Golden Star Ganesh: “ಪ್ರತಿ ಹೆಜ್ಜೆಯಲ್ಲೂ ಶ್ರೀಕೃಷ್ಣನ ಸ್ಮರಣೆ”; ಬೃಂದಾವನ ವಿಶೇಷ ಅನುಭವ ಹಂಚಿಕೊಂಡ ಗೋಲ್ಡನ್ ಸ್ಟಾರ್ | | ACTPnews

Golden Star Ganesh Brindavan Govardhan Giri visit Video Share on social media


ಶ್ರೀಕೃಷ್ಣನ ಬೃಂದಾವನ..

ಗಣೇಶ್ ಪಕ್ಕಾ ಕೃಷ್ಣನೆ ಅನಿಸ್ತಿದ್ದಾರೆ. ಸಾತ್ವಿಕತೆಯನ್ನ ಅಭಿನಯದಲ್ಲಿ ತಂದಿದ್ದಾರೆ ಅನ್ನುವ ಫೀಲ್ ಬರುತ್ತದೆ. ಮಾಡರ್ನ್ ಕೃಷ್ಣ ಅನಿಸುತ್ತಾರೆ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದ ‘ಒಂದೇ ಒಂದು’ ಹಾಡಿನಲ್ಲಿ ಮೇಲೆ ಹೇಳಿದ ಭಾವನೆ ಮೂಡುತ್ತದೆ.

“ಪ್ರತಿ ಹೆಜ್ಜೆಯಲ್ಲೂ ಶ್ರೀಕೃಷ್ಣನ ಸ್ಮರಣೆ”

(ಚಿತ್ರ ಕೃಪೆ: ಗೊಲ್ಡನ್ ಸ್ಟಾರ್ ಗಣೇಶ್ ಇನ್​ಸ್ಟಾಗ್ರಾಮ್)

ಚಿತ್ರಕ್ಕೆ ಬೃಂದಾವಿಹಾರಿ ಅಂತಲೇ ಹೆಸರಿಟ್ಟಿದ್ದಾರೆ. ಹಾಗಾಗಿಯೇ ಚಿತ್ರದಲ್ಲಿ ಶ್ರೀ ಕೃಷ್ಣನ ಛಾಯೆ ಇದ್ದೇ ಇರುತ್ತದೆ. ಅದು ಗಣೇಶ್ ರೂಪದಲ್ಲೂ ಈಗ ಹೊಳೆಯುತ್ತಿದೆ.

ಬೃಂದಾವಿಹಾರಿ ‘ಬೃಂದಾವನ’ ಪಯಣ

ಬೃಂದಾವಿಹಾರಿ ಸಿನಿಮಾ ಇನ್ನೇನು ರಿಲೀಸ್‌ ಆಗುತ್ತಿದೆ. ಅಕ್ಟೋಬರ್-16 ರಂದು ರಿಲೀಸ್ ಆಗುತ್ತಿದೆ. ಇದರ ನಡುವೆ ಗಣೇಶ್ ಒಂದು ಕೆಲಸ ಮಾಡಿದ್ದಾರೆ.

ಶ್ರೀ ಕೃಷ್ಣನ ಬೃಂದಾವನಕ್ಕೂ ಹೋಗಿ ಬಂದಿದ್ದಾರೆ. ಅಲ್ಲಿದ್ದಾಗ ಶ್ರೀಕೃಷ್ಣನನ್ನೆ ಸ್ಮರಿಸಿದ್ದಾರೆ. ವಿಶೇಷ ಪೂಜೆ ಕೂಡ ಮಾಡಿಸಿದ್ದಾರೆ. ಈ ಕ್ಷಣದ ಬಗ್ಗೆ ಸ್ವತಃ ಗಣೇಶ್ ಒಂದಷ್ಟು ಬರೆದುಕೊಂಡಿದ್ದಾರೆ.
ಬೃಂದಾವನದ ‘ಗಣಿ’ಯ ಸಾಲು

ಶ್ರೀಕೃಷ್ಣನ ಲೀಲಾಭೂಮಿ ಬೃಂದಾವನಕ್ಕೆ ಭೇಟಿ ನೀಡಿ, ಗೋವರ್ಧನಗಿರಿಯ ಪರಿಕ್ರಮ ಮಾಡಿದ್ದು ನನ್ನ ಮನಸ್ಸಿಗೆ ಅಪಾರ ಆನಂದ ಕೊಟ್ಟಿತು.

ಪ್ರತಿ ಹೆಜ್ಜೆಯಲ್ಲೂ ಕೃಷ್ಣನನ್ನು ಸ್ಮರಿಸುತ್ತಾ ಸಾಗಿದ ಈ ಯಾತ್ರೆ ಸದಾ ಮನಸ್ಸಿನಲ್ಲಿ ಉಳಿಯಲಿದೆ. ಎಲ್ಲವೂ ಅವನ ಕೃಪೆ ಜೈ ಶ್ರೀ ರಾಧೇ ಕೃಷ್ಣ ಅಂತಲೇ ಗಣೇಶ್ ಬರೆದುಕೊಂಡಿದ್ದಾರೆ.

ಈ ಕ್ಷಣದ ಸ್ಪೆಷಲ್ ವಿಡಿಯೋ

ಗಣೇಶ್ ಅವರು ತಮ್ಮ ಈ ವಿಶೇಷ ಯಾತ್ರೆಯ ಒಂದು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಬೃಂದಾವನ ಮತ್ತು ಗೋವರ್ಧನಗಿರಿಯ ಕ್ಷಣದ ಚಿತ್ರಣವು ಈ ವಿಡಿಯೋದಲ್ಲಿ ಕಾಣಿಸುತ್ತದೆ.

ಗಣೇಶ್ ಈ ಸಲ ತಮ್ಮ ಅಭಿಮಾನಿಗಳಿಗೆ ವಿಶೇಷ ಅನುಭವ ಕೊಡಲಿದ್ದಾರೆ. ಬೃಂದಾವಿಹಾರಿ ಚಿತ್ರ ಆ ರೀತಿನೇ ಇದೆ. ಡೈರೆಕ್ಟರ್ ಶ್ರೀನಿವಾಸ್ ರಾಜು ಈ ಚಿತ್ರ ಮಾಡಿ ತೃಪ್ತರಾಗಿದ್ದಾರೆ.

Golden Star Ganesh Brindavan Govardhan Giri visit Video Share on social media

ಬೃಂದಾವನ ವಿಶೇಷ ಅನುಭವ ಹಂಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್!

(ಚಿತ್ರ ಕೃಪೆ: ಗೊಲ್ಡನ್ ಸ್ಟಾರ್ ಗಣೇಶ್ ಇನ್​ಸ್ಟಾಗ್ರಾಮ್)

ಇನ್ನು ಇವರ ಜೊತೆಗೆ ಬೇರೆ ಚಿತ್ರ ಮಾಡದೇ ಇದ್ದರು ಪರವಾಗಿಲ್ಲ. ಅಷ್ಟು ತೃಪ್ತಿ ಈ ಚಿತ್ರದ ಕೆಲಸದಲ್ಲಿ ಸಿಕ್ಕಿದೆ ಅಂತಲೇ ಹೇಳಿದ್ದಾರೆ.

ಬೃಂದಾವಿಹಾರಿ ಸಿನಿಮಾ

ಬೃಂದಾವಿಹಾರಿ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಕ್ಟೋಬರ್-16 ತೆರೆಗೆ

ಈ ಚಿತ್ರ ಈಗಾಗಲೇ ಹೇಳಿದಂತೆ ಅಕ್ಟೋಬರ್-16 ರಂದು ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿಯೇ ಈ ಚಿತ್ರವನ್ನ ರಿಲೀಸ್ ಮಾಡುವ ಪ್ಲಾನ್ ಕೂಡ ಚಿತ್ರ ತಂಡಕ್ಕೆ ಇದೆ.

ಈ ಚಿತ್ರದ ಹಾಡುಗಳು ಮೋಡಿ ಮಾಡುತ್ತಿವೆ. ಗಣೇಶ್ ಚಿತ್ರ ಜೀವನದಲ್ಲಿ ಈ ಸಿನಿಮಾ ಮತ್ತೊಂದು ಗೆಲುವಿನ ಭರವಸೆ ಮೂಡಿಸಿದೆ.

ಶ್ರೀನಿವಾಸ್ ರಾಜು ಅವರ ಜೊತೆಗಿನ ಈ ಹಿಂದಿನ ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡು ಹಿಟ್ ಆಗಿದ್ದವು. ಸಿನಿಮಾ ಕೂಡ ಹಿಟ್ ಆಗಿತ್ತು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed