Kannada Movies: ಶಿವಣ್ಣನ ಬೇಲ್ ದಿನವೇ ಉತ್ತರ ಕರ್ನಾಟಕದ ಹುಲಿಬೀರ ರಿಲೀಸ್! | | ACTPnews

Bail Shiva Rajkumar Pavan Wadeyar Rural Anjan Hulibeera Movie Release Updates


ಬೇಲ್ ಸಿನಿಮಾ

ಬೇಲ್ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಶಿವರಾಜ್ ಕುಮಾರ್, ಸಾಯಿ ಕುಮಾರ್, ಜಯರಾಮ್ ಈ ಚಿತ್ರದಲ್ಲಿದ್ದಾರೆ. ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ, ಹಾಗೆ ಸುಮ್ಮನೆ ಕಿರಣ್ ಈ ಚಿತ್ರದಲ್ಲಿದ್ದಾರೆ.

ಬೇಲ್ ಸಿನಿಮಾ

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಸೇರಿದಂತೆ ಇನ್ನು ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಪವನ್ ಒಡೆಯರ್ ಡೈರೆಕ್ಷನ್ ಮಾಡಿರೋ ಈ ಚಿತ್ರವನ್ನ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ.

ಅಕ್ಟೋಬರ್-2 ರಿಲೀಸ್

ಬೇಲ್ ಸಿನಿಮಾ ಈ ವಾರ ತೆರೆ ಕಾಣುತ್ತಿದೆ. ಅಕ್ಟೋಬರ್-2 ರಂದು ಈ ಚಿತ್ರ ತೆರೆಗೆ ಬರ್ತಿದೆ. ರಾಜ್ಯದೆಲ್ಲೆಡೆ ಇದು ಬಿಡುಗಡೆ ಆಗುತ್ತಿದೆ.

ಈ ಚಿತ್ರಕ್ಕೆ ವೈದ್ಯ ಎಸ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಟೀಸರ್ ಗಮನ ಸೆಳೆದಿವೆ. ಹಾಡುಗಳು ಜನರನ್ನ ಸೆಳೆದಿವೆ. ಈ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಇದೆ.

ಹುಲಿಬೀರ ಸಿನಿಮಾ

ಹುಲಿಬೀರ ಸಿನಿಮಾ ಕೂಡ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ. ಮದರಂಗಿ ಚಿತ್ರವನ್ನ ಡೈರೆಕ್ಷನ್ ಮಾಡಿದ್ದ ಮಲ್ಲಿಕಾರ್ಜುನ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

Bail Shiva Rajkumar Pavan Wadeyar Rural Anjan Hulibeera Movie Release Updates

ಅಕ್ಟೋಬರ್-2 ರಿಲೀಸ್

(ಚಿತ್ರ ಕೃಪೆ: ರೂರಲ್ ಅಂಜನ್ ಇನ್​ಸ್ಟಾಗ್ರಾಮ್)

ರೂರಲ್ ಅಂಜನ್ ಈ ಸಿನಿಮಾದ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಕತೆ ಇದೆ. ಇಲ್ಲಿಯ ಸೊಗಡು ಸಿನಿಮಾದಲ್ಲಿದೆ.

ರಂಗಾಯಣ ರಘು

ಈ ಚಿತ್ರದ ಮತ್ತೊಂದು ಹೈಲೈಟ್ ಅಂದ್ರೆ ಅದು ರಂಗಾಯಣ ರಘು ನೋಡಿ. ಇವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯ ಅಂದ್ಮೇಲೆ ಅಲ್ಲಿ ವಿಶೇಷ ಇದ್ದೇ ಇರುತ್ತದೆ. ಈ ಚಿತ್ರದಲ್ಲೂ ಅದನ್ನ ನೋಡಬಹುದು.

ವೀರಸಮರ್ಥ ಮ್ಯೂಸಿಕ್

ಈ ಚಿತ್ರಕ್ಕೆ ವೀರಸಮರ್ಥ್ ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಆಗಿವೆ. ಎಲ್ಲರ ಗಮನ ಸೆಳೆಯುವ ಪ್ರಯತ್ನ ಕೂಡ ಮಾಡಿವೆ.

ಚಿತ್ರದ ಟ್ರೈಲರ್ ನೋಡಿದವರು ಇಡೀ ತಂಡಕ್ಕೆ ಒಳ್ಳೆಯದಾಗಲಿ ಅಂತಲೂ ಶುಭಕೋರಿದ್ದಾರೆ. ಬೇಲ್ ಚಿತ್ರ ರಿಲೀಸ್ ಆದ ದಿನವೇ ಕನ್ನಡದ ಈ ಹುಲಿಬೀರ ಸಿನಿಮಾ ತೆರೆ ಕಾಣುತ್ತಿದೆ. ಈ ವಾರ ಕನ್ನಡದಲ್ಲಿ ಈ ಎರಡು ಸಿನಿಮಾಗಳು ಬರ್ತಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed