Pavithra Gowda: ದರ್ಶನ್​ ಗೆಳತಿಗೆ ಜೈಲಲ್ಲೇ ಕೊಲೆ ಬೆದರಿಕೆ, ಜಡ್ಜ್​ ಮುಂದೆಯೇ ಪವಿತ್ರಾ ಗೌಡ ಕಣ್ಣೀರು! ಅಸಲಿಗೆ ಆಗಿದ್ದೇನು? | | ACTPnews

News18


Last Updated:

ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಆರೋಪಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದು, ಕೊಲೆ ಆರೋಪ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಸಲಿಗೆ ಆಗ್ತಿರೋದೇನು?

News18
News18

ಬೆಂಗಳೂರು (ಸೆ.22): ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ1 ಆಗಿರೋ ಪವಿತ್ರಾ ಗೌಡಗೆ ಜೈಲೇ ನರಕವಾಗಿದೆ. ಜೈಲು ಸೇರಿ ವರ್ಷ ಕಳೆದಿದ್ದು, ಜಾಮೀನಿಗಾಗಿ ದರ್ಶನ್ ಗೆಳತಿ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಪವಿತ್ರಾಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ರು. ಈ ವೇಳೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಭಾಗಿಯಾಗಿದ್ದ ಆರೋಪಿ ಪವಿತ್ರಾ ಗೌಡ ಜಡ್ಜ್​ ಮುಂದೆ ಕಣ್ಣೀರು ಹಾಕಿದ್ದಾರೆ. ಜೈಲಿನಲ್ಲೇ ಪವಿತ್ರಾ ಗೌಡಗೆ ಕೊಲೆ ಬೆದರಿಕೆ ಹಾಕಿದ್ದು ಯಾರು?

ಪವಿತ್ರಾ ಗೌಡ ಕಣ್ಣೀರು

ಕೋರ್ಟ್​ನಲ್ಲಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ‌ ನಡೆಯಿತು. ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದಿದೆ ಎಂದು ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದ್ರು. ಈ ವೇಳೆ ನೈಜೀರಿಯಾ ಮೂಲದ ಆರೋಪಿಗಳ ವರ್ತನೆಗೆ ಬೇಸತ್ತ ಪವಿತ್ರಾ ಗೌಡ ಮತ್ತೆ ಪ್ರತ್ಯೇಕ ಬ್ಯಾರಕ್​ಗಾಗಿ ಕಣ್ಣೀರು ಹಾಕಿದ್ದಾರೆ.

ಪವಿತ್ರಾ ಗೌಡಗೆ ಕೊಲೆ ಬೆದರಿಕೆ

ನೈಜೀರಿಯಾ ಮೂಲದ ಆರೋಪಿಗಳ ವರ್ತನೆ ಬಗ್ಗೆ ಆರೋಪ ಮಾಡಲಾಗಿತ್ತು. ಕೋರ್ಟ್ ಸೂಚನೆ ಬಳಿಕ ನೈಜೀರಿಯಾ ಆರೋಪಿಗಳಿಗೆ ಜೈಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ನೈಜೀರಿಯಾ ಆರೋಪಿಗಳು ಪವಿತ್ರಾ ಗೌಡಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಸಾಕಷ್ಟು ಕಷ್ಟ ಅನುಭವಿಸ್ತಾ ಇದ್ದಾರೆ ಎಂದು  ಪವಿತ್ರಾ ಗೌಡ ಪರ ವಕೀಲರ ವಾದ‌ ಮಂಡಿಸಿದ್ರು.

ವಿಡಿಯೋ ಕಾನ್ಫೆರೆನ್ಸ್ ವೇಳೆ ಕಣ್ಣೀರು

ಇದೇ ವಿಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ವೇಳೆ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ಮತ್ತೆ 35 ಜನ ಇರುವ ಬ್ಯಾರಕ್ ನಲ್ಲಿಯೇ ಇರಿಸಿದ್ದಾರೆ. ದಯಮಾಡಿ ಪ್ರತ್ಯೇಕ ಬ್ಯಾರಕ್ ನೀಡಲು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಮನವಿ ಹಿನ್ನೆಲೆ, ಜೈಲಾಧಿಕಾರಿಗಳಿಗೆ ವರದಿ ನೀಡಲು ಕೋರ್ಟ್ ಸೂಚನೆ ನೀಡಿದ್ದು, ವರದಿ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಕೋರ್ಟ್ ತಿಳಿಸಿದೆ.

ಒಂದು ತೊಟ್ಟು ವಿಷ ಕೊಡಿಸಿ

ಪವಿತ್ರಾ ಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದ ಮಂಡಿಸಿದ್ದು,  ನಾವೇನಾದ್ರೂ ಪವಿತ್ರಾ ಗೌಡ ಭೇಟಿ ಮಾಡಲು ಹೋದ್ರೆ, ನನಗೆ ಈ ಹಿಂಸೆ ತಡೆಯಲು ಆಗ್ತಾ ಇಲ್ಲ. ಹೀಗಾಗಿ ಒಂದು ತೊಟ್ಟು ವಿಷ ಕೊಡಿಸಿ ಅಂತ ಕೇಳ್ತಾರೆ. ಜೈಲಾಧಿಕಾರಿಗಳು ತುಂಬಾ ಕೆಟ್ಟದಾಗಿ ನಡೆದುಕೊಳ್ತಾರೆ ಅಂತಾರೆ ಎಂದು ಪವಿತ್ರಾ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ.

ಪತ್ರ ನೀಡಲು ಅವಕಾಶ ನೀಡಿ

ನನಗೆ ಈ ಸಮಸ್ಯೆಗಳನ್ನು ಭರಿಸಲು ಸಾಧ್ಯವಾಗ್ತಿಲ್ಲ ಎಂದು ಪವಿತ್ರಾ ಕಣ್ಣೀರು ಹಾಕ್ತಾರೆ. ಜೈಲಿನಲ್ಲಿ ಇದೇ ರೀತಿ ಮುಂದುವರಿದ್ರೆ ಭೀಕರ ಕಾಯಿಲೆ‌ ಬರಬಹುದು. ಕಾಯಿಲೆ‌ ಒಂದು ಬಾರಿ ಬಂದರೆ ಮತ್ತೆ ಹೋಗಲ್ಲ. ಪವಿತ್ರಾ ಗೌಡ ಅವರಿಂದ ಒಂದು ಪತ್ರ ನೀಡಲು ಅವಕಾಶ ನೀಡಿ ಎಂದು ವಕೀಲರು ಮನವಿ ಮಾಡಿದ್ರು.

ಆರೋಪಿಗಳಿಗೆ ಹಿಂಸೆ ಕೊಡ್ತಿದ್ದಾರೆ

ಬೇರೆ ಕೇಸಿನ ಆರೋಪಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ, ಈ ಕೇಸಿನ ಆರೋಪಿಗಳಿಗೆ ಮಾತ್ರ ಹಿಂಸೆ ಕೊಡ್ತಾ ಇದ್ದಾರೆ. ಆರೋಪಿಯಿಂದ ಕೋರ್ಟ್ ಗೆ ಒಂದು ಪತ್ರ ನೀಡಲು ಅವಕಾಶ ನೀಡಬೇಕು. ಜೈಲಿನಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲ. ಪ್ರತ್ಯೇಕ ಸೆಲ್ ಇರುವ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಮನವಿ‌ ಮಾಡಿದ್ದಾರೆ. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed