Last Updated:
ಭಾರತೀಯ ರೈಲ್ವೆಯ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ನಗರಗಳನ್ನು ವೇಗ ರೈಲಿನಿಂದ ಜೋಡಿಸಿ ಪ್ರಯಾಣ ಸಮಯ ಕಡಿಮೆ ಮಾಡಿ ಆರ್ಥಿಕತೆಗೆ ಬೂಸ್ಟ್ ನೀಡಲಿದೆ
ಭಾರತೀಯ ರೈಲ್ವೆ (Indian Railways) ಇಲಾಖೆ ಈಗ ಹಳಿಗಳ ಮೇಲೆ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ರೂಪಿಸಲಾಗಿರುವ ‘ಹೈ-ಸ್ಪೀಡ್ ಡೈಮಂಡ್ ಕಾರಿಡಾರ್’ (Diamond Corridor) ಯೋಜನೆ ಭಾರತದ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ. ನೀವು ಬೆಂಗಳೂರಿನಿಂದ (Bengaluru) ಚೆನ್ನೈಗೆ ಹೋಗಲು ಅಥವಾ ಮುಂಬೈನಿಂದ ಪುಣೆಗೆ (Pune) ಪ್ರಯಾಣಿಸಲು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ಸಿಲುಕಬೇಕಿಲ್ಲ, ಏಕೆಂದರೆ ಈ ಹೊಸ ಯೋಜನೆಯು ವಿಮಾನದ ವೇಗದಲ್ಲಿ ನಿಮ್ಮನ್ನು ಗುರಿ ಮುಟ್ಟಿಸಲಿದೆ.
ಮುಂಬೈ ಟು ಪುಣೆ: ಕೇವಲ 50 ನಿಮಿಷ.
ಚೆನ್ನೈ ಟು ಬೆಂಗಳೂರು: ಕೇವಲ 73 ನಿಮಿಷ.
ಅಮರಾವತಿ ಟು ಹೈದರಾಬಾದ್ ಸುಮಾರು 70 ನಿಮಿಷ.
ಹೈದರಾಬಾದ್ ಟು ಬೆಂಗಳೂರು: ಕೇವಲ 2 ಗಂಟೆ.
ಈ ಕಾರಿಡಾರ್ ಕೇವಲ ಜನರನ್ನು ಕರೆದೊಯ್ಯುವುದು ಮಾತ್ರವಲ್ಲದೆ, ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಲಿದೆ. ಸರಕುಗಳ ಸಾಗಣೆ ವೇಗವಾಗಿ ನಡೆಯುವುದರಿಂದ ವ್ಯಾಪಾರ ವಹಿವಾಟು ಹೆಚ್ಚಲಿದೆ. ಅಲ್ಲದೆ, ಪ್ರತಿದಿನ ಕೆಲಸಕ್ಕಾಗಿ ನಗರಗಳ ನಡುವೆ ಓಡಾಡುವ ಐಟಿ ಉದ್ಯೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.
Bangalore,Karnataka













