Last Updated:
13 ವರ್ಷದ ಇಸಾ ಬಟ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಧೂಳೆಬ್ಬಿಸಿದ್ದಾರೆ.
ವೈಭವ್ ಸೂರ್ಯವಂಶಿ (Vaibhav Suryavanshi), ಜಸ್ಟ್ 15 ವರ್ಷದಲ್ಲೇ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ (Batting) ಮೂಲಕ ಮೈದಾನದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ (International Cricket) ಪದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ಪುತ್ರನೊಬ್ಬ ತನ್ನ 13ನೇ ವಯಸ್ಸಿನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಜಾ ಅವರ ಮಗ ಇಸಾ ಬಟ್, ಕೇವಲ 13ನೇ ವಯಸ್ಸಿನಲ್ಲಿ 20 ಭರ್ಜರಿ ಸಿಕ್ಸರ್ಗಳೊಂದಿಗೆ 279 ರನ್ಗಳ ಅಸಾಧಾರಣ ಇನ್ನಿಂಗ್ಸ್ ಆಡಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
13 ವರ್ಷದ ಇಸಾ ಬಟ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಪಂದ್ಯದ ವೇಳೆ ಹೆಲೆನಿಕ್ ಅಕಾಡೆಮಿ (Hellenic Academy) ಪರವಾಗಿ ಆಡಿದ ಇಸಾ ಬಟ್, ಸಿಬಿಸಿ ವಿರುದ್ಧ ಕೇವಲ 146 ಎಸೆತಗಳಲ್ಲಿ 279 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ. 191.10 ರ ಸ್ಟ್ರೈಕ್ ರೇಟ್ನಲ್ಲಿ ಆಡಿದ ಇವರ ಇನ್ನಿಂಗ್ಸ್ನಲ್ಲಿ 20 ಸಿಕ್ಸರ್ಗಳು ಮತ್ತು 30 ಬೌಂಡರಿಗಳು ಸೇರಿದ್ದವು.
ಇಸಾ ಬಟ್ ಅವರ ಪ್ರಕಾರ, ಅವರ ತಂದೆಯ ವಯಸ್ಸು ಹೆಚ್ಚಾಗುತ್ತಿದ್ದು, ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ತಮಗೆ 18 ವರ್ಷ ತುಂಬುವವರೆಗೆ ತಮ್ಮ ತಂದೆ ಕನಿಷ್ಠ ಯಾವುದಾದರೂ ಒಂದು ಮಾದರಿಯ ಕ್ರಿಕೆಟ್ನಲ್ಲಾದರೂ ಮುಂದುವರಿಯುತ್ತಾರೆ ಎಂದು ಅವರು ಆಶಿಸುತ್ತೇನೆ. ತಂದೆಯೊಂದಿಗೆ ಒಂದು ಪಂದ್ಯ ಆಡಬೇಕು, ಆ ನಂತರ ಅವರು ಬೇಕಾದರೂ ನಿವೃತ್ತರಾಗಬಹುದು ಎಂದು ಇಸಾ ಬಟ್ ಹೇಳಿದ್ದಾರೆ.














