Rishab Shetty: ‘ನಿಮ್ಮನ್ನ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ’; ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಟಿಸಲು ಸುವರ್ಣಾವಕಾಶ! | | ACTPnews

Rishab Shetty New Movie Audition Bengaluru Soon


ಜೀವನ ಒಂದು ಪಯಣ..

ರಿಷಬ್ ಶೆಟ್ಟಿ ಫಿಲ್ಮ್ಸ್ ನಿಂದ ಆಡಿಷನ್ ಕಾಸ್ಟಿಂಗ್ ಕಾಲ್ ಬಂದಿದೆ. ಇದನ್ನ ಶೆಟ್ರು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಇದನ್ನ ಶೇರ್ ಮಾಡಿಕೊಂಡಿದ್ದಾರೆ.
ಜೀವನ ಒಂದು ಪಯಣ..

(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಈ ಒಂದು ಆಡಿಷನ್ ಪೋಸ್ಟರ್ ಅಲ್ಲಿ ಸುಮಾರು ವಿಷಯಗಳಿವೆ. ಜೀವನ ಒಂದು ಪಯಣ ಅನ್ನುವ ಮ್ಯಾಟರ್ ಇದೆ. ನೆನಪಿರಲಿ, ಸಂತೋಷ ಅನ್ನೋದು ಪಯಣಿಸುವ ಮಾರ್ಗವೇ ಆಗಿದೆ. ಆದರೆ, ಇದು ತಲುಪುವ ಕೊನೆಯ ತಾಣವಲ್ಲ ಅನ್ನುವ ವಿಷಯ ಕೂಡ ಇದರಲ್ಲಿದೆ.

ಎಲ್ಲಾ ಆಸಕ್ತ ನಟ-ನಟಿಯರಿಗೆ ಆಹ್ವಾನ

ನಮ್ಮ ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದೇವೆ. ಎಲ್ಲಾ ಆಸಕ್ತ ನಟ ಮತ್ತು ನಟಿಯರಿಗೆ ಆಹ್ವಾನಿಸುತ್ತೇವೆ.

ಮಹಿಳೆಯರು: 20 ರಿಂದ 60

ಯಾರಿಗೆ ಮೊದಲ ಆದ್ಯತೆ

ಈ ಒಂದು ಆಡಿಷನ್ ಬರೋರು ಈ ಪೋಸ್ಟ್ ಓದಿದರೆ ಚೆನ್ನಾಗಿರುತ್ತದೆ. ಈ ಆಡಿಷನ್‌ ಅಲ್ಲಿ ಮೊದಲ ಆದ್ಯತೆಯನ್ನ ಸ್ಪಷ್ಟವಾಗಿ ಕನ್ನಡ ಮಾತನಾಡೋಕೆ ಬರೋರಿಗೆ ಕೊಡ್ತಿದ್ದಾರೆ.

ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದವರಿಗೆ ಇಲ್ಲಿ ಆದ್ಯತೆ ಇದೆ. ಬೆಂಗಳೂರಿನ ಜಯನಗರದ 4 ನೇ ಬ್ಲಾಕ್‌ನ ವಿಜಯಾ ಕಾಲೇಜಿನಲ್ಲಿ ಈ ಒಂದು ಆಡಿಷನ್ ನಡೆಯುತ್ತಿದೆ.

ಡೇಟ್ ಆ್ಯಂಡ್ ಟೈಮ್

ಈ ಒಂದು ಆಡಿಷನ್ ಮುಂದಿನ ತಿಂಗಳು ನಡೀತಾ ಇದೆ. ಅಕ್ಟೋಬರ್-2 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೂ ಆಡಿಷನ್ ಇರುತ್ತದೆ.

Rishab Shetty New Movie Audition Bengaluru Soon

ಯಾರಿಗೆ ಮೊದಲ ಆದ್ಯತೆ

(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಈ ಒಂದು ವಿಷಯವನ್ನ ರಿಷಬ್ ಶೆಟ್ರು ಅಧಿಕೃತವಾಗಿಯೇ ಹೇಳಿದ್ದಾರೆ. ಇದೇ ಪೋಸ್ಟ್ ಅಲ್ಲಿಯೇ ಈ ಎರಡು ಲೈನ್ ಕೂಡ ಬರೆದಿದ್ದಾರೆ. ಅದು ಹೀಗಿದೆ ಓದಿ;

ಶೆಟ್ರ ಮಾತಿಗೆ ಕಾಂಪ್ಲಿಮೆಂಟ್ಸ್

ರಿಷಬ್ ಶೆಟ್ರ ಈ ಪೋಸ್ಟ್‌ಗೆ ಕಾಂಪ್ಲಿಮೆಂಟ್ಸ್ ಬಂದಿವೆ. ರೆಡ್ ಹಾರ್ಟ್ ಇಮೋಜಿ ಕೂಡ ಇವೆ. ಒಳ್ಳೆ ಹೆಜ್ಜೆ ರಿಷಬ್ ಶೆಟ್ಟಿ ಸರ್ ಅಂತಲೂ ಅದ್ಯಾರೋ ಹೇಳಿದ್ದಾರೆ. ಇದರ ನಡುವೆ ಸಲಹೆ ಕೂಡ ಬಂದಿದೆ.

“ಉತ್ತರ ಕರ್ನಾಟಕದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ sir…ಕಲೆಯನ್ನ ಗುರುತಿಸಿ ಒಂದು ಅವಕಾಶ ಕೊಡಿ ಅವರಿಗೆ” ಅಂತಲೂ ಇಲ್ಲಿ ಹೇಳಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed