Last Updated:
ಭಾರತದ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಪೂವಮ್ಮ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಆದ್ರೆ, ರಾಜ್ಯ ಸರ್ಕಾರ ಮಾತ್ರ ಚಿನ್ನದ ಹುಡುಗಿಯನ್ನ ಮರೆತಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಕನ್ನಡದ ಕುವರಿ ಪೂವಮ್ಮ (Poovamma) ಚಿನ್ನದ (Gold) ಜೊತೆಗೆ ಬೆಳ್ಳಿ ಪದಕದಲ್ಲಿ ಮುತ್ತಿಕ್ಕಿದ್ದಾರೆ. ಈ ಮೂಲಕ ದೇಶದ ಜೊತೆಗೆ ಕರ್ನಾಟಕದ ಪತಾಕೆಯನ್ನೂ ಹಾರಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಸಾಧಕಿಯನ್ನು ಮರೆತಿದೆ.
ಪೂವಮ್ಮನ ಪದಕ ಬೇಟೆ ಭರ್ಜರಿಯಾಗಿ ಸಾಗಿದೆ. ಮಿಕ್ಸ್‌ಡ್ ರಿಲೇಯಲ್ಲೂ ಪೂವಮ್ಮ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಚಿನ್ನದ ಜೊತೆಗೆ ಬೆಳ್ಳಿಯನ್ನೂ ಬಾಚಿಕೊಂಡಿದ್ದಾರೆ. ಸತತವಾಗಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸುವುದರ ಜೊತೆಗೆ 3 ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇವರದ್ದು. ಇಷ್ಟೆಲ್ಲಾ ಸಾಧನೆ ಮಾಡಿದರೂ ಯಾರೊಬ್ಬರೂ ಸ್ಮರಿಸೋ ಕೆಲಸ ಮಾಡಿಲ್ಲ. ಒಟ್ಟಿನಲ್ಲಿ ಕನ್ನಡದ ಸಾಧಕಿಯ ಸಾಧನೆಯನ್ನು ಕೊಂಡಾಡೋ ಕೆಲಸ ಆಗಬೇಕು. ಈಗಲಾದರೂ ಹೆಮ್ಮೆಯ ಪೂವಮ್ಮಗೆ ಒಂದೊಳ್ಳೆ ಸ್ವಾಗತ ಕೋರೋ ಕೆಲಸ ಮಾಡಬೇಕಿದೆ.
(ವರದಿ: ಕಿಶನ್ ಶೆಟ್ಟಿ, ನ್ಯೂಸ್18 ಕನ್ನಡ, ಮಂಗಳೂರು)














