Last Updated:
Ranveer Singh: ನಟ ರಣವೀರ್ ಸಿಂಗ್ ಅವರು ಬಾಲಿವುಡ್ನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವಾಗಲೇ ಅವರ ವಿಡಿಯೋ ಒಂದು ವೈರಲ್ ಆಗಿದೆ.
ನಟ ರಣವೀರ್ ಸಿಂಗ್ ಅವರಿಗೆ ಧುರಂಧರ್ 2 ಸಕ್ಸಸ್ ಬೆನ್ನಲ್ಲೇ ಸಮಸ್ಯೆಗಳು ಕಾಡುತ್ತಲೇ ಇದೆ. ಅವರು ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಡಾನ್ 3 (Don 3) ಸಿನಿಮಾದಿಂದ ನಟ ದಿಢೀರ್ ಹೊರನಡೆದ ವಿಚಾರ ಇದೀಗ ದೊಡ್ಡ ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸಿನಿಮಾ ನೌಕರರ ಒಕ್ಕೂಟ FWICE ನಟನ ವಿರುದ್ಧ ಗಂಭೀರ ಆದೇಶ ಹೊರಡಿಸಿದೆ. ಈ ಹಿನ್ನೆಲೆ, ನಟ ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಪರೋಕ್ಷವಾಗಿ ಬ್ಯಾನ್ (Ban) ಮಾಡಲಾಗಿದೆ.
ಅದರ ಬೆನ್ನಲ್ಲಿಯೇ ರಣವೀರ್ ಸಿಂಗ್ ಅವರು ಚಾಮುಂಡಿ ಕ್ಷಮೆ ಕೇಳುತ್ತಿರುವ ವಿಡಿಯೋವನ್ನು ಪಬ್ಲಿಕ್ ನೆಕ್ಸ್ಟ್ ಪೋಸ್ಟ್ ಮಾಡಿದೆ. ಹಲವಾರು ವಿವಾದಗಳ ಮಧ್ಯೆ ರಣವೀರ್ ಸಿಕ್ಕಿ ಹಾಕಿಕೊಳ್ಳುತ್ತಿರುವಾಗಲೇ ಈ ವಿಡಿಯೋ ಬಂದಿದೆ.
ದೈವದ ಅವಹೇಳನ ಮಾಡಿದ ಬಾಲಿವುಡ್ ನಟ ರಣವೀರ್ ಸಿಂಗ್ ಕೊನೆಗೂ ಕ್ಷಮೆ ಕೇಳಿ ತಾಯಿ ಚಾಮುಂಡೇಶ್ವರಿ ಎದುರು ಮಂಡಿಯೂರಿದ್ದಾರೆ. ಕಾಂತಾರ ಸಿನಿಮಾದ ಕುರಿತು ಬಾಲಿವುಡ್ ನಟ ರಣವೀರ ಸಿನಿಮಾ ಇವೆಂಟ್ ಒಂದರಲ್ಲಿ ಅವಹೇಳನ ಮಾಡಿದ ಅವನ ದೆವ್ವಕ್ಕೆ ಹೋಲಿಸಿದರು. ಈ ವಿಚಾರವಾಗಿ ಹಿರಿಯ ವಕೀಲ ಪ್ರಶಾಂತ್ ತೀವ್ರ ಹೋರಾಟ ನಡೆಸಿ ಕೋರ್ಟ್ ಮೊರೆ ಹೋಗಿ ರಣ್‌ವೀರ್ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದರು.
ನಂತರ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಈ ವೇಳೆ ವಕೀಲ ಪ್ರಶಾಂತ ಮೇಲೆ ಹಲವು ಒತ್ತಡ ಬಂದರು. ವಕೀಲರು ಹಿಂದೆ ಸರಿಯದೆ ತಾಯಿ ಚಾಮುಂಡಿ ಎದುರು ಕ್ಷಮೆ ಕೇಳಿದ್ರೆ ಕೇಸಿನಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು.
ಅದರಂತೆ ರಣವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಕ್ಷಮೆ ಕೇಳಿದ್ದಾರೆ. ಇದು ಹಿರಿಯ ವಕೀಲ ಪ್ರಶಾಂತ ಮೂಲಕ ಕನ್ನಡಿಗರಿಗೆ ದೊಡ್ಡ ಗೆಲುವು ಎನ್ನಬಹುದು ಎಂದು ‘ಪಬ್ಲಿಕ್ ನೆಕ್ಸ್ಟ್’ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದೆ.
ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಮತ್ತು ರಿತೇಶ್ ಸಿಧ್ವಾನಿ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಡಾನ್ 3 ನಿರ್ಮಾಣಕ್ಕೆ ಸಿದ್ಧವಾಗಿತ್ತು. ಚಿತ್ರಕಥೆ, ಸೆಟ್ ವಿನ್ಯಾಸ, ಲೊಕೇಷನ್ ಫೈನಲ್, ತಾಂತ್ರಿಕ ಸಿದ್ಧತೆ ಹೀಗೆ ಅನೇಕ ಹಂತಗಳು ಪೂರ್ಣಗೊಂಡಿದ್ದವು. ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಣವೀರ್ ಸಿಂಗ್ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಈ ನಿರ್ಧಾರವು ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟ ತಂದುಕೊಟ್ಟಿದೆ ಎನ್ನಲಾಗುತ್ತಿದ್ದು, ಕೋಟ್ಯಂತರ ರೂಪಾಯಿ ಪ್ರಿ-ಪ್ರೊಡಕ್ಷನ್ ಹಂತದಲ್ಲೇ ಖರ್ಚಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಜೊತೆಗೆ FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿ, ಚಿತ್ರೀಕರಣ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಟರು ಹೀಗಾಗಿ ಅನಿರೀಕ್ಷಿತವಾಗಿ ಹಿಂದೆ ಸರಿಯುವುದು ಸಿನಿಮಾ ಉದ್ಯಮಕ್ಕೆ ದೊಡ್ಡ ಹೊಡೆತವಾಗುತ್ತದೆ ಎಂದು ಹೇಳಿದ್ದಾರೆ.
Bangalore,Karnataka
May 26, 2026 12:09 PM IST













