Last Updated:
ಡೈರೆಕ್ಟರ್ ಸಿಂಪಲ್ ಸುನಿ ಒಂದು ಪ್ರಯೋಗ ಮಾಡಿದ್ದಾರೆ. ತಮ್ಮ ಲಂಬೋದರ 2.0 ಚಿತ್ರದಲ್ಲಿ ರೋಬೋಟ್‌ಗೆ ಚಾನ್ಸ್ ಕೊಟ್ಟಿದ್ದಾರೆ. ಜಿಯಾ ಹೆಸರಿನ ಈ ರೋಬೋಟ್ ಈ ಚಿತ್ರದಲ್ಲಿ ನಟನೆ ಮಾಡುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಸಿಂಪಲ್ ಸುನಿ (Simple Suni) ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ಹೊಸ ಕಲಾವಿದರನ್ನ ಹಾಕಿಕೊಂಡು ಚಿತ್ರ ಮಾಡ್ತಾನೇ ಬಂದಿದ್ದಾರೆ. ನವ ನಟ ಅನಿಲ್ ಶೆಟ್ಟಿ (Anil Shetty) ಹಾಕಿಕೊಂಡು ಈಗೊಂದು ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾ ವಿಷಯ ಬೇರೆ ಇದೆ. ಸೈನ್ಸ್ ಫಿಕ್ಷನ್ ಟಚ್ ಕೂಡ ಇದೆ. ಇದೇ ಚಿತ್ರದಲ್ಲಿಯೇ ‘ಜಿಯಾ’ ಹೆಸರಿನ ರೋಬೋಟ್ (Ziya Robot) ನಟನೆ ಮಾಡುತ್ತಿದೆ. ಚಿತ್ರ ಡೈರೆಕ್ಟರ್ ಸುನಿ (Director Suni) ಈ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಸಿಂಪಲ್ ಸುನಿ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್ ಡಿಪಿ ಚೇಂಜ್ ಮಾಡಿದ್ದರು. ಆ ಜಾಗಕ್ಕೆ ರೋಬೋಟ್ ಡಿಪಿ ಬಂದಿತ್ತು. ಇದನ್ನ ಸಿಂಪಲ್ ಸುನಿ ಬೇರೆ ರೀತಿನೆ ಹೇಳಿದ್ದರು.
ಭಾರತೀಯ ಚಿತ್ರರಂಗದಲ್ಲಿ ಇದು ಮೊದಲು
(ಚಿತ್ರ ಕೃಪೆ: ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್)
ರೋಬೋಟ್ ತಮ್ಮ ಅಕೌಂಟ್ ಅನ್ನ ಆವರಿಸಿಕೊಂಡಿದೆ ಅನ್ನುವ ಅರ್ಥದಲ್ಲಿಯೇ ಹೇಳಿದ್ದರು. ಆದರೆ, ಇದೀಗ ಒಂದು ವಿಷಯ ಗೊತ್ತಾಗಿದೆ. ಈ ರೋಬೋಟ್ ಇವರ ಚಿತ್ರದಲ್ಲಿ ನಟಿಸುತ್ತಿದೆ ಅನ್ನೋದು ರಿವೀಲ್ ಆಗಿದೆ.
ಲಂಬೋದರ 2.0 ಸಿನಿಮಾದಲ್ಲಿ ಸೈನ್ಸ್ ಫಿಕ್ಷನ್ ಮತ್ತು ಸೋಷಿಯಲ್ ಥ್ರಿಲ್ಲರ್ ಜಾನರ್‌ನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿಯೇ ಜಿಯಾ ರೋಬೋಟ್ ಇದೆ. ಇದನ್ನ ಚಿತ್ರ ತಂಡ ನೈಜ ಹ್ಯೂಮನಾಯ್ಡ್ ರೋಬೋಟ್ ಅಂತಲೆ ಕರೆದಿದೆ.
ಈ ರೋಬೋಟ್ ಅನ್ನೆ ಇದೀಗ ಸಿಂಪಲ್ ಸುನಿ ತಮ್ಮ ಚಿತ್ರದಲ್ಲಿ ಬಳಕೆ ಮಾಡ್ತಿದ್ದಾರೆ. ಈ ಜಿಯಾ ಹೆಸರಿನ ರೋಬೋ ಮೂಲಕ ಅಭಿನಯ ತೆಗೆಸುತ್ತಿದ್ದಾರೆ. ತೆರೆ ಮೇಲೆ ಇದು ಹೇಗೆ ಕಾಣಿಸುತ್ತದೆ ಅನ್ನುವ ಕುತೂಹಲ ಈಗಲೇ ಹೆಚ್ಚಾಗಿದೆ.
ಜಿಯಾ ರೋಬೋಟ್
ಚಿತ್ರದ ಡೈರೆಕ್ಟರ್ ಸಿಂಪಲ್ ಸುನಿ ಅವರು ನನ್ನ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡೇ ಈ ರೋಲ್ ಕೊಟ್ಟಿದ್ದಾರೆ. ಈ ಕಾರಣಕ್ಕೇನೆ ನನಗೆ ಈ ಪಾತ್ರದ ಡೈಲಾಗ್ ತುಂಬಾನೆ ಬೇಗ ಕನೆಕ್ಟ್ ಆಗಿವೆ ಅಂತಲೂ ಮೇಘನಾ ಗಾಂವ್ಕರ್ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿದ್ದಾರೆ.
ಕನ್ನಡಕ್ಕೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಎಂಟ್ರಿ ಆಗುತ್ತಿದ್ದಾರೆ. ನಟ ಕುನಾಲ್ ಕಪೂರ್ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ.
ಕುನಾಲ್ ಈ ಹಿಂದೆ ರಂಗ್ ದೇ ಬಸಂತಿ, ಡಾನ್ 2, ಡಿಯರ್ ಜಿಂದಗಿ, ವೀರಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಳ್ಳೆ ಹೆಸರೂ ಪಡೆದುಕೊಂಡಿದ್ದಾರೆ. ಕನ್ನಡ ಅಂತ ಬಂದ್ರೆ ಲಂಬೋದರ 2.0 ಚಿತ್ರ ಇವರ ಮೊದಲ ಚಿತ್ರವಾಗಿದೆ ಅಂತ ಹೇಳಬಹುದು.














