Producer Hospitalized: ಐಟಿ ದಾಳಿ ಬೆನ್ನಲ್ಲೇ ಬಾಲಿವುಡ್​ನ ಖ್ಯಾತ ನಿರ್ಮಾಪಕ ಆಸ್ಪತ್ರೆಗೆ ದಾಖಲು | Vashu Bhagnani hospitalized in london after it raids in mumbai | | ACTPnews

ವಾಶು ಭಗ್ನಾನಿ

[ad_1]

Last Updated:

ಐಟಿ ದಾಳಿ ನಡೆದ ಕೆಲವೇ ದಿನಗಳಲ್ಲಿ ಬಾಲಿವುಡ್​ನ ಪ್ರಸಿದ್ಧ ಸಿನಿಮಾ ನಿರ್ಮಾಪಕ ಲಂಡನ್​ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಾಶು ಭಗ್ನಾನಿ
ವಾಶು ಭಗ್ನಾನಿ

ಬಾಲಿವುಡ್​ನ (Bollywood) ಖ್ಯಾತ ನಿರ್ಮಾಪಕ ವಶು ಭಗ್ನಾನಿ ಅವರು ಆಸ್ಪತ್ರೆಗೆ (Hospital) ದಾಖಲಾಗಿದೆ ಎನ್ನಲಾಗಿದೆ. ಐಟಿ ದಾಳಿ (IT Riad) ನಡೆದು ಕೆಲವು ದಿನಗಳ ನಂತರ ಅವರು ಲಂಡನ್​ನಲ್ಲಿ (London) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಯಾಕಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಇನ್ನೂ ತಿಳಿದು ಬಂದಿಲ್ಲ.

ಸೆಪ್ಟೆಂಬರ್ 28ರಂದು ಐಟಿ ದಾಳಿ ನಡೆದಿತ್ತು. ಐಟಿ ಇಲಾಖೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್​ಗೆ ಸಂಬಂಧಿಸಿ ಹಲವು ಭಾಗಗಳಲ್ಲಿ ದಾಳಿ ನಡೆಸಿದ್ದರು. ಹಣಕಾಸಿನಲ್ಲಿ ಗೊಂದಲ ಕಾಣಿಸಿಕೊಂಡ ನಂತರ ದಾಳಿ ನಡೆಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಸದ್ಯ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಹಣಕಾಸಿನ ದಾಖಲೆ, ಫಂಡ್ ಟ್ರಾನ್ಸಾಕ್ಷನ್ ಸೇರಿ ಹಲವಾರು ವಿಚಾರಗಳನ್ನು ಪರಿಶೀಲಿಸುತ್ತಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಸೆಪ್ಟೆಂಬರ್ 28, 2026 ರಂದು ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಮಾವ ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕ ವಾಶು ಭಗ್ನಾನಿ ಮತ್ತು ಮುಂಬೈನ ಪನೋರಮಾ ಸ್ಟುಡಿಯೋಗಳಿಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ರೈಡ್ ಮಾಡಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.

ಮುಂಬೈ ಆದಾಯ ತೆರಿಗೆ ಇಲಾಖೆಯು ಚಲನಚಿತ್ರ ಚಟುವಟಿಕೆಗಳ ಮೂಲಕ ತೆರಿಗೆ ವಂಚನೆ ಮತ್ತು ಹಣ ವರ್ಗಾವಣೆಗಾಗಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳನ್ನು ಗುರಿಯಾಗಿಸಿಕೊಂಡು ಮಹತ್ವದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports