ ಸೀರಿಯಲ್ ಅಲ್ಲಿ ಇವೆ. ಜಗದ್ಧಾತ್ರಿ ಮೋಕ್ಷಿತಾ ಪೈ ಚೆನ್ನಾಗಿ ಮಾಡಿದ್ದಾರೆ. ವಿಜಯ್ ಸೂರ್ಯ ಕೂಡ ಸಖತ್ ಆಗಿಯೇ ಸಾಥ್ ಕೊಟ್ಟಿದ್ದಾರೆ.

ಜೀ ಕನ್ನಡ ಸೀರಿಯಲ್

ಜೀ ಕನ್ನಡದಲ್ಲಿ ಈ ಸೀರಿಯಲ್ ಬರ್ತಿದೆ. ರಾತ್ರಿ 9 ಗಂಟೆಗೆ ಈ ಧಾರವಾಹಿ ಪ್ರಸಾರ ಆಗುತ್ತಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ನೋಡಿದ ಅನುಭವವನ್ನು ಇದು ಕೊಡುತ್ತಿದೆ.

ಈ ಸೀರಿಯಲ್ ಅಲ್ಲಿ ಮೋಕ್ಷಿತಾ ಪೈ ಹೈಲೈಟ್ ಅಂತ ಹೇಳಬಹುದು. ಏಜೆಂಟ್ ಪಾತ್ರದಲ್ಲಿ ಮೋಕ್ಷಿತಾ ಇಲ್ಲಿ ಸಖತ್ ಆಗಿಯೇ ಕೆಲಸ ಮಾಡುತ್ತಿದ್ದಾರೆ.

ವಿಜಯ್ ಸೂರ್ಯ ಕೂಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಜಗದ್ಧಾತ್ರಿ ಮದುವೆ ಸುದ್ದಿ ಕೇಳಿಯೇ ದೇವದಾಸ ಆಗಿ ಬಿಟ್ಟಿದ್ದಾರೆ. ಅದಕ್ಕೇನೆ ಮುಂಗಾರು ಮಳೆ ಹಾರ್ಟ್ ಬ್ರೇಕಿಂಗ್ ಸೀನ್ ಇಲ್ಲಿ ರೀ-ಕ್ರಿಯೇಟ್ ಆಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed