Ilayaraja: ‘ಟ್ಯೂನ್ ಅಷ್ಟೇ ನಿಮ್ಮದು’, ಸುಪ್ರೀಂ ಕೋರ್ಟ್​ನಲ್ಲಿ ಇಳಯರಾಜಾಗೆ ಮುಖಭಂಗ | | ACTPnews

ಇಳಯರಾಜಾ


Last Updated:

ಇಳಯರಾಜಾ ಅವರಿಗೆ ಸುಪ್ರೀಂನಲ್ಲಿ ತೀವ್ರ ಮುಖಭಂಗವಾಗಿದೆ. ಕಾಪಿ ರೈಟ್ ವಿಚಾರದಲ್ಲಿ ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಇಳಯರಾಜಾ ಅರ್ಜಿ ವಜಾ ಆಗಿದೆ.

ಇಳಯರಾಜಾ
ಇಳಯರಾಜಾ

ಇತ್ತೀಚಿನ ವರ್ಷಗಳಲ್ಲಿ ಬಹುಭಾಷಾ ಸಂಗೀತ ಸಂಯೋಜಕ ಇಳಯರಾಜಾ (Ilayaraja) ಅವರು ಹಲವಾರು ಹಾಡುಗಳ ಮೇಲೆ ಕಾಪಿ ರೈಟ್ ಕ್ಲೈಮ್ (Copyright) ಮಾಡುತ್ತಲೇ ಬಂದಿದ್ದಾರೆ. ತಮ್ಮ ಸಿನಿಮಾದ ಹಾಡನ್ನು (Song) ಮಾಡಿಫೈ ಮಾಡಿ ಬಳಸೋದು, ಅಥವಾ ಅದನ್ನು ಅನುಮತಿ ಇಲ್ಲದೆ ಬಳಸಿದ್ದಾರೆ ಹೀಗೆ ಬೇರೆ ಬೇರೆ ಕಾರಣಕ್ಕೆ ಅವರು ಪರಿಹಾರ ಕೋರಿ ಅರ್ಜಿ ಸಲ್ಲಿಸುತ್ತಲೇ ಇರುತ್ತಾರೆ.

ತಮಿಳು ಚಿತ್ರ ಮೂಡು ಪಾನಿ ಚಿತ್ರದ ‘ಎನ್ ಇನಿಯ ಪೊನ್ ನಿಲವೇ’ ಹಾಡಿನ ಸಾಹಿತ್ಯ ಮತ್ತು ಧ್ವನಿಮುದ್ರಣದ ಹಕ್ಕುಸ್ವಾಮ್ಯವೂ ನನ್ನದೇ ಎಂದ ಸಂಗೀತ ಸಂಯೋಜಕ ಇಳಯರಾಜ ಅವರಿಗೆ ಕೋರ್ಟ್ ಶಾಕ್ ಕೊಟ್ಟಿದೆ.

‘ಎನ್ ಇನಿಯ ಪೊನ್ ನಿಲವೇ’ ಹಾಡಿನ ಸಾಹಿತ್ಯ ಮತ್ತು ಧ್ವನಿಮುದ್ರಣದ ಕಾಪಿ ರೈಟ್ ನಿಮ್ಮದಲ್ಲ ಎಂದು ಕೋರ್ಟ್ ಹೇಳಿದ್ದು ಹಿರಿಯ ಸಂಗೀತ ಸಂಯೋಜಕ ಇಳಯರಾಜಾ ತೀವ್ರ ಮುಖಭಂಗ ಅನುಭವಿಸಿದ್ದಾರೆ. ದೆಹಲಿ ಹೈಕೋರ್ಟ್ ಕೊಟ್ಟ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ಹೈಕೋರ್ಟ್ ಆದೇಶವನ್ನೇ ಎತ್ತಿ ಹಿಡಿದಿದೆ.

ಮೇ 26 ರಂದು ಮ್ಯೂಸಿಕ್ ಲೇಬಲ್ ಸರೆಗಮ ಪರವಾಗಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಇಳಯರಾಜ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ತಿರಸ್ಕರಿಸಿತು.

ಇಳಯರಾಜ ಅವರಿಂದ ಪರವಾನಗಿ ಪಡೆದಿದೆ ಎಂದು ಹೇಳಿಕೊಂಡು, ನಿರ್ಮಾಣ ಸಂಸ್ಥೆಯೊಂದು ಹಾಡಿನ ಮರುಸೃಷ್ಟಿಸಿದ ಆವೃತ್ತಿಯನ್ನು ಚಿತ್ರದಲ್ಲಿ ಬಳಸಿಕೊಂಡ ನಂತರ ಹಾಡಿನ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ವಿವಾದ ಹುಟ್ಟಿಕೊಂಡಿತು.

ಮೂಡು ಪಾನಿಯ ಮೂಲ ನಿರ್ಮಾಪಕರಿಂದ ನಿಯೋಜನೆಯ ಮೂಲಕ ಹಾಡಿನ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಹೇಳಿ ಸರೆಗಮ ಅದನ್ನು ಆಕ್ಷೇಪಿಸಿತು.

ದೆಹಲಿ ಹೈಕೋರ್ಟ್ ಅಂತಿಮವಾಗಿ ಇಳಯರಾಜ ಅವರು ಹಾಡಿನ ಸಂಗೀತ ಘಟಕ ಅಥವಾ ಟ್ಯೂನ್‌ನಲ್ಲಿ ಮಾತ್ರ ಹಕ್ಕುಗಳನ್ನು ಉಳಿಸಿಕೊಂಡಿದ್ದಾರೆ. ಸಾಹಿತ್ಯ ಅಥವಾ ಧ್ವನಿ ರೆಕಾರ್ಡಿಂಗ್‌ನಲ್ಲಿ ಅಲ್ಲ ಎಂದು ತೀರ್ಪು ನೀಡಿತು. ಮೇ 21 ರಂದು ಏಕಸದಸ್ಯ ಪೀಠದ ತೀರ್ಪನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed