Anant Nag: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್; ಗೌರವವನ್ನು ಅರ್ಪಿಸಿದ್ದು ಕರ್ನಾಟಕದ ಜನತೆಗೆ! | | ACTPnews

News18

[ad_1]

Last Updated:

ಅನಂತ್ ನಾಗ್ ಅವರು ದಾದ ಸಾಹೇಬ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅದ್ಭುತವಾಗಿಯೇ ಮಾತನಾಡಿದ್ದಾರೆ. ತಮಗೆ ಬಂದ ಪ್ರಶಸ್ತ್ರಿಯನ್ನನ ಯಾರಿಗೆ ಅರ್ಪಿಸುತ್ತೇನೆ ಅಂತಲೂ ಹೇಳಿದ್ದಾರೆ. ಜನ್ಮ ಭೂಮಿ, ಕರ್ಮಭೂಮಿ, ಧರ್ಮ ಭೂಮಿಗೂ ನಮಿಸಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.

News18
News18

ಅನಂತ್ ನಾಗ್ (Anant Nag) ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಸ್ವೀಕರಿಸಿ ಅನಂತ್ ನಾಗ್ ತುಂಬಾನೆ ಒಳ್ಳೆ ಮಾತುಗಳನ್ನ ಆಡಿದ್ದಾರೆ. “ಉದರನಿಮಿತ್ತಂ ಬಹುಕೃತವೇಷಂ” ಅನ್ನುವ ಸಾಲನ್ನು ಹೇಳಿದ್ದಾರೆ. ಇದರ ಅರ್ಥವನ್ನು ಅಷ್ಟೆ ಸುಲಭವಾಗಿಯೇ ವಿವರಿಸಿದ್ದಾರೆ. ಜನ್ಮ ಭೂಮಿ, ಕರ್ಮಭೂಮಿ, ಧರ್ಮ ಭೂಮಿಗೂ ನಮಿಸಿದ್ದಾರೆ. ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ಯಾರಿಗೆಲ್ಲ ಅರ್ಪಿಸುತ್ತೇನೆ (Dedication) ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅನಂತ್ ಪ್ರಶಸ್ತಿ ಸ್ವೀಕಾರ ಸಮಯ….

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಸೀಕರಿಸುವ ಸಮಯದಲ್ಲಿ ಎಲ್ಲರೂ ಎದ್ದು ನಿಂತು ಗೌರವಿಸಿದ್ದಾರೆ. ಬಾಲಿವುಡ್, ಮಾಲಿವುಡ್, ಕಾಲಿವುಡ್‌ನ ಪ್ರಶಸ್ತಿ ಪುರಸ್ಕೃತರೆಲ್ಲ ಎದ್ದು ನಿಂತು ಗೌರವಿಸಿದ್ದಾರೆ.

Anant Nag dedicates Phalke award to Kannada cinema

ದಾದಾ ಸಾಹೇಬ್ ಫಾಲ್ಕೆ ಅವಾರ್ಡ್; ಅನಂತ್ ನಾಗ್ ಅರ್ಪಿಸಿದ್ದು ಯಾರಿಗೆ ಗೊತ್ತಾ?

(ಚಿತ್ರ ಕೃಪೆ: ಸುದೀಪ್ ಟ್ವಿಟರ್ ಪೇಜ್)

ಇದಕ್ಕೂ ಮಂಚೆ ಅನಂತ್ ನಾಗ್ ಅವರ ಸಿನಿಮಾ ಜರ್ನಿಯ ವಿಶೇಷ ವಿಡಿಯೋ ಕೂಡ ಪ್ರದರ್ಶನ ಆಗಿದೆ. ಕೆಜಿಎಫ್, ಗಾಳಿಪಟ ಚಿತ್ರದ ಅಭಿನಯದ ವಿಚಾರವು ಈ ವಿಡಿಯೋದಲ್ಲಿದೆ.

ನನ್ನ ನಿರ್ದೇಶಕರಿಗೆ..

ಅನಂತ್ ನಾಗ್ ಅವರು ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ್ದಾರೆ. ತಾವು ಈ ಪ್ರಶಸ್ತಿಯನ್ನ ಯಾರಿಗೆಲ್ಲ ಅರ್ಪಿಸುತ್ತೇನೆ ಅಂತಲೂ ಹೇಳಿದ್ದಾರೆ.

“ಈ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ ಮತ್ತು ಕನ್ನಡಿಗರು ಮಾತ್ರ ಕಾರಣ. ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ.” ಅಂತಲೇ ಅನಂತ್ ನಾಗ್ ಹೇಳಿದ್ದಾರೆ.

Anant Nag dedicates Phalke award to Kannada cinema

ಅನಂತ್ ನಾಗ್ ಅಚ್ಚರಿಯ ಮಾತು

(ಚಿತ್ರ ಕೃಪೆ: ಸುದೀಪ್ ಟ್ವಿಟರ್ ಪೇಜ್)

ಜನ್ಮ ಭೂಮಿ ನಮಿಸಿದ ಅನಂತ್ ನಾಗ್

ಅನಂತ್ ನಾಗ್ ಅವರು ತಮ್ಮ ಭಾಷಣದಲ್ಲಿ ಜನ್ಮ ಭೂಮಿ ನೆನೆದಿದ್ದಾರೆ. ಕರ್ಮಭೂಮಿಯ ವಿಷಯವನ್ನು ಹೇಳಿದ್ದಾರೆ. ಧರ್ಮ ಭೂಮಿಗೂ ನಮಿಸಿದ್ದಾರೆ.

ಈ ಒಂದು ಸಮಯದಲ್ಲಿ”ಉದರನಿಮಿತ್ತಂ ಬಹುಕೃತವೇಷಂ” ಅಂತಲೂ ಅನಂತ್ ನಾಗ್ ಹೇಳಿದ್ದಾರೆ. ಉದರ ಅಂದರೆ ಏನು ಅನ್ನೋದನ್ನು ಕೂಡ ಇಲ್ಲಿ ವಿವರಿಸಿದ್ದಾರೆ ಅಂತಲೂ ಹೇಳಬಹುದು.

ಅನಂತ್ ನಾಗ್ ಅಚ್ಚರಿಯ ಮಾತು

ಅನಂತ್ ನಾಗ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆನು ಮಾತನಾಡಿದ್ದಾರೆ. ನನಗೆ ಈ ಒಂದು ಭವ್ಯ ಪ್ರಶಸ್ತ್ರಿ ಪ್ರದಾನ ಸಮಾರಂಭ ನೋಡಿ ಖುಷಿನೂ ಆಗಿದೆ. ಅಷ್ಟೆ ಡೈಜಸ್ಟ್ ಕೂಡ ಮಾಡಿಕೊಳ್ಳು ಆಗುತ್ತಿಲ್ಲ.ಅಷ್ಟು ಭವ್ಯವಾಗಿಯೇ ಈ ಒಂದು ಸಮಾರಂಭ ಆಯೋಜಿಸಲಾಗಿದೆ.

ಈ ಒಂದು ಪ್ರಶಸ್ತಿ ಸ್ವೀಕರಿಸಿದ ಖುಷಿಯಲ್ಲಿ ತಮ್ಮ ಜರ್ನಿಯಲ್ಲಿ ಬಂದ ಡೈರೆಕ್ಟರ್ಸ್, ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರು, ಲಿರಿಕ್ ರೈಟರ್ಸ್, ರೈಟರ್ಸ್, ಟೆಕ್ನಿಷನ್ಸ್, ಕನ್ನಡ ಪ್ರಕ್ಷಕರು ಹೀಗೆ ಎಲ್ಲರನ್ನೂ ಅನಂತ್ ನಾಗ್ ನೆನಪಿಸಿಕೊಂಡಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಇವರಿಗೂ ಅರ್ಪಿಸಿದ್ದಾರೆ ಹೇಳಬಹುದು.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports