Premada Oorali: ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಧಮಾಕಾ; ಕೋಟಿ ಕೋಟಿ ಗಳಿಸಿ ಮುನ್ನುಗ್ಗಿದ ಸಿನಿಮಾ! | | ACTPnews

Premada Oorali: ಬಾಕ್ಸ್ ಆಫೀಸ್‌ನಲ್ಲಿ 'ಪ್ರೇಮದ ಊರಲಿ' ಧಮಾಕಾ; ಕೋಟಿ ಕೋಟಿ ಗಳಿಸಿ ಮುನ್ನುಗ್ಗಿದ ಸಿನಿಮಾ! |


ಶ್ರೀರಾಮ್ ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ರೇಮದ ಊರಲಿ ಸಿನಿಮಾ ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿತ್ತು. ಸುಮಾರು 2ರಿಂದ 2.50 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಗೆ ಮೊದಲ ದಿನ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿರಲಿಲ್ಲ. ಬಿಡುಗಡೆಯ ದಿನ ಕೇವಲ 13 ಲಕ್ಷ ರೂಪಾಯಿ ಗಳಿಕೆಯೊಂದಿಗೆ ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣ ಆರಂಭವಾಗಿತ್ತು.

ಆದರೆ ಮೊದಲ ದಿನದ ಕಲೆಕ್ಷನ್‌ಗಿಂತ ಸಿನಿಮಾವನ್ನು ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಯೇ ಚಿತ್ರಕ್ಕೆ ದೊಡ್ಡ ಶಕ್ತಿಯಾಯಿತು. ಚಿತ್ರವನ್ನು ವೀಕ್ಷಿಸಿದವರು ತಮ್ಮ ಅನುಭವವನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಲು ಆರಂಭಿಸಿದ ಪರಿಣಾಮ, ನಿಧಾನವಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗತೊಡಗಿತು.

ಇದನ್ನೂ ಓದಿ: Drishyam 3: 100 ಕೋಟಿ ಗಡಿ ಜಸ್ಟ್ ಮಿಸ್; ‘ದೃಶ್ಯಂ 3’ ಮೊದಲ ದಿನವೇ ಭರ್ಜರಿ ಗಳಿಕೆ!

ಸಾಮಾನ್ಯವಾಗಿ ವಾರದ ದಿನಗಳಲ್ಲಿ ಸಿನಿಮಾಗಳ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬರುವುದು ಸಾಮಾನ್ಯ. ಆದರೆ ಪ್ರೇಮದ ಊರಲಿ ವಿಚಾರದಲ್ಲಿ ಇದಕ್ಕೆ ವಿರುದ್ಧವಾದ ಬೆಳವಣಿಗೆ ಕಂಡುಬಂದಿದೆ. ಸೆಪ್ಟೆಂಬರ್ 29ರಂದು ಮಂಗಳವಾರ ಸಿನಿಮಾ ಸುಮಾರು 1.90 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಬಳಿಕ ಬುಧವಾರ 1.28 ಕೋಟಿ ರೂಪಾಯಿ ಹಾಗೂ ಗುರುವಾರ 1.86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಈ ಅಂಕಿ-ಅಂಶಗಳು ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಯನ್ನು ತೋರಿಸುತ್ತವೆ. ಮೊದಲ ದಿನದ ಸೀಮಿತ ಕಲೆಕ್ಷನ್‌ನಿಂದ ಆರಂಭವಾದ ಸಿನಿಮಾ ಕೆಲವೇ ದಿನಗಳಲ್ಲಿ ಕೋಟಿ ರೂಪಾಯಿ ಮಟ್ಟದ ಗಳಿಕೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: Priyanka Chopra: ರಾಜಮೌಳಿಯ ತೆಲುಗು ಫ್ಯಾಂಟಸಿ ಸಿನಿಮಾಗೆ ಪ್ರಿಯಾಂಕಾ ಬೆಂಬಲ

ಅಕ್ಟೋಬರ್ 2ರ ಗಾಂಧಿ ಜಯಂತಿ ರಜಾದಿನ ಪ್ರೇಮದ ಊರಲಿ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣಕ್ಕೆ ಮತ್ತಷ್ಟು ವೇಗ ನೀಡಿದೆ. ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದಿದ್ದಾರೆ. ಈ ದಿನ ಸಿನಿಮಾ 3.16 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಇದರೊಂದಿಗೆ ಬಿಡುಗಡೆಯಾಗಿ ಎಂಟು ದಿನಗಳ ಅಂತ್ಯಕ್ಕೆ ‘ಪ್ರೇಮದ ಊರಲಿ’ ವಿಶ್ವದಾದ್ಯಂತ ಸುಮಾರು 9.82 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ನೆಟ್ ಕಲೆಕ್ಷನ್ ಸುಮಾರು 8.59 ಕೋಟಿ ರೂಪಾಯಿ ಎನ್ನಲಾಗಿದೆ. ಈ ಮೂಲಕ ಸಿನಿಮಾ ಇದೀಗ 10 ಕೋಟಿ ರೂಪಾಯಿ ಗಳಿಕೆಯ ಪ್ರಮುಖ ಮೈಲಿಗಲ್ಲಿನ ಅತ್ಯಂತ ಸಮೀಪದಲ್ಲಿದೆ.

45 ಶೋಗಳಿಂದ 700ಕ್ಕೂ ಅಧಿಕ ಶೋ

ಪ್ರೇಮದ ಊರಲಿ ಸಿನಿಮಾದ ಶೋಗಳ ಸಂಖ್ಯೆಯಲ್ಲಿ ಕಂಡಿರುವ ಬದಲಾವಣೆ ಕೂಡ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಿಡುಗಡೆಯ ದಿನ ರಾಜ್ಯಾದ್ಯಂತ ಕೇವಲ 45ರಿಂದ 60 ಪ್ರದರ್ಶನಗಳೊಂದಿಗೆ ಆರಂಭವಾಗಿದ್ದ ಸಿನಿಮಾ, ಪ್ರೇಕ್ಷಕರ ಬೇಡಿಕೆ ಹೆಚ್ಚಾದಂತೆ ಶೋಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ.

ಎರಡನೇ ವಾರಕ್ಕೆ ಕಾಲಿಟ್ಟಿರುವ ವೇಳೆಗೆ ಸಿನಿಮಾಗೆ ದಿನಕ್ಕೆ 486ರಿಂದ 700ಕ್ಕೂ ಅಧಿಕ ಶೋಗಳು ಲಭ್ಯವಾಗಿವೆ ಎನ್ನಲಾಗಿದೆ. ಆರಂಭದಲ್ಲಿ ಸೀಮಿತ ಪ್ರದರ್ಶನ ಹೊಂದಿದ್ದ ಚಿತ್ರವೊಂದು ಪ್ರೇಕ್ಷಕರ ಬೇಡಿಕೆಯಿಂದಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಶೋಗಳನ್ನು ಪಡೆದುಕೊಂಡಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಮೌತ್ ಪಬ್ಲಿಸಿಟಿಯೇ ಚಿತ್ರದ ದೊಡ್ಡ ಶಕ್ತಿ

ಪ್ರೇಮದ ಊರಲಿ ಸಿನಿಮಾದ ಯಶಸ್ಸಿನ ಹಿಂದೆ ಮೌತ್ ಪಬ್ಲಿಸಿಟಿ ಪ್ರಮುಖ ಕಾರಣವಾಗಿದೆ ಎನ್ನಬಹುದು. ಹಳ್ಳಿಯ ಸೊಗಡಿನ ಸರಳ ಕೌಟುಂಬಿಕ ಕಥೆ, ಮುಗ್ಧ ಪ್ರೀತಿ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಸಿನಿಮಾ ಕುಟುಂಬ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸಿನಿಮಾ ನೋಡಿದವರು ನೀಡಿದ ಉತ್ತಮ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಡಿದೆ.

ಗಾಂಧಿ ಜಯಂತಿಯ ಸರ್ಕಾರಿ ರಜೆ ಪ್ರೇಮದ ಊರಲಿ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಲಾಭ ತಂದಿದೆ. ರಜೆಯ ನಂತರ ಶನಿವಾರ ಮತ್ತು ಭಾನುವಾರ ವಾರಾಂತ್ಯದ ದಿನಗಳು ಎದುರಾಗಿರುವುದರಿಂದ ಮುಂದಿನ ದಿನಗಳಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರೇಕ್ಷಕರ ಸಂಖ್ಯೆ ಸಿಗುವ ನಿರೀಕ್ಷೆಯಿದೆ. ಈಗಾಗಲೇ 10 ಕೋಟಿ ರೂಪಾಯಿ ಗಡಿಯ ಸಮೀಪದಲ್ಲಿರುವ ಸಿನಿಮಾ ಈ ವಾರಾಂತ್ಯದಲ್ಲಿ ಆ ಮೈಲಿಗಲ್ಲನ್ನು ದಾಟುವ ಸಾಧ್ಯತೆಯಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಸವಾಲಾಗಿದೆ ಎಂಬ ಚರ್ಚೆಯ ನಡುವೆಯೇ ಪ್ರೇಮದ ಊರಲಿ ಸಿನಿಮಾದ ಬಾಕ್ಸ್ ಆಫೀಸ್ ಬೆಳವಣಿಗೆ ಗಮನ ಸೆಳೆದಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಚಿತ್ರವೊಂದು ಪ್ರೇಕ್ಷಕರ ಮಾತಿನ ಮೂಲಕವೇ ತನ್ನ ಶೋಗಳನ್ನು ಹೆಚ್ಚಿಸಿಕೊಂಡು ಕೋಟಿ ಕೋಟಿ ಗಳಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed