Sangolli Rayanna: ಸಂಗೊಳ್ಳಿ ರಾಯಣ್ಣನ ಅಸಲಿ ಕತೆ, ನಂದಗಡ ಮ್ಯೂಸಿಯಂನಲ್ಲಿ ಪ್ರದರ್ಶನ! | | ACTPnews

ಸಂಗೊಳ್ಳಿ ರಾಯಣ್ಣನ ಅಸಲಿ ಕತೆ; ನಂದಗಡ ಮ್ಯೂಸಿಯಂ ಅಲ್ಲಿ ಪ್ರದರ್ಶನ! (ಚಿತ್ರ ಕೃಪೆ: ಸಾಕ್ಷ್ಯಚಿತ್ರ ಟೀಮ್)


Last Updated:

ಸಂಗೊಳ್ಳಿ ರಾಯಣ್ಣನ ನೈಜ ಕತೆ ಮೇಲೆ ಸಾಕ್ಷ್ಯಚಿತ್ರ ರೆಡಿ ಆಗಿದೆ. ಇದನ್ನ ನಂದಗಡದ ವೀರಭೂಮಿ ಮ್ಯೂಸಿಯಂ ಅಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಅನಿಲ್ ಅಣ್ಣಯ್ಯ ಇದನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಈ ಸಾಕ್ಷ್ಯಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸಂಗೊಳ್ಳಿ ರಾಯಣ್ಣನ ಅಸಲಿ ಕತೆ; ನಂದಗಡ ಮ್ಯೂಸಿಯಂ ಅಲ್ಲಿ ಪ್ರದರ್ಶನ! (ಚಿತ್ರ ಕೃಪೆ: ಸಾಕ್ಷ್ಯಚಿತ್ರ ಟೀಮ್)
ಸಂಗೊಳ್ಳಿ ರಾಯಣ್ಣನ ಅಸಲಿ ಕತೆ; ನಂದಗಡ ಮ್ಯೂಸಿಯಂ ಅಲ್ಲಿ ಪ್ರದರ್ಶನ! (ಚಿತ್ರ ಕೃಪೆ: ಸಾಕ್ಷ್ಯಚಿತ್ರ ಟೀಮ್)

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ (Sangolli Rayanna) ಕಥೆ ತೆರೆ ಮೇಲೆ ಬಂದಿದೆ. ಡೈರೆಕ್ಟರ್ ನಾಗಣ್ಣ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ದರ್ಶನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಿದ್ದಾರೆ. ಆದರೆ, ಈಗ ರಾಯಣ್ಣನ ಕತೆಯನ್ನ ಸಾಕ್ಷ್ಯಚಿತ್ರ ರೂಪದಲ್ಲಿ ರೆಡಿ ಮಾಡಿದ್ದಾರೆ. ಡೈರೆಕ್ಟರ್ ಅನಿಲ್ ಅಣ್ಣಯ್ಯ (Anil Annayya) ಈ ಸಾಕ್ಷ್ಯಚಿತ್ರ ಮಾಡಿದ್ದಾರೆ. ಈ ಒಂದು ಸಾಕ್ಷ್ಯಚಿತ್ರ (Documentary) ನಂದಗಡದ ಸಂಗೊಳ್ಳಿ ರಾಯಣ್ಣನ ವೀರಭೂಮಿ ಮ್ಯೂಸಿಯಂ (Veerabhumi Museum) ಅಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಇದನ್ನ ನೋಡಿದ ಜನರ ಅಭಿಪ್ರಾಯವನ್ನ ಸ್ವತಃ ಡೈರೆಕ್ಟರ್ ಅನಿಲ್ ಅಣ್ಣಯ್ಯ ತಿಳಿದುಕೊಂಡಿದ್ದಾರೆ. ಅಷ್ಟೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಇವರ ಮಾತು ಮತ್ತು ಸಾಕ್ಷ್ಯ ಚಿತ್ರದ ಇತರ ವಿವರ ಇಲ್ಲಿದೆ ಓದಿ.

ರಾಯಣ್ಣನ ಸಾಕ್ಷ್ಯಚಿತ್ರ

ಸಂಗೊಳ್ಳಿ ರಾಯಣ್ಣನ ಸಾಕ್ಷ್ಯಚಿತ್ರ ರೆಡಿ ಆಗಿದೆ. ನಂದಗಡದಲ್ಲಿರೋ ರಾಯಣ್ಣನ ವೀರಭೂಮಿ ಮ್ಯೂಸಿಯಂ ಅಲ್ಲಿ ಈ ಡಾಕ್ಯೂಮೆಂಟ್ರಿ ಪ್ರದರ್ಶನ ಆಗುತ್ತಿದೆ.
Sangolli Rayanna documentary screening at Nandagad Veerabhumi Museum

ರಾಯಣ್ಣನ ಸಾಕ್ಷ್ಯಚಿತ್ರ

(ಚಿತ್ರ ಕೃಪೆ: ಸಾಕ್ಷ್ಯಚಿತ್ರ ಟೀಮ್)

ಇದನ್ನ ರೆಡಿ ಮಾಡಲಿಕ್ಕೆ ಡೈರೆಕ್ಟರ್ ಅನಿಲ್ ಅಣ್ಣಯ್ಯ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆ ಕಾಲಘಟ್ಟವನ್ನ ಮರುಸೃಷ್ಟಿ ಮಾಡಿದ್ದಾರೆ. ಕಾಸ್ಟೂಮ್ ಮತ್ತು ಕಲಾವಿದರು ಹೀಗೆ ಎಲ್ಲವನ್ನು ಅಳೆದು ತೂಗಿ ಅಧ್ಯಯನ ಮಾಡಿಯೆ ಈ ಸಾಕ್ಷ್ಯಚಿತ್ರ ಮಾಡಿದ್ದಾರೆ.

ಮ್ಯೂಸಿಯಂ ಅಲ್ಲಿ ಪ್ರದರ್ಶನ

ಸಂಗೊಳ್ಳಿ ರಾಯಣ್ಣನ ಸಾಕ್ಷ್ಯಚಿತ್ರವನ್ನ ಮ್ಯೂಸಿಯಂ ಅಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಮ್ಯೂಸಿಯಂಗೆ ಬಂದ ಜನ ಇಲ್ಲಿ ಸಾಕ್ಷ್ಯಚಿತ್ರದ ಮೂಲಕ ರಾಯಣ್ಣನ ಕತೆಯನ್ನ ತಿಳಿದುಕೊಳ್ಳುತ್ತಿದ್ದಾರೆ.

ಅನಿಲ್ ಅಣ್ಣಯ್ಯ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಸ್ವತಃ ತಾವೇ ಮ್ಯೂಸಿಯಂಗೂ ಹೋಗಿದ್ದಾರೆ. ರಾಯಣ್ಣನ ಸಾಕ್ಷ್ಯಚಿತ್ರ ನೋಡಿದ ಜನರ ಅಭಿಪ್ರಾಯ ಏನು ಅನ್ನೋದನ್ನು ತಿಳಿದುಕೊಂಡಿದ್ದಾರೆ. ಅಲ್ಲಿ ಬಂದ ಜನರನ್ನು ಮಾತನಾಡಿಸುವ ಕೆಲಸ ಕೂಡ ಮಾಡಿದ್ದಾರೆ.

ಅನಿಲ್ ಅಣ್ಣಯ್ಯ ಹೇಳುವುದೇನು

“ಒಬ್ಬ ಸಾಮಾನ್ಯ ವೀಕ್ಷಕನಂತೆ ಇಲ್ಲಿ ನಿಂತು, ಜನರು ಈ ಸಾಕ್ಷ್ಯಚಿತ್ರವನ್ನ ಎಷ್ಟು ಆಳವಾಗಿ ಪ್ರೀತಿಸುತ್ತಿದ್ದಾರೆ ಎಂದು ಅವರ ಬಾಯಿಂದಲೇ ಕೇಳಿದ್ದು ನನಗೆ ಅಪಾರ ತೃಪ್ತಿ ತಂದಿದೆ.

Sangolli Rayanna documentary screening at Nandagad Veerabhumi Museum

ಮ್ಯೂಸಿಯಂ ಅಲ್ಲಿ ಪ್ರದರ್ಶನ

(ಚಿತ್ರ ಕೃಪೆ: ಸಾಕ್ಷ್ಯಚಿತ್ರ ಟೀಮ್)

ಈ ಚಿತ್ರಗಳ ನಿರ್ಮಾಣದ ಹಿಂದೆ ಸುದೀರ್ಘ ಶ್ರಮ, ನಿದ್ರೆಯಿಲ್ಲದ ರಾತ್ರಿಗಳು, ಅಪಾರ ತಾಳ್ಮೆ ಮತ್ತು ಪ್ರತಿಯೊಂದು ಸಣ್ಣ ವಿವರಕ್ಕೂ ನೀಡಿದ ಆದ್ಯತೆ ಅಡಗಿದೆ.

ಇಂದು ಆ ಶ್ರಮ ಪ್ರೇಕ್ಷಕರ ಅನುಭವದ ಮೂಲಕ ಪ್ರದರ್ಶನಗೊಂಡು ಸಾರ್ಥಕತೆ ಪಡೆಯುತ್ತಿರುವುದನ್ನು ನೋಡುವುದೇ ಅತ್ಯಂತ ತೃಪ್ತಿದಾಯಕ ಅನುಭವ,” ಎಂದು ಅನಿಲ್ ಅಣ್ಣಯ್ಯ ಹೇಳಿಕೊಂಡಿದ್ದಾರೆ.

ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಸಂಗೊಳ್ಳಿ ರಾಯಣ್ಣನ ವೀರಭೂಮಿ ನಂದಗಡದಲ್ಲಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಈ ನಂದಗಡದಲ್ಲಿ 13 ಎಕರೆ ಜಾಗದಲ್ಲಿ ಈ ವೀರಭೂಮಿ ಮ್ಯೂಸಿಯಂ ಇದೆ.

ಈ ಒಂದು ಮ್ಯೂಸಿಯಂ ಅಲ್ಲಿ ಸಂಗೊಳ್ಳಿ ರಾಯಣ್ಣನ ನೈಜ ಕತೆಯನ್ನ ಸಾಕ್ಷ್ಯಚಿತ್ರ ರೂಪದಲ್ಲಿ ಕಣ್ತುಂಬಿಕೊಳ್ಳಬಹುದು. ಈ ಮ್ಯೂಸಿಯಂಗೆ ಬರಲು ಮುಕ್ತ ಆಹ್ವಾನ ಇದೆ. ಇಲ್ಲಿಗೆ ಹೋಗುವ ಸಾರ್ವಜನಿಕರು ಸಂಗೊಳ್ಳಿ ರಾಯಣ್ಣನ ಕತೆಯನ್ನ ಚಿತ್ರ ರೂಪದಲ್ಲಿ ನೋಡಬಹುದಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed