Simple Suni Movie: ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ; ಮೊದಲ ಬಾರಿಗೆ ನೈಜ ಹ್ಯೂಮನಾಯ್ಡ್ ರೋಬೋ ನಟನೆ! | | ACTPnews

ಕನ್ನಡ ಸಿನಿಮಾದಲ್ಲಿ ನೈಜ ಹ್ಯೂಮನಾಯ್ಡ್ ರೋಬೋ ನಟನೆ!


Last Updated:

ಡೈರೆಕ್ಟರ್ ಸಿಂಪಲ್ ಸುನಿ ಒಂದು ಪ್ರಯೋಗ ಮಾಡಿದ್ದಾರೆ. ತಮ್ಮ ಲಂಬೋದರ 2.0 ಚಿತ್ರದಲ್ಲಿ ರೋಬೋಟ್‌ಗೆ ಚಾನ್ಸ್ ಕೊಟ್ಟಿದ್ದಾರೆ. ಜಿಯಾ ಹೆಸರಿನ ಈ ರೋಬೋಟ್ ಈ ಚಿತ್ರದಲ್ಲಿ ನಟನೆ ಮಾಡುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕನ್ನಡ ಸಿನಿಮಾದಲ್ಲಿ ನೈಜ ಹ್ಯೂಮನಾಯ್ಡ್ ರೋಬೋ ನಟನೆ!
ಕನ್ನಡ ಸಿನಿಮಾದಲ್ಲಿ ನೈಜ ಹ್ಯೂಮನಾಯ್ಡ್ ರೋಬೋ ನಟನೆ!

ಸಿಂಪಲ್ ಸುನಿ (Simple Suni) ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ಹೊಸ ಕಲಾವಿದರನ್ನ ಹಾಕಿಕೊಂಡು ಚಿತ್ರ ಮಾಡ್ತಾನೇ ಬಂದಿದ್ದಾರೆ. ನವ ನಟ ಅನಿಲ್ ಶೆಟ್ಟಿ (Anil Shetty) ಹಾಕಿಕೊಂಡು ಈಗೊಂದು ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾ ವಿಷಯ ಬೇರೆ ಇದೆ. ಸೈನ್ಸ್ ಫಿಕ್ಷನ್ ಟಚ್ ಕೂಡ ಇದೆ. ಇದೇ ಚಿತ್ರದಲ್ಲಿಯೇ ‘ಜಿಯಾ’ ಹೆಸರಿನ ರೋಬೋಟ್ (Ziya Robot) ನಟನೆ ಮಾಡುತ್ತಿದೆ. ಚಿತ್ರ ಡೈರೆಕ್ಟರ್ ಸುನಿ (Director Suni) ಈ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಜಿಯಾ ರೋಬೋಟ್

ಸಿಂಪಲ್ ಸುನಿ ಇತ್ತೀಚಿಗೆ ತಮ್ಮ ಇನ್‌ಸ್ಟಾಗ್ರಾಮ್ ಡಿಪಿ ಚೇಂಜ್ ಮಾಡಿದ್ದರು. ಆ ಜಾಗಕ್ಕೆ ರೋಬೋಟ್ ಡಿಪಿ ಬಂದಿತ್ತು. ಇದನ್ನ ಸಿಂಪಲ್ ಸುನಿ ಬೇರೆ ರೀತಿನೆ ಹೇಳಿದ್ದರು.

simple suni lambodara 2 0 movie ziya robot updates

ಭಾರತೀಯ ಚಿತ್ರರಂಗದಲ್ಲಿ ಇದು ಮೊದಲು

(ಚಿತ್ರ ಕೃಪೆ: ಸಿಂಪಲ್ ಸುನಿ ಇನ್​ಸ್ಟಾಗ್ರಾಮ್)

ರೋಬೋಟ್ ತಮ್ಮ ಅಕೌಂಟ್‌ ಅನ್ನ ಆವರಿಸಿಕೊಂಡಿದೆ ಅನ್ನುವ ಅರ್ಥದಲ್ಲಿಯೇ ಹೇಳಿದ್ದರು. ಆದರೆ, ಇದೀಗ ಒಂದು ವಿಷಯ ಗೊತ್ತಾಗಿದೆ. ಈ ರೋಬೋಟ್ ಇವರ ಚಿತ್ರದಲ್ಲಿ ನಟಿಸುತ್ತಿದೆ ಅನ್ನೋದು ರಿವೀಲ್ ಆಗಿದೆ.

ಲಂಬೋದರ 2.0 ಸಿನಿಮಾ

ಲಂಬೋದರ 2.0 ಸಿನಿಮಾದಲ್ಲಿ ಸೈನ್ಸ್ ಫಿಕ್ಷನ್ ಮತ್ತು ಸೋಷಿಯಲ್ ಥ್ರಿಲ್ಲರ್ ಜಾನರ್‌ನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿಯೇ ಜಿಯಾ ರೋಬೋಟ್ ಇದೆ. ಇದನ್ನ ಚಿತ್ರ ತಂಡ ನೈಜ ಹ್ಯೂಮನಾಯ್ಡ್ ರೋಬೋಟ್ ಅಂತಲೆ ಕರೆದಿದೆ.

ಈ ರೋಬೋಟ್ ಅನ್ನೆ ಇದೀಗ ಸಿಂಪಲ್ ಸುನಿ ತಮ್ಮ ಚಿತ್ರದಲ್ಲಿ ಬಳಕೆ ಮಾಡ್ತಿದ್ದಾರೆ. ಈ ಜಿಯಾ ಹೆಸರಿನ ರೋಬೋ ಮೂಲಕ ಅಭಿನಯ ತೆಗೆಸುತ್ತಿದ್ದಾರೆ. ತೆರೆ ಮೇಲೆ ಇದು ಹೇಗೆ ಕಾಣಿಸುತ್ತದೆ ಅನ್ನುವ ಕುತೂಹಲ ಈಗಲೇ ಹೆಚ್ಚಾಗಿದೆ.

ಅನಿಲ್ ಶೆಟ್ಟಿ ಹೀರೋ

ಲಂಬೋದರ 2.0 ಚಿತ್ರಕ್ಕೆ ಅನಿಲ್ ಶೆಟ್ಟಿ ನಾಯಕರಾಗಿದ್ದಾರೆ. ಸಾಚಿ ಬಿಂದ್ರಾ ಈ ಸಿನಿಮಾದ ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ನಟಿ ಮೇಘನಾ ಗಾಂವ್ಕರ್ ಸಾಧ್ವಿ ಪಾತ್ರ ಮಾಡಿದ್ದಾರೆ. ಈ ರೀತಿಯ ಪಾತ್ರ ಇವರಿಗೆ ಹೊಸ ಅನುಭ ಕೊಟ್ಟಿದೆ.
simple suni lambodara 2 0 movie ziya robot updates

ಜಿಯಾ ರೋಬೋಟ್

ಚಿತ್ರದ ಡೈರೆಕ್ಟರ್ ಸಿಂಪಲ್ ಸುನಿ ಅವರು ನನ್ನ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡೇ ಈ ರೋಲ್ ಕೊಟ್ಟಿದ್ದಾರೆ. ಈ ಕಾರಣಕ್ಕೇನೆ ನನಗೆ ಈ ಪಾತ್ರದ ಡೈಲಾಗ್ ತುಂಬಾನೆ ಬೇಗ ಕನೆಕ್ಟ್ ಆಗಿವೆ ಅಂತಲೂ ಮೇಘನಾ ಗಾಂವ್ಕರ್ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿದ್ದಾರೆ.

ಬಾಲಿವುಡ್‌ ನಟನ ಎಂಟ್ರಿ

ಕನ್ನಡಕ್ಕೆ ಈ ಚಿತ್ರದ ಮೂಲಕ ಬಾಲಿವುಡ್ ನಟ ಎಂಟ್ರಿ ಆಗುತ್ತಿದ್ದಾರೆ. ನಟ ಕುನಾಲ್ ಕಪೂರ್ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ.

ಕುನಾಲ್ ಈ ಹಿಂದೆ ರಂಗ್ ದೇ ಬಸಂತಿ, ಡಾನ್ 2, ಡಿಯರ್ ಜಿಂದಗಿ, ವೀರಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಳ್ಳೆ ಹೆಸರೂ ಪಡೆದುಕೊಂಡಿದ್ದಾರೆ. ಕನ್ನಡ ಅಂತ ಬಂದ್ರೆ ಲಂಬೋದರ 2.0 ಚಿತ್ರ ಇವರ ಮೊದಲ ಚಿತ್ರವಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed