Darshan-Rachita Ram: ಮಾಫಿ ಸಾಕ್ಷಿ ಸಂಕಷ್ಟದ ಬೆನ್ನಲ್ಲೇ ದರ್ಶನ್ ಭೇಟಿಗೆ ಬಂದ ರಚಿತಾ ರಾಮ್! | Rachita Ram comes to parappana agrahara to meet darshan | | ACTPnews

ರಚಿತಾ ರಾಮ್-ದರ್ಶನ್ (ಚಿತ್ರ ಕೃಪೆ: ನ್ಯೂಸ್​18 ಕನ್ನಡ)


Last Updated:

Darshan: ರೇಣುಕಾಸ್ವಾಮಿ ಕೇಸ್​​ನಲ್ಲಿ ದರ್ಶನ್ ಸತತ ಹಿನ್ನಡೆ ಎದುರಿಸುತ್ತಿರುವಾಗಲೇ ರಚಿತಾ ರಾಮ್ ಅವರು ನಟನ ಭೇಟಿಗೆ ಬಂದಿದ್ದಾರೆ.

ರಚಿತಾ ರಾಮ್-ದರ್ಶನ್ (ಚಿತ್ರ ಕೃಪೆ: ನ್ಯೂಸ್​18 ಕನ್ನಡ)
ರಚಿತಾ ರಾಮ್-ದರ್ಶನ್ (ಚಿತ್ರ ಕೃಪೆ: ನ್ಯೂಸ್​18 ಕನ್ನಡ)

ನಟ ದರ್ಶನ್​ಗೆ (Darshan) ಸಂಕಷ್ಟ ಶುರುವಾಗಿದೆ. ಮಾಫಿಸಾಕ್ಷಿಯ (Approver) ಚಾಲೆಂಜ್ ಮತ್ತಷ್ಟು ಹೆಚ್ಚಾಗಿದೆ. ಈ ಕೆಲವು ದಿನಗಳಲ್ಲಿ ನಟ ದರ್ಶನ್​ಗೆ ರೇಣುಕಾಸ್ವಾಮಿ ಕೇಸ್​ಗೆ (Renukaswamy Case) ಸಂಬಂಧಿಸಿ ಸಾಕಷ್ಟು ಹಿನ್ನಡೆಯಾಗಿದೆ. ಈ ಸಂದರ್ಭದಲ್ಲಿ ಖ್ಯಾತ ನಟಿ ರಚಿತಾ ರಾಮ್ (Rachita Ram) ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ.

ದರ್ಶನ್ ಭೇಟಿಗಾಗಿ ರಚಿತಾ ರಾಮ್ ಕಾಯುತ್ತಿರುವ ದೃಶ್ಯ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ. ಹೊಸರೋಡ್ ಮುಖ್ಯರಸ್ತೆಯಲ್ಲಿ ರಚಿತಾ ರಾಮ್ ಕಾಯುತ್ತಿದ್ದು ಜೈಲು ಅಧಿಕಾರಿಗಳಿಂದ ಅನುಮತಿ ಸಿಗದ ಹಿನ್ನೆಲೆ ವೈಟ್ ಮಾಡುತ್ತಿದ್ದಾರೆ.

ಜೈಲಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ನಟಿ ರಚಿತಾ ರಾಮ್ ಕಾಯುತ್ತಿದ್ದು, ಎರಡು ಕಾರುಗಳಲ್ಲಿ ಬಂದಿರುವ ರಚಿತ ರಾಮ್ ಹಾಗೂ ಆಪ್ತರು, ಮಧ್ಯಾಹ್ನದಿಂದ ಕಾಯುತ್ತಿದ್ದಾರೆ. ಮಾಧ್ಯಮದವರನ್ನು ನೋಡಿ ಅಲ್ಲಿಂದ ಹೊರಟ ರಚಿತಾ ರಾಮ್ ಅವರು ದರ್ಶನ್ ಒಪ್ಪಿ ಜೈಲಾಧಿಕಾರಿಗಳು ಅನುಮತಿ ನೀಡಿದರೆ ಇಂದು ನಟನನ್ನು ಭೇಟಿ ಮಾಡಲಿದ್ದಾರೆ.

2 ಅನುಮತಿ ಇದ್ದರೆ ಮಾತ್ರ ಭೇಟಿಗೆ ಅವಕಾಶ ನೀಡಬಹುದು. ಇಲ್ಲದಿದ್ದರೆ ರಚಿತಾ ನಿರಾಸೆಯಿಂದ ವಾಪಸ್ ಆಗಬೇಕಾಗಿರುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed