Bail Movie: ಹ್ಯಾಟ್ರಿಕ್ ಹೀರೋ ಶಿವಣ್ಣನ ಆಂಥೆಮ್ ಅಬ್ಬರ; ‘ಬೇಲ್’ ಹವಾ ಬಲು ಜೋರು! | | ACTPnews

Director Pavan Wadeyar Bail movie title song Shivanna anthem Released


ಬೇಲ್ ರೆಡಿ ಇದೆ

ಬೇಲ್ ಸಿನಿಮಾ ರೆಡಿ ಆಗಿದೆ. ಮುಂದಿನ ತಿಂಗಳು ಇದು ರಿಲೀಸ್ ಆಗುತ್ತಿದೆ. ಅಕ್ಟೋಬರ್-2 ರಂದು ಇದು ತೆರೆ ಕಾಣುತ್ತಿದೆ. ಈ ಚಿತ್ರವನ್ನ ಡೈರೆಕ್ಟರ್ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ.
ಶಿವಣ್ಣನ ಆಂಥೆಮ್; ಇದು ಬೇಲ್ ಸಿನಿಮಾ ಹವಾ

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ಹಿಮಾಚಲದ ಧರ್ಮಶಾಲಾದಲ್ಲಿ ಈ ಸಿನಿಮಾ ಚಿತ್ರೀಕರಣ ಆಗಿದೆ. ಕೊನೆ ಹಂತದ ಶೂಟಿಂಗ್ ಇಲ್ಲಿಯೇ ಆಗಿದೆ. ಈ ಚಿತ್ರದಲ್ಲಿ ಶಿವಣ್ಣನ ಪಾತ್ರದ ಖದರ್ ಜೋರಾಗಿದೆ. ನಿವೃತ್ತಿ ಆದರೂ ಪೊಲೀಸ್ ಖದರ್ ಹೋಗಿರೋದಿಲ್ಲ. ಆ ರೀತಿಯ ಪಾತ್ರವೇ ಇದಾಗಿದೆ.

ಫಸ್ಟ್ ಟೀಸರ್

ಚಿತ್ರದ ಫಸ್ಟ್ ಟೀಸರ್ ನಿಜಕ್ಕೂ ಚೆನ್ನಾಗಿದೆ. ಶಿವಣ್ಣನ ಪಾತ್ರದ ಖದರ್ ಝಲಕ್ ಇಲ್ಲಿ ಸಿಕ್ಕಿತ್ತು. ಟ್ರೈಲರ್ ಅಲ್ಲಿ ಇದರ ಮುಂದುವರೆದ ಭಾಗ ಇತ್ತು.

ಶಿವಣ್ಣನ ಆಂಥೆಮ್

ಬೇಲ್ ಚಿತ್ರದ ಒಂದು ಹೊಸ ಹಾಡು ರಿಲೀಸ್ ಆಗಿದೆ. ಇದು ಶಿವಣ್ಣನ ಆಂಥೆಮ್ ಆಗಿದೆ. ಇದರಲ್ಲಿ ಶಿವಣ್ಣನ ಪಾತ್ರಗಳ ಖದರ್ ಇದೆ.

ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇದೆ. ಅದಕ್ಕೂ ಮೊದಲೇ ಈ ಹಾಡು ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.

Director Pavan Wadeyar Bail movie title song Shivanna anthem Released

ಬೇಲ್ ರೆಡಿ ಇದೆ

(ಚಿತ್ರ ಕೃಪೆ: ಪವನ್ ಒಡೆಯರ್ ಇನ್​ಸ್ಟಾಗ್ರಾಮ್)

ತ್ರಿಲೋಕ್ ತ್ರಿವಿಕ್ರಮ್

ಶಿವಣ್ಣನ ಈ ಒಂದು ಆಂಥಮ್ ಅನ್ನ ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದಾರೆ. ಇದಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಮಾಡಿದ್ದಾರೆ.

ಹಾಡುಗಾರಿಕೆ ಅಂತ ಬಂದಾಗ ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ. ಇನ್ನುಳಿದಂತೆ ಬೇಲ್ ಚಿತ್ರದಲ್ಲಿ ಹಲವು ಕಲಾವಿದರಿದ್ದಾರೆ.

ಸಂಜನಾ-ದೀಕ್ಷಿತ್ ಶೆಟ್ಟಿ

ಈ ಚಿತ್ರದಲ್ಲಿ ಹೊಸಬರೂ ಇದ್ದಾರೆ. ಹಳಬರೂ ಇದ್ದಾರೆ. ಶಿವಣ್ಣ, ಸಾಯಿ ಕುಮಾರ್, ಜಯರಾಮ್ ನಟಿಸಿದ್ದಾರೆ. ಇನ್ನೊಂದು ಕಡೆಗೆ ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಇದ್ದಾರೆ.

ಈ ಚಿತ್ರದಲ್ಲಿ ಪವನ್ ಒಡೆಯರ್ ಗಂಭೀರವಾದ ವಿಷಯವನ್ನೆ ಹೇಳುತ್ತಿದ್ದಾರೆ. ಅದು ಟ್ರೈಲರ್ ಮತ್ತು ಟೀಸರ್‌ ಮೂಲಕವೇ ತಿಳಿಯುತ್ತದೆ. ಆದರೆ, ಇದು ಪೊಲೀಸ್ ಆಫೀಸರ್ ಒಬ್ಬರ ಕತೆ ಅಂತಲೂ ಅನಿಸುತ್ತದೆ.

ಹಲವು ಕಲಾವಿದರು

ಈ ಚಿತ್ರ ಮತ್ತೊಂದು ವಿಶೇಷ ಅಂದ್ರೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಕನ್ನಡದ ಕಲಾವಿದರಿಗೂ ಇಲ್ಲಿ ಚಾನ್ಸ್ ಇದೆ. ಸುನಿಲ್ ಪುರಾಣಿಕ್ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅಭಿನಯಿಸಿದ್ದಾರೆ.

ಈ ಸಿನಿಮಾದಲ್ಲಿ ಹಾಸ್ಯ ನಟ ಜಗ್ಗಪ್ಪ ಇದ್ದಾರೆ. ಹಾಗೆ ಸುಮ್ಮನೆ ನಾಯಕ ನಟ ಕಿರಣ್ ನಟಿಸಿದ್ದಾರೆ. ಇವರೂ ಕೂಡ ಇಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ. ಹೀಗೆ ಈ ಬೇಲ್ ಸಿನಿಮಾ ಸಾಕಷ್ಟು ವಿಷಯಗಳನ್ನ ಒಳಗೊಂಡಂತೆ ಕಾಣುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports