Last Updated:
PM Narendra Modi spoke with Captain Smit Machchhar: ಸಂಭಾಷಣೆಯ ವೇಳೆ, ಕ್ಯಾಪ್ಟನ್ ಸ್ಮಿತ್ ಘಟನೆಯ ಸಮಯದಲ್ಲಿ ತಮ್ಮ ಅನುಭವಗಳನ್ನು ಮತ್ತು ಆ ಕಷ್ಟದ ಸಮಯದಲ್ಲಿ ಅವರು ಹೇಗೆ ಧೈರ್ಯವನ್ನು ಕಂಡುಕೊಂಡರು ಎಂಬುದನ್ನು ವಿವರಿಸಿದರು. ಪ್ರಧಾನಿ ಮೋದಿ ಅವರ ಧೈರ್ಯವನ್ನು ಶ್ಲಾಘಿಸಿದರು.
PM Modi Speaks To Captain Smit Machchhar: ಫ್ಲೈ-ದುಬೈ ವಿಮಾನ ಅಪಘಾತವನ್ನು ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಾಚರ್ ಅವರೊಂದಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತನಾಡಿದರು.
ಈ ವೇಳೆ ಪ್ರಧಾನಿ ಮೋದಿ ಅವರು ಸ್ಮಿತ್ ಮಾಚರ್ ಬಳಿ ಈ ಭೀಕರ ಘಟನೆಯ ಬಗ್ಗೆ ವಿಚಾರಿಸಿದರು, ಅಂತಹ ಗಂಭೀರ ಅಪಾಯವನ್ನು ಎದುರಿಸುವಾಗ ನಿಮಗೆ ಧೈರ್ಯ ಎಲ್ಲಿಂದ ಬಂತು ಎಂದು ಕೇಳಿದರು. ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಕ್ಯಾಪ್ಟನ್ ಸ್ಮಿತ್ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಪ್ರಧಾನಿ ಶ್ಲಾಘಿಸಿದರು.
ಸಂಭಾಷಣೆಯ ವೇಳೆ, ಕ್ಯಾಪ್ಟನ್ ಸ್ಮಿತ್ ಘಟನೆಯ ಸಮಯದಲ್ಲಿ ತಮ್ಮ ಅನುಭವಗಳನ್ನು ಮತ್ತು ಆ ಕಷ್ಟದ ಸಮಯದಲ್ಲಿ ಅವರು ಹೇಗೆ ಧೈರ್ಯವನ್ನು ಕಂಡುಕೊಂಡರು ಎಂಬುದನ್ನು ವಿವರಿಸಿದರು. ಪ್ರಧಾನಿ ಮೋದಿ ಅವರ ಧೈರ್ಯವನ್ನು ಶ್ಲಾಘಿಸಿದರು ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ವಿಮಾನದಲ್ಲಿದ್ದ ನೂರಾರು ಜನರ ಜೀವಗಳನ್ನು ಉಳಿಸುವಲ್ಲಿ ಕ್ಯಾಪ್ಟನ್ ಸ್ಮಿತ್ ನಿರ್ಣಾಯಕ ಪಾತ್ರ ವಹಿಸಿದ್ದಕ್ಕೆ ಇಡೀ ಜಗತ್ತೇ ಅವರನ್ನು ಅಭಿನಂದಿಸಿದೆ.
ಸಂಭಾಷಣೆಯ ಸಮಯದಲ್ಲಿ, ಆ ಬಿಕ್ಕಟ್ಟಿನ ಸಮಯದಲ್ಲಿ ಹನುಮಾನ್ ಚಾಲೀಸಾ ತಮಗೆ ಧೈರ್ಯ ತುಂಬಿತು ಎಂದು ಸ್ಮಿತ್ ಹೇಳಿದರು. ಕ್ಯಾಪ್ಟನ್ ಮಚ್ಚರ್ ಅವರು ನಿಯಮಿತವಾಗಿ ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ ಹೀಗಾಗಿ ಅದು ತಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು. ಭಗವಾನ್ ಹನುಮಂತನು ತಮ್ಮನ್ನು ಮತ್ತು ವಿಮಾನದಲ್ಲಿದ್ದ ಜನರನ್ನು ರಕ್ಷಿಸಿದಂತೆ ಭಾಸವಾಗುತ್ತಿದೆ ಎಂದು ಹೇಳಿದರು. ಅಪಘಾತದ ಕ್ಷಣವನ್ನು ನೆನಪಿಸಿಕೊಳ್ಳುವಾಗ ಕ್ಯಾಪ್ಟನ್ ಮಚ್ಚರ್ ಭಾವುಕರಾದರು.
ಘಟನೆಯ ಸಮಯದಲ್ಲಿ, ವಿಮಾನವು ನಿಮಿಷಕ್ಕೆ ಸುಮಾರು 23,000 ಅಡಿ ವೇಗದಲ್ಲಿ ಇಳಿಯುತ್ತಿತ್ತು. ನಂತರ, ಅದು ಸುಮಾರು 15,600 ಅಡಿ ಎತ್ತರವನ್ನು ತಲುಪಿತು. ಪ್ರಧಾನಿ ಮೋದಿ ನಿನ್ನೆ ಕ್ಯಾಪ್ಟನ್ ಸ್ಮಿತ್ ಅವರನ್ನು ಹೀರೋ ಎಂದು ಹೊಗಳಿದ್ದಾರೆ. ಗುರುವಾರ, ಅವರು ಪೈಲಟ್ನ ಪತ್ನಿ ಮತ್ತು ಪೋಷಕರೊಂದಿಗೆ ಮಾತನಾಡಿದ ಮೋದಿ, ಸ್ಮಿತ್ ಮತ್ತು ಅವರ ಕುಟುಂಬಕ್ಕೆ ಭಾರತ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ಭರವಸೆ ನೀಡಿದರು.














