KD Movie: ಟಿವಿಯಲ್ಲಿ ಧ್ರುವ ಸರ್ಜಾ ‘ಕೆಡಿ’ ಸಿನಿಮಾ; ಯಾವ ಚಾನೆಲ್‌ನಲ್ಲಿ, ಯಾವಾಗ ಪ್ರಸಾರ? ಇಲ್ಲಿದೆ ಸಂಪೂರ್ಣ ಮಾಹಿತಿ | | ACTPnews

ಟಿವಿಯಲ್ಲಿ ಧ್ರುವ ಸರ್ಜಾ ಕೆಡಿ ಸಿನಿಮಾ; ಯಾವಾಗ ಎಲ್ಲಿ ಇಲ್ಲಿದೆ ನೋಡಿ!(ಚಿತ್ರ ಕೃಪೆ: ಕೆಡಿ ಸಿನಿಮಾ ಟೀಮ್)


Last Updated:

ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಈ ಭಾನುವಾರವೆ ಇದು ಟೆಲಿಕಾಸ್ಟ್ ಆಗುತ್ತದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ಟಿವಿಯಲ್ಲಿ ಧ್ರುವ ಸರ್ಜಾ ಕೆಡಿ ಸಿನಿಮಾ; ಯಾವಾಗ ಎಲ್ಲಿ ಇಲ್ಲಿದೆ ನೋಡಿ!(ಚಿತ್ರ ಕೃಪೆ: ಕೆಡಿ ಸಿನಿಮಾ ಟೀಮ್)
ಟಿವಿಯಲ್ಲಿ ಧ್ರುವ ಸರ್ಜಾ ಕೆಡಿ ಸಿನಿಮಾ; ಯಾವಾಗ ಎಲ್ಲಿ ಇಲ್ಲಿದೆ ನೋಡಿ!(ಚಿತ್ರ ಕೃಪೆ: ಕೆಡಿ ಸಿನಿಮಾ ಟೀಮ್)

ಧ್ರುವ ಸರ್ಜಾ (Dhruva Sarja) ಅಭಿನಯದ ಕೆಡಿ ಸಿನಿಮಾ (KD Movie) ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಭಾರೀ ಹೈಪ್ ಅಲ್ಲಿಯೇ ಈ ಸಿನಿಮಾ ತೆರೆಗೆ ಬಂತು. ಪ್ರೇಕ್ಷಕರಿಗೂ ಇಷ್ಟ ಆಯಿತು. ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್ ಹೀಗೆ ಸುಮಾರು ಪಾತ್ರಗಳು ಈ ಚಿತ್ರದಲ್ಲಿವೆ. ಸಂಜಯ್ ದತ್‌ (Sanjay Dutt) ಅಬ್ಬರಿಸಿದ ರೀತಿನೂ ಚೆನ್ನಾಗಿ ಇತ್ತು. ಶಿಲ್ಪಾ ಶೆಟ್ಟಿ (Shipa Shetty ) ಅಭಿನಯವನ್ನು ಖಡಕ್ ಆಗಿಯೇ ಇತ್ತು. ಇಷ್ಟೆಲ್ಲ ಇರೋ ಚಿತ್ರ ಇದೀಗ ಟಿವಿಯಲ್ಲಿ ಬರೋಕೆ ರೆಡಿ ಆಗಿದೆ. ಪ್ರೋಮೋ ಕೂಡ ಹೊರ ಬಂದಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಟಿವಿಯಲ್ಲಿ ಕೆಡಿ ಸಿನಿಮಾ

ಡೈರೆಕ್ಟರ್ ಜೋಗಿ ಪ್ರೇಮ್ ಈ ಕೆಡಿ ಚಿತ್ರ ಡೈರೆಕ್ಷನ್ ಮಾಡಿದ್ದಾರೆ. ಇವರ ಡೈರೆಕ್ಷನ್ ಅಲ್ಲಿ ಧ್ರುವ ಸರ್ಜಾ ಫಸ್ಟ್ ಟೈಮ್ ಕೆಲಸ ಮಾಡಿದ್ದಾರೆ.
dhruva sarja kd movie zee kannada world television premiere soon

ಟಿವಿಯಲ್ಲಿ ಕೆಡಿ ಸಿನಿಮಾ

(ಚಿತ್ರ ಕೃಪೆ: ಜೋಗಿ ಪ್ರೇಮ್ ಇನ್‌ಸ್ಟಾಗ್ರಾಮ್)

ರೀಷ್ಮಾ ನಾಣಯ್ಯ ಕೂಡ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಈ ಚಿತ್ರ ಕಳೆದ ಏಪ್ರೀಲ್-30 ರಂದು ರಿಲೀಸ್ ಆಗಿತ್ತು. ಧ್ರುವ ಸರ್ಜಾ ಅಬ್ಬರಿಸಿದ್ದರು. ಶಿಲ್ಪಾ ಶೆಟ್ಟಿ, ಸಂಜಯ್ ದತ್ ಪಾತ್ರಗಳು ಇಲ್ಲಿ ಶಾಕ್ ಮೇಲೆ ಶಾಕ್ ಕೊಟ್ಟಿದ್ದವು.

ರಮೇಶ್ ಅರವಿಂದ್…

ರಮೇಶ್ ಅರವಿಂದ್ ಇಲ್ಲಿ ಸಖತ್ ಶಾಕ್ ಕೊಟ್ಟಿದ್ದರು. ಇದನ್ನ ಯಾರು ನಿರೀಕ್ಷೆ ಮಾಡಿರಲೇ ಇಲ್ಲ. ಆ ರೀತಿಯ ಟ್ವಿಸ್ಟ್‌ ಅನ್ನ ಡೈರೆಕ್ಟರ್ ಜೋಗಿ ಪ್ರೇಮ್ ಈ ಚಿತ್ರದಲ್ಲಿ ಇಟ್ಟಿದ್ದಾರೆ.

ಹಾಗೆ ಈ ಚಿತ್ರವನ್ನ ಥಿಯೇಟರ್ ಅಲ್ಲಿ ಮಿಸ್ ಮಾಡಿಕೊಂಡರು ಟಿವಿಯಲ್ಲಿ ನೋಡಬಹುದು. ಇದೇ ಭಾನುವಾರ ಈ ಸಿನಿಮಾ ಟೆಲಿಕಾಸ್ಟ್ ಆಗುತ್ತಿದೆ.

ಭಾನುವಾರ ಪ್ರಸಾರ

ಜೀ ಕನ್ನಡದಲ್ಲಿ ಈ ಕೆಡಿ ಸಿನಿಮಾ ಪ್ರಸಾರ ಆಗುತ್ತಿದೆ. ಭಾನುವಾರ ಸೆಪ್ಟೆಂಬರ್-27 ರಂದು ಈ ಚಿತ್ರ ಟೆಲಿಕಾಸ್ಟ್ ಆಗುತ್ತಿದೆ. ಈ ಚಿತ್ರದ ಪ್ರೋಮೋ ಈಗ ರಿಲೀಸ್ ಆಗಿದೆ.

ಜೀ ಕನ್ನಡದ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಈ ಪ್ರೋಮೋ ಶೇರ್ ಆಗಿದೆ. ಇದರ ಜೊತೆಗೆ ಎರಡು ಲೈನ್ ಕೂಡ ಇವೆ. ಅವು ಹೀಗಿವೆ.

ಕಾಲಭೈರವ ಅಖಾಡಕ್ಕೆ ಇಳಿದಾಯ್ತು… ಲೆಕ್ಕ ಬರೋರೆಲ್ಲ ಪಕ್ಕಕ್ಕೆ ನಿಂತ್ಕೊಳಿ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ World Television Premiere ‘ಕೆಡಿ ದ ಡೆವಿಲ್’ | ಇದೇ ಭಾನುವಾರ ರಾತ್ರಿ 7:30ಕ್ಕೆ.

dhruva sarja kd movie zee kannada world television premiere soon

ಟಿವಿಯಲ್ಲಿ ಧ್ರುವ ಸರ್ಜಾ ಕೆಡಿ ಸಿನಿಮಾ

(ಚಿತ್ರ ಕೃಪೆ: ಜೀ​ ಕನ್ನಡ ಇನ್​ಸ್ಟಾಗ್ರಾಮ್)

ಕೆಡಿ ಪಾರ್ಟ್-2 ಸಿನಿಮಾ

ಜೋಗಿ ಪ್ರೇಮ್ ಈ ಚಿತ್ರದ ಕೊನೆಯಲ್ಲಿ ಒಂದು ಹಿಂಟ್ ಬಿಟ್ಟಿದ್ದಾರೆ. ಇದು ಕೆಡಿ ಪಾರ್ಟ್-2 ವಿಚಾರವೇ ಆಗಿದೆ. ಕೆಡಿ-2 ಚಿತ್ರ ಬರುತ್ತದೆ ಅಂತ ಜೋಗಿ ಪ್ರೇಮ್ ಮೊದಲೇ ಹೇಳಿದ್ದರು.

ಆಗಲೇ ಸುದೀಪ್ ಬಂದು ಕೆಡಿ ಧ್ರುವ ಸರ್ಜಾರನ್ನ ರಕ್ಷಣೆ ಮಾಡ್ತಾರೆ. ಇಲ್ಲಿಗೆ ಕೆಡಿ ಒನ್ ಚಿತ್ರದ ಕತೆ ಎಂಡ್ ಆಗಿದೆ. ಎರಡನೇ ಭಾಗದಲ್ಲಿ ಏನ್ ಕಥೆ ಹೇಳ್ತಾರೆ ಅನ್ನೋ ಕುತೂಹಲವು ಜಾಸ್ತಿನೇ ಇದೆ ಅಂತ ಹೇಳಬುಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed