Bigg Boss 13: ದೊಡ್ಮನೆಯಲ್ಲಿ ಮತ್ತೆ ಕಿತ್ತಾಟ; ಗಾನವಿ ಕಣ್ಣೀರು, ಸೋನಿಕಾ ಸಿಟ್ಟು ತಾರಕಕ್ಕೆ! | | ACTPnews

Bigg Boss Kannada Wild Card Entry Contestants Ganavi Sonika Fight


ವೈಲ್ಡ್ ಕಾರ್ಡ್ ಸ್ಪರ್ಧಿಗಳ ಜಗಳ…

ದೊಡ್ಮನೆಗೆ ಮೂವರು ಜನ ಹೋಗಿದ್ದಾರೆ. ಗಿಚ್ಚಿ ಗಿಲಿಗಿಲಿ ಪ್ರಶಾಂತ್, ಹಳ್ಳಿ ಪವರ್ ಘಾಟಿ ಗಾನವಿ, ನಟಿ ಸೋನಿಕಾ ಗೌಡ ಮನೆಗೆ ಕಾಲಿಟ್ಟಿದ್ದಾರೆ.

ದೊಡ್ಮನೆಯಲ್ಲಿ ಗಾನವಿ-ಸೋನಿಕಾ ಜಗಳ

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಆದರೆ, ಗಾನವಿ ಮತ್ತು ಸೋನಿಕಾ ಕಿತ್ತಾಡಿಕೊಂಡಿದ್ದಾರೆ. ಗಾನವಿ ಸ್ಟ್ರಾಂಗ್ ಆಗಿಯೇ ಇದ್ದಾರೆ. ಸೋನಿಕಾ ಸೈಲೆಂಟ್ ಅನಿಸುತ್ತಾರೆ. ಆದರೆ, ಜಗಳಕ್ಕೆ ನಿಂತರೆ ಇವರೂ ಜೋರು ನೋಡಿ. ಥರ್ಡ್ ಕ್ಲಾಸ್ ನೀನು ಅಂತ ಗಾನವಿಗೆ ಸೋನಿಕಾ ಗೌಡ ಮೈದಾಡಿದ್ದಾರೆ.

ಆಟದ ಜಗಳ ಕಣ್ಣಿರಲ್ಲಿ ಕೊನೆ

ಗಾನವಿ ಗೌಡ ಮತ್ತು ಸೋನಿಕಾ ಗೌಡ ಜಗಳ ತಾರಕಕ್ಕೇರಿದೆ. ಇದರಿಂದ ಸೋನಿಕಾ ಸಿಟ್ಟು ಹೆಚ್ಚಾಗಿದೆ. ಸೋನಿಕಾ ಗೌಡ ಎದುರು ಜಗಳಕ್ಕೆ ನಿಂತ ಗಾನವಿ ಕೂಡ ಕೌಂಟರ್ ಕೊಟ್ಟಿದ್ದಾರೆ.

ಸೌಂದರ್ಯ ಶೆಟ್ಟಿ

ಸೌಂದರ್ಯ ಶೆಟ್ಟಿ ಈ ಜಗಳದ ನಡುವೆ ಇದ್ದಾರೆ. ನಮಗೂ ಅವಕಾಶ ಇತ್ತು. ನಾವು ಬಿಟ್ಟುಕೊಟ್ಟಿದ್ದೇವೆ ಅನ್ನುವ ಅರ್ಥದಲ್ಲಿಯೇ ಹೇಳುತ್ತಾರೆ.

ಇದರಿಂದಲೋ ಜಗಳ ಶುರು ಆದಂತೆ ಇದೆ. ಇನ್ನುಳಿದಂತೆ ದೊಡ್ಮನೆಯಲ್ಲಿ ಟಾಸ್ಕ್ ಜೋರಾಗಿವೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಸ್ಪರ್ಧಿಗಳಲ್ಲಿ ಗಾನವಿ ಟಾಸ್ಕ್ ಆಡುತ್ತಿದ್ದಾರೆ. ಸೋನಿಕಾ ಗೌಡ ಜಗಳದಿಂದಲೇ ಸೌಂಡ್ ಮಾಡುತ್ತಿದ್ದಾರೆ ಅಂತಲೂ ಹೇಳಬಹುದು.

Bigg Boss Kannada Wild Card Entry Contestants Ganavi Sonika Fight

ಗಾನವಿ ಕಣ್ಣು, ಸೋನಿಕಾ ಭಯಂಕರ ಸಿಟ್ಟು

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ದೊಡ್ಮನೆಯಲ್ಲಿ…

ದೊಡ್ಮನೆಯಲ್ಲ ಗಾನವಿ ಗೌಡ ಬಂದ್ಮೇಲೆ ಒಂಚೂರು ಹಲ್‌ಚಲ್ ಎದ್ದಿದೆ. ಸೋನಿಕಾ ಗೌಡ ಕೂಡ ವಿಚಾರದಲ್ಲಿ ಭಾಗಿ ಆಗಿದ್ದಾರೆ.
ಬಿಗ್ ಬಾಸ್ ಹೌಸ್

ಬಿಗ್ ಬಾಸ್ ಮನೆಯಲ್ಲಿ ಆಟ ತೀವ್ರತೆ ಪಡೆಯುತ್ತಿದೆ. ಮನೆಯಿಂದ ಮೂರು ಜನ ಹೋಗಿದ್ದಾರೆ. ಮೂರು ಜನ ವಾಪಾಸ್ ಬಂದಿದ್ದಾರೆ.

ಹೋದವರಲ್ಲಿ ಅವಿನಾಶ್, ಪ್ರಥಮ ಪ್ರಸಾದ್, ವೈಷ್ಣವಿ ವಿ.ಕೌಂಡಿನ್ಯ ಇದ್ದಾರೆ. ಓಂ ಪ್ರಕಾಶ್ ರಾವ್ ಅನಾರೋಗ್ಯದಿಂದಲೇ ಆಟವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.

ತಾಂಡವ್ ರಾಮ್ ವಾಪಾಸ್

ಮನೆಯಿಂದ ಎಮರ್ಜೆನ್ಸಿ ಎಕ್ಸಿಟ್ ಆದ ತಾಂಡವ್ ರಾಮ್ ವಾಪಾಸ್ ಬಂದಿದ್ದಾರೆ. ಆದರೆ, ಇವರನ್ನ ಯಾವ ರೀತಿ ಮನೆ ಒಳಗೆ ಬಿಡ್ತಾರೆ ಅನ್ನುವ ಕುತೂಹಲ ಇದ್ದೇ ಇದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed