Karnataka Ranji Team: ಕರ್ನಾಟಕ ತಂಡಕ್ಕೆ ಹೊಸ ನಾಯಕ! ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕೆ ಹೀಗಿದೆ 15 ಸದಸ್ಯರ ತಂಡ | ಕ್ರೀಡಾ ಸುದ್ದಿ | ACTPnews

ಕರ್ನಾಟಕ ರಣಜಿ ತಂಡ ( File photo: PTI)


Last Updated:

ರಣಜಿ ಟ್ರೋಫಿ ಟೂರ್ನಿಯ ಆಂಧ್ರಪ್ರದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಬ್ಯಾಟರ್ ಆರ್. ಸ್ಮರಣ್ (R. Smaran) ತಂಡವನ್ನು ಮುನ್ನಡೆಸಲಿದ್ದಾರೆ.

 ಕರ್ನಾಟಕ ರಣಜಿ ತಂಡ ( File photo: PTI)
ಕರ್ನಾಟಕ ರಣಜಿ ತಂಡ ( File photo: PTI)

2026-27ರ ಸಾಲಿನ ರಣಜಿ ಟ್ರೋಫಿ (Ranji  Trophy) ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಕರ್ನಾಟಕ ತಂಡ (Karnataka Team) ತನ್ನ ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶದ (Andhra Pradesh) ವಿರುದ್ಧ ಸೆಣಸಾಡಲಿದ್ದು, ಕೆಎಸ್‌ಸಿಎ ತನ್ನ 15 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ವಿಜಯವಾಡದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕರ್ನಾಟಕ ತಂಡವನ್ನ 23 ವರ್ಷದ ಯುವ ಪ್ರತಿಭೆ ಸ್ಮರಣ್ ರವಿಚಂದ್ರನ್ (Smaran Ravichandran) ಮುನ್ನಡೆಸಲಿದ್ದಾರೆ.

ಆರ್. ಸ್ಮರಣ್‌ಗೆ ನಾಯಕತ್ವದ ಜವಾಬ್ದಾರಿ

ಖಾಯಂ ನಾಯಕ ದೇವದತ್ ಪಡಿಕ್ಕಲ್ ಲಭ್ಯವಿಲ್ಲದ ಕಾರಣ ಕಳೆದ ರಣಜಿ ಸೀಸನ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಕರ್ನಾಟಕ ಪರ ಅತಿ ಹೆಚ್ಚು ರನ್ (950 ರನ್) ಗಳಿಸಿದ್ದ 23 ವರ್ಷದ ಯುವ ಆಟಗಾರ ಆರ್. ಸ್ಮರಣ್ ಅವರಿಗೆ ಈ ಬಾರಿ ತಂಡವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು KSCA ನೀಡಿದೆ. ಪಡಿಕ್ಕಲ್ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡವನ್ನ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಪಡಿಕ್ಕಲ್ ಭಾರತ ತಂಡದ ಭಾಗವಾಗಿರುವುದರಿಂದ ಈ ಆವೃತ್ತಿಯಲ್ಲಿ ಕರ್ನಾಟಕ ತಂಡದ ಹಲವು ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಸ್ಮರಣ್‌ಗೆ ನಾಯಕತ್ವ ನೀಡಲಾಗಿದೆ.

ಹಿರಿಯರಿಗೆ ಅವಕಾಶ

ಯುವ ಆಟಗಾರ ತಂಡದ ನಾಯಕರಾಗಿದ್ದರೂ, ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿರುವ ಹಿರಿಯ ಆಟಗಾರರ ಬಲವಿದೆ. ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್, ಹಿರಿಯ ಆರಂಭಿಕ ಆಟಗಾರ ಮಯಾಂಕ್ ಅಗರ್‌ವಾಲ್ ಹಾಗೂ ಅನುಭವಿ ಬ್ಯಾಟರ್ ಕರುಣ್ ನಾಯರ್ ತಂಡದಲ್ಲಿದ್ದಾರೆ. ಉಳಿದಂತೆ ಶ್ರೇಯಸ್ ಗೋಪಾಲ್, ಕೆ.ಎಲ್. ಶ್ರೀಜಿತ್ ಅಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದಾರೆ.

ಸ್ಟಾರ್ ಬೌಲರ್‌ಗಳಾದ ವಿಧ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್ ಹಾಗೂ ವಿಕೆಟ್ ಕೀಪರ್ ಲುವನೀತ್ ಸಿಸೋಡಿಯಾ ಗಾಯದ ಕಾರಣ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿಲ್ಲ. ಪ್ರಸಿದ್ಧ್ ಕೃಷ್ಣ ಕೂಡ ಗಾಯಗೊಂಡಿದ್ದಾರೆ. ಆದರೆ ಅವರನ್ನ 15ರೊಳಗೆ ಆಯ್ಕೆ ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ.

ವಿನಯ್ ಕುಮಾರ್ ಕೋಚಿಂಗ್‌ನಲ್ಲಿ ಮೊದಲ ಬಾರಿ ಕಣಕ್ಕೆ

ಸುಮಾರು 12 ವರ್ಷಗಳ ಹಿಂದೆ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ತಂದುಕೊಟ್ಟಿದ್ದ ಮಾಜಿ ನಾಯಕ ಹಾಗೂ ವೇಗಿ ಆರ್. ವಿನಯ್ ಕುಮಾರ್ ಅವರು ಈ ಬಾರಿ ತಂಡದ ಮುಖ್ಯ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ. ಸುದೀರ್ಘ ವರ್ಷಗಳ ಬಳಿಕ ಮತ್ತೆ ರಣಜಿ ಟ್ರೋಫಿ ಮುಕುಟವನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿ ಕರ್ನಾಟಕ ತಂಡವಿದೆ.

ಕರ್ನಾಟಕ ತಂಡ

ಆರ್. ಸ್ಮರಣ್ (ನಾಯಕ), ಮಯಾಂಕ್ ಅಗರ್ವಾಲ್, ರಾಹುಲ್ ಕೆ.ಎಲ್., ಅನೀಶ್ವರ್ ಗೌತಮ್, ಕರುಣ್ ನಾಯರ್, ಅನೀಶ್ ಕೆ.ವಿ., ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಶಿಖರ್ ಶೆಟ್ಟಿ, ಪ್ರಸಿದ್ಧ್ ಎಂ ಕೃಷ್ಣ, ಅಭಿಲಾಷ್ ಶೆಟ್ಟಿ, ಮನ್ವಂತ್ ಕುಮಾರ್ ಎಲ್., ಕುಮಾರ್ ಎಲ್.ಆರ್., ರಿತೇಶ್ ಭಟ್ಕಳ್ ಮತ್ತು ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್).



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed