Pavithra Gowda: ಆಗ್ತಾ ಇಲ್ಲ ಅಂತ ಕಣ್ಣೀರಿಡ್ತಿರೋ ಪವಿತ್ರಾ ಲಾಯರ್ ಕೇಳಿದ್ದು ಅದೊಂದು ಅವಕಾಶ! ಓಕೆ ಅನ್ನುತ್ತಾ ಕೋರ್ಟ್? | Renukaswamy case pavithra gowda lawyer | | ACTPnews

ಪವಿತ್ರಾ ಗೌಡ (ಚಿತ್ರ ಕೃಪೆ: ಪವಿತ್ರಾ ಗೌಡ ಇನ್​ಸ್ಟಾಗ್ರಾಮ್)


Last Updated:

Pavithra Gowda: ಪವಿತ್ರಾ ಗೌಡ ಕಣ್ಣೀರಿಡುತ್ತಿದ್ದರೆ ಇತ್ತ ಅವರ ಲಾಯರ್ ಅದೊಂದು ಅವಕಾಶ ಕೊಡಿ ಅಂತ ಕೇಳ್ತಾ ಇದ್ದಾರೆ. ಏನದು? ಕೋರ್ಟ್ ಅಸ್ತು ಎನ್ನುತ್ತಾ?

ಪವಿತ್ರಾ ಗೌಡ (ಚಿತ್ರ ಕೃಪೆ: ಪವಿತ್ರಾ ಗೌಡ ಇನ್​ಸ್ಟಾಗ್ರಾಮ್)
ಪವಿತ್ರಾ ಗೌಡ (ಚಿತ್ರ ಕೃಪೆ: ಪವಿತ್ರಾ ಗೌಡ ಇನ್​ಸ್ಟಾಗ್ರಾಮ್)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy) ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ (Pavithra Gowda) ಜಾಮೀನು ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.  ಸದ್ಯ ಈ ಒಂದು ಅರ್ಜಿಯ ವಿಚಾರಣೆ ನಡೆಯುತ್ತಿದೆ. ಪವಿತ್ರಾಗೌಡ ಜಾಮೀನು ಅರ್ಜಿ (Bail) ವಿಚಾರಣೆ ಹಾಗೂ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆಗೆ ದಿನಾಂಕ‌ ನಿಗದಿ ಮಾಡಲಿರುವ ಕೋರ್ಟ್ ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮಾಡಿದೆ.

ಪವಿತ್ರಾಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದ ಮಾಡಿದ್ದು, ನಾವೇನಾದರೂ ಪವಿತ್ರಾಗೌಡ ಭೇಟಿ ಮಾಡಲು ಹೋದರೆ, ಪವಿತ್ರಾಗೌಡ ಈ ಹಿಂಸೆ ತಡೆಯಲು ಆಗುತ್ತಿಲ್ಲ. ಹೀಗಾಗಿ ಒಂದು ತೊಟ್ಟು ವಿಷ ಕೊಡಿಸಿ ಅಂತ ಕೇಳುತ್ತಾರೆ ಎಂದಿದ್ದಾರೆ.

ಜೈಲಾಧಿಕಾರಿಗಳು ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದಿದ್ದಾರೆ ಎಂದು ಕೋರ್ಟ್ ಅಲ್ಲಿ ಪವಿತ್ರಾಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದ ಮಾಡಿದ್ದಾರೆ.

ಭೀಕರ ಕಾಯಿಲೆ ಬರಬಹುದು

ನನಗೆ ಈ ಸಮಸ್ಯೆಗಳನ್ನು ಭರಿಸಲು ಸಾಧ್ಯವಾಗ್ತಿಲ್ಲ ಎಂದು ಕಣ್ಣೀರು ಹಾಕ್ತಾರೆ. ಜೈಲಿನಲ್ಲಿ ಇದೇ ರೀತಿ ಮುಂದುವರಿದರೆ ಭೀಕರ ಕಾಯಿಲೆ‌ ಬರಬಹುದು. ಕಾಯಿಲೆ‌ ಒಂದು ಬಾರಿ ಬಂದರೆ ಮತ್ತೆ ಹೋಗಲ್ಲ ಎಂದಿದ್ದಾರೆ.

ಪವಿತ್ರಾಗೌಡ ಅವರಿಂದ ಒಂದು ಪತ್ರ ನೀಡಲು ಅವಕಾಶ ನೀಡಿ ಎಂದು ನಾರಾಯಣ ಸ್ವಾಮಿ ಮನವಿ ಮಾಡಿದ್ದಾರೆ. ಬೇರೆ ಕೇಸಿನ ಆರೋಪಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ಕೇಸಿನ ಆರೋಪಿಗಳಿಗೆ ಮಾತ್ರ ಹಿಂಸೆ ಕೊಡುತ್ತಿದ್ದಾರೆ ಎಂದಿದ್ದಾರೆ.

ಒಂದು ಪತ್ರ ನೀಡಲು ಅವಕಾಶ

ಆರೋಪಿಯಿಂದ ಕೋರ್ಟ್ ಗೆ ಒಂದು ಪತ್ರ ನೀಡಲು ಅವಕಾಶ ನೀಡಬೇಕು ಎಂದು ವಕೀಲ ನಾರಾಯಣ ಸ್ವಾಮಿ ಮನವಿ ಮಾಡಿದ್ದಾರೆ.

ಇಂದು 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ರು. ಈ ವೇಳೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಭಾಗಿಯಾಗಿದ್ದ ಆರೋಪಿ ಪವಿತ್ರಾ ಗೌಡ ಜಡ್ಜ್​ ಮುಂದೆ ಕಣ್ಣೀರು ಹಾಕಿದ್ದಾರೆ.

ಪವಿತ್ರಾ ಗೌಡಗೆ ಕೊಲೆ ಬೆದರಿಕೆ

ನೈಜೀರಿಯಾ ಮೂಲದ ಆರೋಪಿಗಳ ವರ್ತನೆ ಬಗ್ಗೆ ಆರೋಪ ಮಾಡಲಾಗಿತ್ತು. ಕೋರ್ಟ್ ಸೂಚನೆ ಬಳಿಕ ನೈಜೀರಿಯಾ ಆರೋಪಿಗಳಿಗೆ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ನೈಜೀರಿಯಾ ಆರೋಪಿಗಳು ಪವಿತ್ರಾ ಗೌಡಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಸಾಕಷ್ಟು ಕಷ್ಟ ಅನುಭವಿಸ್ತಾ ಇದ್ದಾರೆ ಎಂದು ಪವಿತ್ರಾ ಗೌಡ ಪರ ವಕೀಲರ ವಾದ‌ ಮಂಡಿಸಿದ್ರು.

ವರದಿ: ಮುನಿರಾಜು ಕೆಜಿ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports