Last Updated:
ಹಳ್ಳಿ ಪವರ್ ರೀಲೋಡೆಡ್ ಅಲ್ಲಿ ಸಾಮಾಜಿಕ ನಾಟಕವಾಡಿದ ಸಿಟಿ ಹುಡುಗಿಯರು. ಎತ್ತಿನ ಬಂಡಿ, ಮೇಕೆ, ಜೀಪ್ ಎಲ್ಲವೂ ರಂಗಭೂಮಿ ಮೇಲೆ ಬಂದವು ನೋಡಿ. ಇದನ್ನ ನೋಡಿ ಗೆಸ್ಟ್ ಶರಣ್ ಫುಲ್ ಖುಷ್ ಆಗಿದ್ದಾರೆ. ಮನಸಾರೆ ಮಾತನಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಹಳ್ಳಿ ಪವರ್ ರೀಲೋಡೆಡ್ (Halli Power Reloaded) ಹೆಚ್ಚು ಸೆಳೆಯುತ್ತಿದೆ. ಐಹೊಳೆಯ ಜನರನ್ನು ರಂಜಿಸುತ್ತಿದೆ. ಹೊಸ ರೀತಿಯ ಟಾಸ್ಕ್ ಅನ್ನ ಸ್ಪರ್ಧಿಗಳಿಗೆ ಕೊಡಲಾಗುತ್ತಿದೆ. ಇದರಿಂದ ಸಿಟಿ ಗರ್ಲ್ಸ್ (City Girls) ಏಟು ಮಾಡಿಕೊಂಡಿರೊದು ಇದೆ. ಇದೆಲ್ಲದರ ನಡುವೆ ರಂಗಭೂಮಿ ಕಾನ್ಸೆಪ್ಟ್ ಬಂದಿದೆ. ಸಿಟಿ ಹುಡುಗಿಯರು ಸಾಮಾಜಿಕ ನಾಟಕ ಮಾಡ್ತಿದ್ದಾರೆ. ‘ಹೆಣ್ಣು ಹುಲಿ’ (Hennu Huli) ಅನ್ನುವ ಈ ನಾಟಕ ನೋಡೋಕೆ ಬೆಂಗಳೂರಿನಿಂದ ಶರಣ್ (Sharan) ಬಂದಿದ್ದಾರೆ. ಇವರ ಮಾತುಗಳ ಝಲಕ್ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಹಾಸ್ಯ ನಾಯಕ ನಟ ಶರಣ್ 100 ನೇ ಚಿತ್ರಕ್ಕೆ ಹೀರೋ ಆಗಿರೋದು ಗೊತ್ತೇ ಇದೆ. ಆದರೆ, ಈ ನೂರು ಚಿತ್ರಗಳ ಮುಂಚೆ ರಂಗಭೂಮಿ ಅಲ್ಲಿಯೆ ಕೆಲಸ ಮಾಡಿದ್ದಾರೆ. ಎಲ್ಲ ಕೆಲಸವನ್ನು ತಿಳಿದುಕೊಂಡಿದ್ದಾರೆ.
ಶರಣ್ ಮುಂದೆ ‘ನಾಟಕ’ ಮಾಡಿದ ಸಿಟಿ ಹುಡ್ಗಿಯರು!
(ಚಿತ್ರ ಕೃಪೆ: ಜೀ ಕನ್ನಡ ಇನ್ಸ್ಟಾಗ್ರಾಮ್)
ಹಳ್ಳಿ ಪವರ್ ಶೋದ ಸ್ಪರ್ಧಿಗಳು ಇಲ್ಲಿ ಸಾಮಾಜಿಕ ನಾಟಕ ಮಾಡಿದ್ದಾರೆ. ‘ಹೆಣ್ಣು ಹುಲಿ’ ಅನ್ನೋದು ಈ ನಾಟಕದ ಹೆಸರಾಗಿದೆ.
ಜೀ ಕನ್ನಡದ ಈ ಹಳ್ಳಿ ಪವರ್ ರೀಲೋಡೆಡ್ ಶೋದಲ್ಲಿ ಸೆಲೆಬ್ರಿಟಿಗಳು ಬಂದು ಹೋಗ್ತಾರೆ. ಮೊದಲು ತಾರಾ ಅನುರಾಧಾ ಬಂದಿದ್ದರು. ಇವರಾದ್ಮೇಲೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಈ ಶೋಗೆ ಆಗಮಿಸಿದ್ದರು.
ಹಳ್ಳಿ ಪವರ್ ಅಲ್ಲಿ ರಂಗಭೂಮಿಯ ಅಬ್ಬರ
(ಚಿತ್ರ ಕೃಪೆ: ಜೀ ಕನ್ನಡ ಇನ್ಸ್ಟಾಗ್ರಾಮ್)
ರವಿಚಂದ್ರನ್ ಬಂದಾಗ ಇವರ ಸಿನಿಮಾಗಳ ಹಾಡಿಗೆ ಸಿಟಿ ಗರ್ಲ್ಸ್ ಡ್ಯಾನ್ಸ್ ಮಾಡಿದ್ದರು. ರವಿಚಂದ್ರನ್ ಅವರಿಂದ ಭೇಷ್ ಎನಿಸಿಕೊಂಡಿದ್ದರು.
ಸಿಟಿ ಹುಡುಗಿಯರು ಸಾಮಾಜಿ ನಾಟಕ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಂಗಭೂಮಿಯಿಂದ ಬಂದ ಹಾಸ್ಯ ನಾಯಕ ನಟ ಶರಣ್ ಗೆಸ್ಟ್ ಆಗಿ ಬಂದಿದ್ದಾರೆ.
ರಂಗಭೂಮಿ ಮೇಲೆ ಎತ್ತಿನ ಬಂಡಿ ಬಂದಿದೆ. ಅಷ್ಟೆ ಯಾಕೆ ಜೀಪ್ ಕೂಡ ಆಗಮಿಸಿದೆ. ಇನ್ನು ಹೇಳ್ಬೇಕು ಅಂದ್ರೆ ಮೇಕೆಗಳೂ ಇಲ್ಲಿ ಬಂದು ಹೋಗಿವೆ.
ಅದೆಷ್ಟು ಸಾಧ್ಯವೋ ಅಷ್ಟು ಲೈವ್ ಆಗಿಯೇ ಈ ನಾಟಕವನ್ನ ಹುಡುಗಿಯರು ಮಾಡಿದ್ದಾರೆ. ಪಕ್ಕಾ ವೃತ್ತಿಪರರ ರೀತಿನೇ ನಾಟಕವನ್ನ ಆಡಿದ್ದಾರೆ ಅಂತಲೂ ಹೇಳಬಹುದು.














