Agadha Movie: ಸೂಪರ್‌ನ್ಯಾಚುರಲ್ ಥ್ರಿಲ್ಲರ್ ‘ಅಗಾಧ’ ಒಟಿಟಿಗೆ ಎಂಟ್ರಿ! ಎಲ್ಲಿ? ಯಾವಾಗ ಸ್ಟ್ರೀಮಿಂಗ್ ಗೊತ್ತಾ? | | ACTPnews

Telugu Agadha Movie Zee5 Ott Streaming Latest Updates


ಜೀ-5 ಅಲ್ಲಿ ಅಗಾಧ

ಅಗಾಧ ಒಂದು ಸೂಪರ್ ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ಆಗಿದೆ. ಡೈರೆಕ್ಟರ್ ಎಂ.ಎಸ್.ರಾಜು ಈ ಚಿತ್ರದಲ್ಲಿ ಪುರಾಣ ಪ್ರೇರಿತ ವಿಷಯಗಳನ್ನು ಇಟ್ಟಿದ್ದಾರೆ.

ಬಹು ಭಾಷೆಯಲ್ಲಿ ಲಭ್ಯ

(ಚಿತ್ರ ಕೃಪೆ: ಪಿ.ಆರ್.ಓ)

ಇದನ್ನ ಕೊಡ್ತಾನೇ ಒಂದು ಸೂಪರ್ ನ್ಯಾಚುರಲ್ ಕಥೆ ಹೇಳಿದ್ದಾರೆ. ಇದನ್ನ ಅಷ್ಟೆ ಥ್ರಿಲ್ಲಿಂಗ್ ಆಗಿಯೇ ತೋರಿಸಿದ್ದಾರೆ. ಈ ಚಿತ್ರದಲ್ಲಿ ಮಹಾದೇವಿ ಪಾತ್ರಧಾರಿ ಕಲಾವಿದೆ ಹೆಚ್ಚು ಹೈಲೈಟ್ ಆಗಿದ್ದಾರೆ.

ಕಾಮಾಕ್ಷಿ ಭಾಸ್ಕರ್ಲಾ

ಈ ಚಿತ್ರದಲ್ಲಿ ಮಹಾದೇವಿಯ ಪಾತ್ರವನ್ನ ಕಾಮಾಕ್ಷಿ ಭಾಸ್ಕರ್ಲಾ ನಿರ್ವಹಿಸಿದ್ದಾರೆ. ಇಡೀ ಚಿತ್ರದಲ್ಲಿ ಇವರು ಅದ್ಭುತವಾಗಿಯೇ ನಟಿಸಿದ್ದಾರೆ.

ಮಹಾದೇವಿ ಕಥೆ

ಮಹಾದೇವಿ ಸಂಬಂಧಿ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರ ಕಾರಣ ತಿಳಿಯುತ್ತಲೇ ಒಂದು ಅರಣ್ಯದ ಒಳಗೆ ಮಹಾದೇವಿ ಕಾಲಿಡುತ್ತಾರೆ.

ಈ ಕಾಡಿನಲ್ಲಿರೋ ಗುಹೆ ಒಂದರಲ್ಲೂ ಕಾಲಿಡುತ್ತಾರೆ. ಆಗಲೇ ಇವರಲ್ಲಿ ಒಂದು ಅಗಾಧ ಶಕ್ತಿ ಬಂದು ಬಿಡುತ್ತದೆ. ಮುಂದೆ ಏನೆಲ್ಲ ಅಗುತ್ತದೆ ಅನ್ನುವ ಝಲಕ್ ಅನ್ನ ಚಿತ್ರದ ಟ್ರೈಲರ್ ಕೊಟ್ಟಿದೆ. ಅಷ್ಟೆ ಕುತೂಹಲವನ್ನು ಇದು ಮೂಡಿಸುತ್ತದೆ.

Telugu Agadha Movie Zee5 Ott Streaming Latest Updates

ಜೀ-5 ಅಲ್ಲಿ ಅಗಾಧ

(ಚಿತ್ರ ಕೃಪೆ: ಪಿ.ಆರ್.ಓ)

ಆಗಸ್ಟ್-14 ರಿಲೀಸ್

ಈ ಚಿತ್ರ ಥಿಯೇಟರ್‌ಗೂ ಬಂದಿದೆ. ಇಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಥಿಯೇಟರ್‌ಗೆ ಬಂದು ಹೆಚ್ಚು ಕಡಿಮೆ ಒಂದು ತಿಂಗಳಲ್ಲಿಯೇ ಈ ಸಿನಿಮಾದ ಇದು ಒಟಿಟಿಗೆ ಕಾಲಿಟ್ಟಿದೆ.

ಈ ಸಿನಿಮಾ ಕಳೆದ ಸೆಪ್ಟೆಂಬರ್-25 ರಂದು ಜೀ-5 ಅಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದ ಸೂಪರ್ ನ್ಯಾಚುರಲ್ ಕಂಟೆಂಟ್ ಸಖತ್ ಆಗಿದೆ. ಎಲ್ಲರನ್ನೂ ಇದು ಸೆಳೆಯುತ್ತಿದೆ.

ಬಹು ಭಾಷೆಯಲ್ಲಿ ಲಭ್ಯ

ಅಗಾಧ ಚಿತ್ರ ಬಹು ಭಾಷೆಯಲ್ಲೂ ಲಭ್ಯವಿದೆ. ಇದು ಮೂಲತಃ ತೆಲುಗು ಚಿತ್ರವೇ ಆಗಿದೆ. ಆದರೆ, ಇದು ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲೂ ಇದು ಸ್ಟ್ರೀಮಿಂಗ್ ಆಗುತ್ತಿದೆ.

ಈ ಚಿತ್ರದ ವಿಡಿಯೋ ತುಣುಕುಗಳು ಹೆಚ್ಚು ವೈರಲ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಕ್ಲಿಪ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಆ ರೀತಿನೇ ಈ ಚಿತ್ರ ಕ್ರೇಜ್ ಹುಟ್ಟುಹಾಕಿದೆ.

ಚಿತ್ರದ ಕಾಸ್ಟ್

ಕಾಮಾಕ್ಷಿ ಭಾಸ್ಕರ್ಲಾ,ಉಲ್ಕಾ ಗುಪ್ತಾ, ಶ್ರವಣ್ ರೆಡ್ಡಿ, ಜೋವಿಕಾ ವಿಜಯಕುಮಾರ್ ಹಾಗೂ ಹಿರಿಯ ನಟ ಭಾನುಚಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed