Asian Games 2026: ಭಾರತೀಯ ವನಿತೆಯರ ಕೊರಳಿಗೆ ಸತತ ಎರಡನೇ ಚಿನ್ನದ ಪದಕ! ಶ್ರೀಲಂಕಾ ವಿರುದ್ಧ ಹರ್ಮನ್​​ ಪಡೆಗೆ 147 ರನ್​​ಗಳ ಭರ್ಜರಿ ಗೆಲುವು | ಕ್ರೀಡಾ ಸುದ್ದಿ | ACTPnews

ಭಾರತ ಮಹಿಳಾ ಕ್ರಿಕೆಟ್ ತಂಡ


Last Updated:

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ಶ್ರೀಲಂಕಾವನ್ನು ಸೋಲಿಸಿ ಎರಡನೇ ಬಾರಿ ಚಿನ್ನದ ಪದಕವನ್ನು ಗೆದ್ದಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ
ಭಾರತ ಮಹಿಳಾ ಕ್ರಿಕೆಟ್ ತಂಡ

ಐಸಿಸಿ (ICC) ಮಹಿಳಾ ಟಿ20 ವಿಶ್ವಕಪ್‌(World Cup)ನಲ್ಲಿ ಭಾರತ (Indai) ಗೆಲ್ಲಲಿಲ್ಲ. ನಂತರ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ನಲ್ಲಿ ಚೆನ್ನಾಗಿ ಆಡುತ್ತಿದೆ. ಇತ್ತೀಚೆಗೆ ಏಷ್ಯಾ ಕಪ್ ( Asia Cup) 2026 ಫೈನಲ್‌ನಲ್ಲಿ ಶ್ರೀಲಂಕಾ(Sri Lanka)ವನ್ನು ಸೋಲಿಸಿ ಚಾಂಪಿಯನ್ ಆಯಿತು. ಈಗ ಜಪಾನ್‌(Japan)ನಲ್ಲಿ ನಡೆದ ಏಷ್ಯನ್ ಗೇಮ್ಸ್ (Asian Games) 2026 ಮಹಿಳಾ ಕ್ರಿಕೆಟ್ ಫೈನಲ್‌ನಲ್ಲೂ ಶ್ರೀಲಂಕಾವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಚಿನ್ನದ ಪದಕ (Gold Medal) ಗೆದ್ದಿದೆ. 

ಫೈನಲ್ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಸ್ಮೃತಿ ಮಂಧಾನ 75 ರನ್ ಹೊಡೆದು ಭಾರತದ ಪರ ಅತಿ ಹೆಚ್ಚು ಟಾಪ್ ಸ್ಕೋರರ್ ಆದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 69 ರನ್​ಗಳಿಗೆ ಆಲೌಟಾಯಿತು. ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿ ಮಿಂಚಿದರು.

ಭಾರತಕ್ಕೆ ಭರ್ಜರಿ ಆರಂಭ

ಭಾರತ–ಶ್ರೀಲಂಕಾ ಮಹಿಳಾ ಕ್ರಿಕೆಟ್ ಚಿನ್ನದ ಪದಕ ಪಂದ್ಯ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಿತು. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಒಟ್ಟಿಗೆ 99 ರನ್‌ಗಳ ಜೊತೆಯಾಟವಾಡಿದರು. ಶಫಾಲಿ 29 ಎಸೆತಗಳಲ್ಲಿ 48 ರನ್ ಹೊಡೆದರು. ಸ್ಮೃತಿ 45 ಎಸೆತಗಳಲ್ಲಿ 79 ರನ್ ಗಳಿಸಿದರು.

ಭಾರತದ ಬೌಲಿಂಗ್ ದಾಳಿಗೆ ಲಂಕಾ ಪತನ 

ಶ್ರೀಲಂಕಾಗೆ 217 ರನ್ ಗುರಿ ತುಂಬಾ ಕಷ್ಟವಾಗಿತ್ತು. ಭಾರತದ ಬೌಲಿಂಗ್ ಮುಂದೆ ಶ್ರೀಲಂಕಾ ಆಟ ನಡೆಯಲಿಲ್ಲ. ಪವರ್‌ಪ್ಲೇನಲ್ಲಿ ಶ್ರೀಲಂಕಾ ಎರಡು ವಿಕೆಟ್ ಕಳೆದುಕೊಂಡಿತು. ನಾಯಕಿ ಚಮರಿ ಅಥಪತ್ತು 29 ರನ್‌ಗೆ ಔಟಾದರೆ, ಯಾರೂ 11 ರನ್‌ಗಿಂತ ಹೆಚ್ಚು ಗಳಿಸಲಿಲ್ಲ. ಆದ್ದರಿಂದ ತಂಡ ಮತ್ತೆ ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ಶ್ರೀಲಂಕಾ 15.4 ಓವರ್‌ಗಳಲ್ಲಿ ಕೇವಲ 69 ರನ್‌ಗೆ ಆಲೌಟಾಯಿತು. ಭಾರತ 147 ರನ್‌ಗಳಿಂದ ಗೆದ್ದಿತು.

ಭಾರತದ ಗೆಲುವಿನ ನಾಯಕಿಯರು

ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಮಿಂಚಿದರು. ಇಬ್ಬರೂ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದರು. ಶಫಾಲಿ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಆದರೆ ಹೆಚ್ಚು ವಿಕೆಟ್ ಪಡೆದವರಲ್ಲಿ ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ಮುಖ್ಯರಾಗಿದ್ದರು. 2022ರಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಚಿನ್ನ ಗೆದ್ದಿತ್ತು. ಈಗಲೂ ಅವರ ನಾಯಕತ್ವದಲ್ಲೇ ಭಾರತ ಎರಡನೇ ಬಾರಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed