Last Updated:
ಬೆಂಗಳೂರು BMRCL 73 ಕಿಮೀ ಹೊಸ Metro ಕಾರಿಡಾರ್ ಯೋಜನೆ ಪೂರ್ಣ ಅಧ್ಯಯನ, ಕಲೇನ ಅಗ್ರಹಾರದಿಂದ ಕಾಡುಗೋಡಿ Tree Park, ಜಿಗಣಿ Spur ಮೂಲಕ ಕ್ರಿಕೆಟ್ ಕ್ರೀಡಾಂಗಣಕ್ಕೂ ಸಂಪರ್ಕ.
ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್‍ನಲ್ಲಿ (Traffic) ಸಿಲುಕಿ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ (Metro) ಒಂದು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ (Bengaluru) ಇತಿಹಾಸದಲ್ಲೇ ಅತಿ ಉದ್ದದ ಸಿಂಗಲ್ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ (BMRCL) ಈಗ ಕಾರ್ಯಸಾಧ್ಯತಾ ಅಧ್ಯಯನವನ್ನು ಪೂರ್ಣಗೊಳಿಸಿದೆ. ಇದು ಬರೋಬ್ಬರಿ 73 ಕಿಲೋಮೀಟರ್ ಉದ್ದದ ಬೃಹತ್ ಯೋಜನೆಯಾಗಿದ್ದು, ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳನ್ನು ಬೆಸೆಯಲಿದೆ.
ಇತ್ತೀಚೆಗೆ ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್-ಶಾ ಅವರು 80,000 ಆಸನಗಳ ಕ್ರೀಡಾಂಗಣಕ್ಕೆ ಮೆಟ್ರೋ ಸಂಪರ್ಕವಿಲ್ಲದಿದ್ದರೆ ಅದು ವ್ಯರ್ಥವದಂತೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ ಈಗಿನ ಯೋಜನೆಯಂತೆ ಕ್ರೀಡಾಂಗಣದ ಪಕ್ಕದಲ್ಲೇ ಒಂದು ನಿಲ್ದಾಣ ಮತ್ತು ಇಂಡ್ಲವಾಡಿಯಲ್ಲಿ ಮತ್ತೊಂದು ನಿಲ್ದಾಣ ನಿರ್ಮಾಣವಾಗಲಿದೆ. ಇಡೀ 73 ಕಿ.ಮೀ ಮಾರ್ಗವು ಎತ್ತರಿಸಿದ ಮಾರ್ಗ ಆಗಿರಲಿದೆ ಎಂಬುದು ಗಮನಾರ್ಹ.
Bangalore,Karnataka
May 05, 2026 10:26 AM IST













