Bigg Boss: ಬಿಗ್ ಬಾಸ್‌ನಲ್ಲಿ ಈ ಕಾಮನ್ ಮ್ಯಾನ್ ಸಂಭಾವನೆ ದಿನಕ್ಕೆ ₹7.5 ಲಕ್ಷ! ಸೆಲೆಬ್ರಿಟಿಗಳಿಗೆ ಶಾಕ್ ಕೊಟ್ಟ ಸ್ಪರ್ಧಿ | | ACTPnews

ಸಾಂಕೇತಿಕ ಚಿತ್ರ


Last Updated:

ಈ ಕಾಮನ್ ಮ್ಯಾನ್ ದಿನಕ್ಕೆ 7.5 ಲಕ್ಷ ಸಂಭಾವನೆ ಪಡೆದು, ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಫರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ತೆಲುಗು ಸೀಸನ್ 10 ರಲ್ಲಿ ಯಾರೂ ಊಹಿಸದ ಇತಿಹಾಸ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಅಗ್ನಿಪರೀಕ್ಷೆ ಸೀಸನ್ 2 ಮೂಲಕ ಗಮನ ಸೆಳೆದು, ವೈಲ್ಡ್ ಕಾರ್ಡ್ (Wild Card) ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದ ಫಿಟ್ನೆಸ್ ಮಾಡೆಲ್ ಮಿಥಿಲೇಶ್ ರೆಡ್ಡಿ (Mithilesh Reddy), ಕೇವಲ ಎರಡೇ ದಿನಗಳಲ್ಲಿ ಶೋನಿಂದ ಹೊರಬಂದಿದ್ದಾರೆ. ಆದರೆ, ದಿನಕ್ಕೆ 7.5 ಲಕ್ಷ ಸಂಭಾವನೆ ಪಡೆದು, ಬಿಗ್​ ಬಾಸ್​ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತೆಲುಗು ಬಿಗ್​ ಬಾಸ್​ ಶುರುವಾದ ಮೊದಲ ದಿನದಿಂದಲೇ ಜಗಳಗಳೊಂದಿಗೆ ರಂಗು ಪಡೆದುಕೊಳ್ಳುತ್ತಿದೆ. ಮೊದಲ ದಿನದಿಂದಲೇ ಕಂಟೆಸ್ಟೆಂಟ್‌ಗಳು ತಮ್ಮದೇ ಆದ ತಂತ್ರಗಾರಿಕೆಗಳೊಂದಿಗೆ ಆಟವಾಡುತ್ತಿದ್ದಾರೆ. ಇತ್ತೀಚೆಗೆ ಅಪೂರ್ವ ಮತ್ತು ಮಿಥಿಲೇಶ್ ಹೌಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದರು.

ಇದನ್ನೂ ಓದಿ: Bigg Boss 13: ಬಿಗ್ ಬಾಸ್‌ಗೆ ಮೂವರ ಎಂಟ್ರಿ; ಇದ್ರಲ್ಲಿ ಇಬ್ಬರು ಹುಡುಗಿಯರು! ಯಾರು ಗೊತ್ತಾ?

ಸದ್ಯ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸುತ್ತಿರುವ ವರದಿಗಳ ಪ್ರಕಾರ, ಕಂಟೆಸ್ಟೆಂಟ್ ಮಿಥಿಲೇಶ್ ಬಿಗ್ ಬಾಸ್ ಹೌಸ್‌ನಿಂದ ಹೊರಬಂದ ರೀತಿ ಮತ್ತು ಅವರು ಪಡೆದ ಭಾರಿ ಮೊತ್ತದ ಸಂಭಾವನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಟೆಲಿವಿಷನ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಕೇವಲ ಎರಡು ದಿನಗಳಲ್ಲಿ ಅವರು ಗಳಿಸಿದ ಈ ಸಂಪಾದನೆ ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮೈಲಿಗಲ್ಲಾಗಿ ನಿಂತಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಶೋಗಳಲ್ಲಿ ಭಾಗವಹಿಸುವ ಕಂಟೆಸ್ಟೆಂಟ್‌ಗಳಿಗೆ ಅವರು ಮನೆಯಲ್ಲಿ ಕಳೆದ ವಾರಗಳ ಆಧಾರದ ಮೇಲೆ ಸಂಭಾವನೆ ನೀಡಲಾಗುತ್ತದೆ. ಆದರೆ, ಮಿಥಿಲೇಶ್ ಮಾತ್ರ ಬಿಗ್ ಬಾಸ್ ನೀಡಿದ ಆಫರ್ ಸ್ವೀಕರಿಸಿ, ಕೇವಲ ಎರಡು ದಿನಗಳು ಮಾತ್ರ ಮನೆಯಲ್ಲಿದ್ದು 15 ಲಕ್ಷ ಸೂಟ್​ಕೇಸ್​ ತೆಗೆದುಕೊಂಡು ಹೊರಬಂದಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ನೋಡಿದರೆ, ದಿನಕ್ಕೆ  7.5 ಲಕ್ಷ ಸಂಭಾವನೆ ಪಡೆದಿದ್ದಾರೆ. ಹಿಂದೆ ಎಷ್ಟೋ ಜನ ಪ್ರಮುಖ ಸೆಲೆಬ್ರಿಟಿಗಳು ವಾರಗಟ್ಟಲೆ ಮನೆಯಲ್ಲಿ ಕಷ್ಟಪಟ್ಟು ಸಂಪಾದಿಸುತ್ತಿದ್ದ ಮೊತ್ತವನ್ನು, ಮಿಥಿಲೇಶ್ ಕೇವಲ 48 ಗಂಟೆಗಳಲ್ಲಿ ಅಂದರೆ ಕೇವಲ ಎರಡು ದಿನಗಳಲ್ಲಿ ಪಡೆದುಕೊಂಡಿದ್ದಾರೆ.
ವಿನ್ನರ್ ಪ್ರೈಸ್ ಮನಿಗೇ ಬಿತ್ತು ಕತ್ತರಿ!

ವಾರಾಂತ್ಯದ ಎಪಿಸೋಡ್‌ನಲ್ಲಿ ಸೀಸನ್‌ನ ಹೋಸ್ಟ್ ಅಕ್ಕಿನೇನಿ ನಾಗಾರ್ಜುನ ಅವರು ವೈಲ್ಡ್ ಕಾರ್ಡ್ ಮೂಲಕ ಬಂದ ಹೊಸ ಸ್ಪರ್ಧಿಗಳಿಗೆ ಒಂದು ಭರ್ಜರಿ ಆಫರ್​ ನೀಡಿದ್ದರು. ಆರಂಭದಲ್ಲಿ ನಾಗಾರ್ಜುನ ಅವರು 5 ಲಕ್ಷ ಹಣದ ಸೂಟ್‌ಕೇಸ್ ಆಫರ್ ಕೊಟ್ಟಿದ್ದರು. ಮಿಥಿಲೇಶ್ ನಿರಾಕರಿಸಿದಾಗ, ಆಫರ್ ಮೊತ್ತವನ್ನು 10 ಲಕ್ಷ ಹಾಗೂ ಕೊನೆಯದಾಗಿ ಬರೋಬ್ಬರಿ 15 ಲಕ್ಷಕ್ಕೆ ಹೆಚ್ಚಿಸಲಾಯಿತು.

ಮಿಥಿಲೇಶ್ ಹಣ ತೆಗೆದುಕೊಳ್ಳಲು ಒಪ್ಪುತ್ತಿದ್ದಂತೆ ಹೋಸ್ಟ್ ನಾಗಾರ್ಜುನ ಅವರು ಮನೆಮಂದಿಗೆ ಮತ್ತೊಂದು ಬಿಗ್ ಶಾಕ್ ನೀಡಿದರು. ಈ ₹15 ಲಕ್ಷ ಹಣವನ್ನು ಶೋನ ಅಂತಿಮ ವಿನ್ನರ್ ಸಿಗುವ ಒಟ್ಟು ಪ್ರೈಸ್ ಮನಿಯಿಂದ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದರು. ಸದ್ಯ, ಮಿಥಿಲೇಶ್ ಅವರ ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಮತ್ತು ಬಿಗ್ ಬಾಸ್ ವೀಕ್ಷಕರು ಮಿಥಿಲೇಶ್ ನಿರ್ಧಾರವನ್ನು ಶ್ಲಾಘಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed