Matthew Breetzke: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ! ಏಕದಿನ ಕ್ರಿಕೆಟ್​​ನಲ್ಲಿ ಚರಿತ್ರೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾದ ಮ್ಯಾಥ್ಯೂ ಬ್ರಿಟ್ಜ್ಕೆ  | ಕ್ರೀಡಾ ಸುದ್ದಿ | ACTPnews

ಮ್ಯಾಥ್ಯೂ ಬ್ರಿಟ್ಜ್ಕೆ (Photo: AFP)


Last Updated:

ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ (ODI) ಪಂದ್ಯದಲ್ಲಿ ಮ್ಯಾಥ್ಯೂ ಬ್ರಿಟ್ಜ್ಕೆ  ಭರ್ಜರಿ ಶತಕ ಸಿಡಿಸಿದ ಅವರು, ಪಾಕಿಸ್ತಾನದ ಇಮಾಮ್-ಉಲ್-ಹಕ್ ಹಳೆಯ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ.

 ಮ್ಯಾಥ್ಯೂ ಬ್ರಿಟ್ಜ್ಕೆ (Photo: AFP)
ಮ್ಯಾಥ್ಯೂ ಬ್ರಿಟ್ಜ್ಕೆ (Photo: AFP)

ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಮ್ಯಾಥ್ಯೂ ಬ್ರಿಟ್ಜ್ಕೆ (Matthew Breetzke) ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ (ODI) ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಅವರು, ಪಾಕಿಸ್ತಾನದ ಇಮಾಮ್-ಉಲ್-ಹಕ್ ಹಳೆಯ ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಮೊದಲ 14 ಇನ್ನಿಂಗ್ಸ್‌ಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ನಂಬರ್-1 ಬ್ಯಾಟರ್ ಎಂಬ ಕೀರ್ತಿಗೆ ಈಗ ಮ್ಯಾಥ್ಯೂ ಬ್ರಿಟ್ಜ್ಕೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಇಮಾಮ್-ಉಲ್-ಹಕ್ ಹೆಸರಿನಲ್ಲಿತ್ತು. ಅವರು ತಮ್ಮ ಮೊದಲ 14 ಇನ್ನಿಂಗ್ಸ್‌ಗಳಲ್ಲಿ 759 ರನ್ ಗಳಿಸಿದ್ದರು ಆದರೆ ಬ್ರಿಟ್ಜ್ಕೆ ಈಗ 822 ರನ್ ಗಳಿಸುವ ಮೂಲಕ ಇಮಾಮ್ ಅವರನ್ನು ಹಿಂದಿಕ್ಕಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಶತಕ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಬ್ರಿಟ್ಜ್ಕೆ, ಕೇವಲ 106 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 112 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಪಂದ್ಯಕ್ಕೂ ಮುನ್ನ ಅವರು 13 ಇನ್ನಿಂಗ್ಸ್‌ಗಳಲ್ಲಿ 710 ರನ್ ಗಳಿಸಿದ್ದರು. ಈ ಶತಕದೊಂದಿಗೆ ಅವರ ಒಟ್ಟು ರನ್ ಸಂಖ್ಯೆ 14 ಇನ್ನಿಂಗ್ಸ್‌ಗಳಿಂದ 822 ಕ್ಕೆ ಏರಿದೆ. ಬ್ರಿಟ್ಜ್ಕೆ ಫೆಬ್ರವರಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ತಮ್ಮ ಚೊಚ್ಚಲ (Debut) ಪಂದ್ಯದಲ್ಲೇ 150 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಸದ್ಯ ಅವರು 15 ಏಕದಿನ ಪಂದ್ಯಗಳಿಂದ 2 ಶತಕ ಹಾಗೂ 6 ಅರ್ಧಶತಕಗಳನ್ನು ಗಳಿಸಿದ್ದಾರೆ.

ಮಾರ್ಕೊ ಯೆನ್ಸನ್ ಜೊತೆ ಶತಕದ ಜೊತೆಯಾಟ

ದಕ್ಷಿಣ ಆಫ್ರಿಕಾ ತಂಡವು 165ಕ್ಕೆ 5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ರಿಟ್ಜ್ಕೆ ಮತ್ತು ಆಲ್‌ರೌಂಡರ್ ಮಾರ್ಕೊ ಯೆನ್ಸನ್ ಜೋಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿಯು 6ನೇ ವಿಕೆಟ್‌ಗೆ ಕೇವಲ 81 ಎಸೆತಗಳಲ್ಲಿ 107 ರನ್‌ಗಳ ಅದ್ಭುತ ಜೊತೆಯಾಟ ಆಡಿತು. ಯೆನ್ಸನ್ ಅವರು 59 ಎಸೆತಗಳಲ್ಲಿ 75 ರನ್ ಗಳಿಸಿ ಬ್ರಿಟ್ಜ್ಕೆಗೆ ಉತ್ತಮ ಸಾಥ್ ನೀಡಿದರು.

ದಕ್ಷಿಣ ಆಫ್ರಿಕಾದ 6ನೇ ವಿಕೆಟ್‌ ಜಂಟಿ ದಾಖಲೆಗಳು

ಆಸ್ಟ್ರೇಲಿಯಾ ವಿರುದ್ಧ 6ನೇ ವಿಕೆಟ್‌ಗೆ ದಕ್ಷಿಣ ಆಫ್ರಿಕಾ ಪರ ಮೂಡಿಬಂದ ಎರಡನೇ ಅತಿ ದೊಡ್ಡ ಜೊತೆಯಾಟ ಇದಾಗಿದೆ. 2006ರಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಶಾನ್ ಪೊಲಾಕ್ ಜೋಡಿ ಆಸೀಸ್ ವಿರುದ್ಧ ಗಳಿಸಿದ್ದ 119 ರನ್ ಮೊದಲ ಸ್ಥಾನದಲ್ಲಿದೆ. ಬ್ರಿಟ್ಜ್ಕೆ-ಯೆನ್ಸನ್ ಜೋಡಿಯು 2002ರಲ್ಲಿ ಮಾರ್ಕ್ ಬೌಷರ್ ಮತ್ತು ಜಾಂಟಿ ರೋಡ್ಸ್ ದಾಖಲಿಸಿದ್ದ 97 ರನ್‌ಗಳ ಜೊತೆಯಾಟವನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದೆ. ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ 6ನೇ ವಿಕೆಟ್‌ಗೆ ದಾಖಲಾದ ಅತ್ಯುನ್ನತ ಜೊತೆಯಾಟದ ದಾಖಲೆ ಮಾರ್ಕೊ ಯೆನ್ಸನ್ ಮತ್ತು ಹೆನ್ರಿಚ್ ಕ್ಲಾಸೆನ್ ಹೆಸರಿನಲ್ಲಿದೆ. ಇವರು 2023ರ ವಿಶ್ವಕಪ್‌ನಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ 151 ರನ್ ಸಿಡಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed