ಮಾಡರ್ನ್ ಕವಿ ಮಂಜ್ಯಾ..
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಈ ಮೂಲಕ ಮಂಜ್ಯಾ ಮಾಡಿರೋದು ತಪ್ಪು ಅಂತ ಹೇಳಿದ್ದಾರೆ. ಹೀಗೆ ಹೇಳುವಾಗಲೇ ಮಾಡರ್ನ್ ಕವಿ ಮಂಜ್ಯಾ ಒಂದು ಪದ ಬಳಕೆ ಮಾಡ್ತಾರೆ.
ಅದು ಬೇರೆ ಏನೋ ಅಲ್ಲ. “ಅಣ್ಣ” ಅಂತೇ ಹೇಳ್ತಾರೆ. ಇದನ್ನ ಕೇಳಿದ ತಕ್ಷಣವೇ ಸುದೀಪ್ ಕೆರಳಿ ಕೆಂಡವಾಗುತ್ತಾರೆ. “ಅಣ್ಣ ಅಂತ ಕರೆಯುವ ತಮ್ಮನ್ನಿಗೆ ಕೆಲವು ಬೆಲೆ ಇರಬೇಕು” ಅಂತಲೇ ಹೇಳ್ತಾರೆ.
ಕಳೆದ 12 ಸೀಸನ್ನಿಂದ ಕೋಟಿ ಕೋಟಿ ಜನರ ಪ್ರೀತಿಯನ್ನ ಸಂಪಾದಿಸಿದ್ದೇವೆ. ಯಾವುದೋ ನಾಲ್ಕು ಜನರಿಗಾಗಿಯೇ ಅದನ್ನ ಕಳೆದುಕೊಳ್ಳಲು ನಾವು ಯಾರೂ ರೆಡಿ ಇಲ್ಲ.
ಈ ಸೀಸನ್ ಅಲ್ಲಿ ನಾಲ್ಕು ಜನ ಕಾಮನ್ ಮ್ಯಾನ್ ಇದ್ದಾರೆ. ಕಿರಣ್ ಶಾಸ್ತ್ರಿ, ಮಾಡರ್ನ್ ಮಹಾಕವಿ ಮಂಜ್ಯಾ, ಧನುಷ್ ಮಂಜುನಾಥ್ ಹಾಗೂ ಲಿಖಿತ್ ಗೊಂದಿ ಇದ್ದಾರೆ.
ಈ ನಾಲ್ಕು ಜನ ಅಗ್ನಿಪರೀಕ್ಷೆಯಲ್ಲಿ ಆಯ್ಕೆ ಆದವರು. 60 ಜನರಲ್ಲಿ ಕೊನೆಗೆ 10 ಜನ ಉಳಿದರು. ಅವರಲ್ಲಿ 6 ಜನ ಮನೆಗೆ ಹೋದರು. ಮೇಲೆ ಹೇಳಿದ ನಾಲ್ಕು ಜನ ದೊಡ್ಮನೆಗೆ ಬಂದರು.
ಆದರೆ, ಇವರಲ್ಲಿ ಕಿರಣ್ ಶಾಸ್ತ್ರಿ ಅಬ್ಬರಿಸಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಬಳೆ ಹಾಕಿಕೊಳ್ಳಿ ಅಂತಲೂ ತಾಂಡವ್ ರಾಮ್ ಹಾಗೂ ಗಗನ್ಗೆ ಹೇಳಿ ಬೈದಾಡಿದ್ದಾರೆ.
ಅವಿನಾಶ್ಗೂ ಕ್ಲಾಸ್?
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಮಹಾಕವಿ ಮಂಜ್ಯಾ ಅಂತೂ ಸೌಂದರ್ಯ ಶೆಟ್ಟಿ ಮೇಲೆ ಏರಿ ಹೋಗಿ ಅಬ್ಬರಿಸಿದ್ದಾರೆ. ಲಿಖಿತ್ ಮತ್ತು ಧನುಷ್ ಸೈಲೆಂಟ್ ಆಗಿಯೇ ಇದ್ದಾರೆ ನೋಡಿ.
ಮಾಡರ್ನ್ ಕವಿ ಮಂಜ್ಯಾಗೆ ಕ್ಲಾಸ್ ತೆಗೆದುಕೊಳ್ಳುವಾಗ ಆಸಿಯಾ ಮುಖದಲ್ಲಿ ಖುಷಿ ಕಾಣಿಸುತ್ತಿತ್ತು. ವೈಷ್ಣವಿ ವಿ.ಕೌಂಡಿನ್ಯ ಕೂಡ ಹ್ಯಾಪಿ ಫೀಲ್ ಅಲ್ಲಿಯೇ ಇದ್ದರು.
ದೊಡ್ಮನೆಯಲ್ಲಿರೋ ನಟ ಅವಿನಾಶ್ಗೂ ಇಲ್ಲಿ ಕ್ಲಾಸ್ ಇದಿಯಾ? ಸದ್ಯಕ್ಕೆ ಏನೂ ರಿವೀಲ್ ಆಗಿಲ್ಲ. ಪ್ರೋಮೋದಲ್ಲಿ ಎಲ್ಲೂ ಕಾಣಿಸಿಯೂ ಇಲ್ಲ.
ಆದರೆ, ಅವಿನಾಶ್ ಭಯಂಕರ ಸಿಟ್ಟಾಗಿದ್ದರು. ಅದೆಷ್ಟು ಅಂದ್ರೆ ಕೈಯಲ್ಲಿರೋ ನೀರಿನ ಬಾಟಲಿಯನ್ನೆ ಒಡೆದು ಹಾಕಿದ್ದರು. ಆ ರೀತಿನೇ ಅವಿನಾಶ್ ಇಲ್ಲಿ ವರ್ತಿಸಿದ್ದಾರೆ. ಹಾಗಾಗಿಯೇ ಸುದೀಪ್ ಅವಿನಾಶ್ ಅವರಿಗೆ ಹೇಗೆ ಹೇಳ್ತಾರೆ ಅನ್ನುವ ಕುತೂಹಲವೂ ಹೆಚ್ಚಾಗಿದೆ ಅಂತ ಹೇಳಬಹುದು.













