Virat Kohli: ಅಭಿಮಾನಿಗಳಿಗೆ ಬಿಗ್ ಶಾಕ್! ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ | ಕ್ರೀಡಾ ಸುದ್ದಿ | ACTPnews

ವಿರಾಟ್ ಕೊಹ್ಲಿ


Last Updated:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಸೆಪ್ಟೆಂಬರ್ 27, ಭಾನುವಾರದಿಂದ ಶುರುವಾಗಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತ (India) ಮತ್ತು ವೆಸ್ಟ್ ಇಂಡೀಸ್ (West Indies) ನಡುವೆ ಮೂರು ಏಕದಿನ (ODI) ಪಂದ್ಯಗಳ ಸರಣಿ (Series) ಸೆಪ್ಟೆಂಬರ್ 27ರಂದು ಶುರುವಾಗಲಿದೆ. ಎಲ್ಲಾ ಆಟಗಾರರು ನೆಟ್ಸ್​​ನಲ್ಲಿ ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಇಂಗ್ಲೆಂಡ್ (England) ಪ್ರವಾಸದ ನಂತರ ವಿರಾಟ್ ಕೊಹ್ಲಿ (Virat kohli) ಈ ಸರಣಿಯಲ್ಲಿ ಮೊದಲ ಬಾರಿ ಆಡಲಿದ್ದಾರೆ. ಅಭಿಮಾನಿಗಳು (Fans) ಅವರನ್ನು ನೋಡಲು ಕಾಯುತ್ತಿದ್ದಾರೆ. ಸರಣಿ ಶುರುವಾಗುವ ಮೊದಲು ವಿರಾಟ್ ಒಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ನಿಂದ ನಿವೃತ್ತಿಯಾಗುವ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಹೌದು, ಐಸಿಸಿ 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಐಸಿಸಿ ಇದರ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಆಡುವುದು ಬಹುತೇಕ ಫಿಕ್ಸ್ ಆಗಿದೆ. ಇದೇ ವಿಶ್ವಕಪ್ ತಮ್ಮ ಕೊನೆಯ ಟೂರ್ನಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿಶ್ವಕಪ್ ಗೆಲ್ಲಲು ತಮ್ಮೆಲ್ಲಾ ಶಕ್ತಿ ಹಾಕುತ್ತೇನೆ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಹೇಳಿದ್ದೇನು?

ಜಿಯೋ ಹಾಟ್‌ಸ್ಟಾರ್‌ನಲ್ಲಿ ವಿರಾಟ್ ಕೊಹ್ಲಿ ಮಾತನಾಡಿದರು. ಅವರು ಟೀಮ್ ಇಂಡಿಯಾದ ಯುವ ಆಟಗಾರರು ಮತ್ತು ನಾಯಕ ಶುಭಮನ್ ಗಿಲ್ ಬಗ್ಗೆಯೂ ಹೇಳಿಕೆ ನೀಡಿದರು. 2027 ರ ಏಕದಿನ ವಿಶ್ವಕಪ್‌ಗೆ ತಾವು ಲಭ್ಯವಿರುವುದಾಗಿ ಕೊಹ್ಲಿ ದೃಢಪಡಿಸಿದರು.

ನಾಯಕನನ್ನು ಶ್ಲಾಘಿಸಿದ ಕೊಹ್ಲಿ

ಶುಭಮನ್ ಗಿಲ್ ಏಕದಿನ ಭಾರತ ತಂಡದ ನಾಯಕ. ಅವರ ನಾಯಕತ್ವದ ಬಗ್ಗೆ ಕೊಹ್ಲಿ ಮಾತನಾಡಿದ್​ದಾರೆ. “ಗಿಲ್ ಇನ್ನೂ ನಾಯಕತ್ವ ಕಲಿಯುತ್ತಿದ್ದಾರೆ. ಈ ಹುದ್ದೆಗೆ ಅವರು ಹೊಸಬರು. ತಂಡವನ್ನು ಮುನ್ನಡೆಸಲು ಅವರಿಗೆ ಸರಿಯಾದ ದೃಷ್ಟಿ ಮತ್ತು ಉತ್ಸಾಹ ಇದೆ. ಮೈದಾನದಲ್ಲಿ ಅವರ ಯೋಜನೆ ಸ್ಪಷ್ಟವಾಗಿದೆ.

ಗಿಲ್ ಅವರು ಭಾರತೀಯ ಕ್ರಿಕೆಟ್‌ನ್ನು ಸುಲಭವಾಗಿ ಮುಂದೆ ಕೊಂಡೊಯ್ಯುತ್ತಾರೆ. ಬಹಳ ಕಾಲ ನಾಯಕರಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ನಾನು ನಂಬುತ್ತೇನೆ. ಅವರು ಯಾವಾಗಲೂ ಮೈದಾನದಲ್ಲಿ ಬೇರೆ ರೀತಿಯಲ್ಲಿ ಆಡುವುದನ್ನು ಯೋಚಿಸುತ್ತಿರುತ್ತಾರೆ. ಇದೇ ಅವರನ್ನು ವಿಶೇಷವಾಗಿಸುತ್ತದೆ.” ಎಂದಿದ್ದಾರೆ.

ವಿಶ್ವಕಪ್‌ನಲ್ಲಿ ಕೊಹ್ಲಿ ದಾಖಲೆ ಹೇಗಿದೆ?

ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನಲ್ಲಿ ಬಹಳಷ್ಟು ರನ್ ಗಳಿಸಿದ್ದಾರೆ. ಅವರ ದಾಖಲೆ ಅದ್​ಭುತವಾಗಿದೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ 37 ಇನ್ನಿಂಗ್ಸ್‌ನಲ್ಲಿ 1795 ರನ್ ಕಲೆ ಹಾಕಿದ್ದಾರೆ. ಕೊಹ್ಲಿ ಹೆಸರಿನಲ್ಲಿ 5 ಶತಕ ಮತ್ತು 12 ಅರ್ಧಶತಕಗಳಿವೆ. ಸಚಿನ್ ತೆಂಡೂಲ್ಕರ್ 44 ಇನ್ನಿಂಗ್ಸ್‌ನಲ್ಲಿ 2278 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಮುಂದಿನ ವಿಶ್ವಕಪ್‌ನಲ್ಲಿ ವಿರಾಟ್ 2000 ರನ್ ದಾಟಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed